ನೆಹರು ಪಾರ್ಕ್ ಎಂಬ ಉದ್ಯಾನವು ಕೋತಗಿರಿಯಿಂದ 3 ಕಿ.ಮೀ.ದೂರದಲ್ಲಿದೆ. ಪ್ರವಾಸಿಗರಿಗೆ ಮೋಜು ನೀಡುವ ಈ ಉದ್ಯಾನ ಖಾಸಗಿ ಒಡೆತನದ್ದು. ಆಟವಾಡಲು ಮೈದಾನವೊಂದಿದೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಇಲ್ಲಿ ಒಂದು ಸಭಾಭವನವಿದೆ. ಉದ್ಯಾನದ ಒಳಗೆ ಕೊತ್ತ ಬುಡಕಟ್ಟು ಜನಾಂಗದ ದೇವಾಲಯವಿದೆ. ಮಹಾತ್ಮ ಗಾಂಧಿಯವರ ಹೆಸರಿನ ಉದ್ಯಾನವೂ ಇಲ್ಲಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಇಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸುತ್ತಾರೆ. ಇದರಲ್ಲಿ ಇಲ್ಲಿ ಬೆಳೆಯುವ ಅಪರೂಪದ ಗುಲಾಬಿ ಹಾಗು ಇತರ ಸ್ಥಳೀಯ ಹೂಗಳನ್ನು ಕಾಣಬಹುದು ಹಾಗು ಇತ್ತೀಚೆಗೆ ತರಕಾರಿ ಪ್ರದರ್ಶನವನ್ನೂ ಕಾಣಬಹುದು.