ಕೋತಗಿರಿ - ಕಿವಿಗೂಡುವ ಬೆಟ್ಟಗಳು

ಕೋತಗಿರಿ ಬೆಟ್ಟ ನೀಲಗಿರಿ ಬೆಟ್ಟ ಶ್ರೇಣಿಯಲ್ಲಿ ಅತಿ ದೊಡ್ಡ ಮೂರು ಬೆಟ್ಟಗಳಲ್ಲೊಂದು ಬೆಟ್ಟ. ಇದು ಇತರೆ ಎರಡು ಬೆಟ್ಟಗಳಾದ ಉದಕಮಂಡಲ ಮತ್ತು ಕುಣ್ಣೂರು ಗಳಿಗಿಂತ ಚಿಕ್ಕದಾದರೂ ಸೌಂದರ್ಯದಲ್ಲಿ ಇವೆರಡಕ್ಕಿಂತ ಕಮ್ಮಿಯೇನಿಲ್ಲ. ಇದು ನೀಲಗಿರಿಯ ಪ್ರಕೃತಿ ಸೌಂದರ್ಯದಲ್ಲಿ ಉತ್ಕೃಷ್ಟವಾಗಿದೆ. ಇದೇ ಜಾಗದಲ್ಲಿ "ರಾಲ್ಫ್ ಥಾಮಸ್ ಹಾಚ್ಕಿನ್ಸ್  ಗ್ರಿಫ್ಫಿತ್" ಎಂಬ ಕ್ರೈಸ್ತ ಪಾದ್ರಿಯ ಮಗ ವೇದವನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿದನೆಂದು ಪ್ರತೀತಿಯೂ ಇದೆ.

ಈ ಗಿರಿಧಾಮವು ಸಮುದ್ರಮಟ್ಟದಿಂದ 1793 ಮೀಟರ್ ಗಳಷ್ಟು ಎತ್ತರವಿದೆ ಎನ್ನಲಾಗಿದೆ. ಇದು ಪರ್ವತಾರೋಹಿಗಳಿಗೆ ಹೇಳಿ ಮಾಡಿಸಿದ ತಾಣ ಎನ್ನಲಾಗಿದೆ. ಬಹಳಷ್ಟು ಪರ್ವತಾರೋಹಿಗಳ ಜಾಡನ್ನು ನಾವು ಇಲ್ಲಿ ಕಾಣಬಹುದು. ಇಲ್ಲಿಂದ ಇತರ ನೀಲಗಿರಿ ಬೆಟ್ಟಗಳನ್ನು ತಲುಪಬಹುದಾಗಿದೆ. ಇನ್ನೂ ಕೆಲವು ಚಾರಣ ಪಥಗಳು ಜನರಹಿತವಾಗಿ ಹಾಗು ಜನಸಂಪರ್ಕದಿಂದ ದೂರವಾಗಿ ಉಳಿದಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ.  

ಪ್ರವಾಸಿ ಸ್ಥಳಗಳು

ಅತ್ಯಂತ ಜನಪ್ರಿಯ ಚಾರಣಪ್ರಿಯರ ಜಾಡು ಅಥವಾ ಮಾರ್ಗ ಎಂದರೆ ಕೋತಗಿರಿಯಿಂದ ಸೇಂಟ್ ಕ್ಯಾಥರೀನ್ ಜಲಪಾತದ ಕಡೆಗೆ ಕೊಂಡೊಯ್ಯುವುದು.  ಕೋತಗಿರಿಯಿಂದ 'ಕೊಡನಾಡು ಹಾದಿ' ಮತ್ತು  ಕೋತಗಿರಿಯಿಂದ 'ಲಾಂಗ್ವುಡ್ ಶೋಲಾ' ಹಾದಿ ಸಹ ಜನಪ್ರಿಯವಾಗಿವೆ. ಇನ್ನೂ ಕೆಲವು ಸಣ್ಣ ಹಾದಿಗಳುಂಟು. ಈ ಹಾದಿಗಳು ಬೆಟ್ಟಗಳು ಮತ್ತು ಹುಲ್ಲುಗಾವಲುಗಳನ್ನು ಬಳಸಿಕೊಂಡು ಹೋಗುವುದುಂಟು. ಒಂದೊಂದು ಹಾದಿಯೂ ನಿಮ್ಮನ್ನು ನೀಲಗಿರಿಯ ಒಳ ಹಾಗು ಹೊರಗಿನ ಸೌಂದರ್ಯವನ್ನು ಪರಿಚಯ ಮಾಡಿಕೊಡುತ್ತದೆ. ಇಲ್ಲಿನ ಪ್ರವಾಸೀ ತಾಣಗಳೆಂದರೆ ರಂಗಸ್ವಾಮಿ ಕಂಬ ಮತ್ತು ಶಿಖರ, ಕೊಡನಾಡು ವೀಕ್ಷಣಾ ತಾಣ, ಸೇಂಟ್ ಕ್ಯಾಥರೀನ್ ಜಲಪಾತ, ಎಲ್ಕ್ ಫಾಲ್ಸ್, ಜಾನ್ ಸಲಿವಾನ್ ಸ್ಮಾರಕ, ನೀಲಗಿರಿ ವಸ್ತು ಸಂಗ್ರಹಾಲಯ, ನೆಹರು ಪಾರ್ಕ್ ಮತ್ತು ಸ್ನೋವ್ಡೆನ್ ಶಿಖರ.

ಕೊತ್ತರ ಪರ್ವತ

ಕೋತಗಿರಿಯ ಬಗ್ಗೆ ಲಿಖಿತ ಉಲ್ಲೇಖನವು ಆಂಗ್ಲರ ಆಡಳಿತದ ನಂತರವೇ ಕಾಣಬಹುದು. ಕೋತಗಿರಿಯನ್ನು ಸ್ಥಳೀಯರು ಮೂಲನಿವಾಸಿಗಳಾದ ಕೊತ್ತರ ಬೆಟ್ಟ ಎಂದು ಕರೆಯುತ್ತಾರೆ, ಅದರಿಂದಲೇ ಕೋತಗಿರಿ ಎಂಬ ಹೆಸರು. ಕೊತ್ತರು ಸ್ವಾಭಾವಿಕವಾಗಿ ಸಂಕೋಚ ಪ್ರವೃತ್ತಿಯವರು ಹಾಗು ಇವರು ಉತ್ತಮ ಕುಶಲಕರ್ಮಿಯರೂ ಹೌದು. ಇವರು ಹೊರಗಿನ ಜನಗಳಿಂದ ಯಾವಾಗಲೂ ದೂರ ಉಳಿಯ ಬಯಸುತ್ತಾರೆ. ಈಗೀಗ ಇವರ ಜನಸಂಖ್ಯೆಯು ಕ್ಷೀಣವಾಗುತ್ತಿದೆ. ಇತ್ತೀಚಿಗಿನ ಒಂದು ಸಮೀಕ್ಷೆಯ ಪ್ರಕಾರ ಕೊತ್ತರು ಸಾವಿರದೊಳಗೆ ಇದ್ದಾರೆ ಎನ್ನಲಾಗಿದೆ.

ಕೋತಗಿರಿಯನ್ನು ತಲುಪುವುದು ಹೇಗೆ

ಕೋತಗಿರಿಯನ್ನು ತಲುಪಲು ಬಸ್ಸು ಮತ್ತು ರೈಲಿನ ವ್ಯವಸ್ಥೆಯಿದೆ.

ಕೋತಗಿರಿಯ ಪ್ರವಾಸ ಕೈಗೊಳ್ಳಲು ಸಕಾಲ

ಬೇಸಿಗೆಯಲ್ಲಿ ಭೇಟಿ ಕೊಟ್ಟರೆ ಉತ್ತಮ.

Please Wait while comments are loading...