Search
  • Follow NativePlanet
Share
ಮುಖಪುಟ » ಸ್ಥಳಗಳು» ತಿಂಗಳೂರು

ತಿಂಗಳೂರು: ಚಂದ್ರದೇವತೆಯಿಂದ ಆಶೀರ್ವದಿಸಲ್ಪಟ್ಟ ತಾಣ

2

ತಮಿಳುನಾಡಿನ ತಂಜಾವೂರಿನಿಂದ ಹದಿನೆಂಟು ಕಿ.ಮೀ ದೂರವಿರುವ ತಿಂಗಳೂರು ಕೈಲಾಸನಾಥರ್ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದ ಆವರಣದಲ್ಲಿ ಚಂದ್ರದೇವತೆಗೆ ಮುಡುಪಾಗಿರುವ ಗುಡಿಯೊಂದಿದೆ. ಪುರಾಣದ ಪ್ರಕಾರ ದಕ್ಷ ಪ್ರಜಾಪತಿಯ ಶಾಪದಿಂದ ಚಂದ್ರದೇವತೆಯನ್ನು ರಕ್ಷಿಸಿ ತಿಂಗಳೂರಿನಲ್ಲಿ ಸ್ಥಾಪಿಸಿದ್ದರಂತೆ. ಹಾಗೂ ತಮ್ಮ ಜಾತಕದಲ್ಲಿ ಚಂದ್ರನ ಸ್ಥಾನದ ದೋಷವಿರುವ ಜನರಿಗೆ ಸಹಾಯ ಮಾಡಲು ಆದೇಶಿಸಿದ್ದರಂತೆ. ಆ ಪ್ರಕಾರದಲ್ಲಿ ಜಾತಕದಲ್ಲಿ ಚಂದ್ರದೋಷವಿರುವ ಸಾವಿರಾರು ಜನರು ದೇಶ ವಿದೇಶಗಳಿಂದ ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಧಾರ್ಮಿಕ ಮಹತ್ವ:

ಹಿಂದೂ ಪುರಾಣದ ಪ್ರಕಾರ ಜಗತ್ತಿನಲ್ಲಿರುವ ಒಂಭತ್ತು ನವಗ್ರಹ ಸ್ಥಳಗಳಲ್ಲಿ ಈ ದೇವಾಲಯವೂ ಒಂದಾಗಿರುವುದರಿಂದ ಧಾರ್ಮಿಕ ಮಹತ್ವವನ್ನು ಪಡೆದುಕೊಂಡಿದೆ. ದೇವಾಲಯವು ಕಾವೇರಿ ನದಿಯು ಕವಲಾಗಿ ಮತ್ತೆ ಸೇರಿದಾಗ ಉಂಟಾದ ನಡುಗಡ್ಡೆಯಲ್ಲಿದೆ.

ತಲುಪುವ ಬಗೆ ಮತ್ತು ಪ್ರಯಾಣಿಸಬಹುದಾದ ಉತ್ತಮ ಸಮಯ

ತಿಂಗಳುರಿನಲ್ಲಿ ಯಾವುದೆ ವಿಮಾನ ಅಥವಾ ರೈಲು ನಿಲ್ದಾಣವಿಲ್ಲದಿದ್ದರೂ ರಸ್ತೆಯ ಮುಖಾಂತರ ಸುಲಭವಾಗಿ ತಲುಪಬಹುದು. ಹಲವು ನಗರಗಳಿಂದ ತಿಂಗಳೂರಿಗೆ ನಿರಂತರ ಸರ್ಕಾರಿ ಚಾಲಿತ ಬಸ್ ಸೌಲಭ್ಯ ಲಭ್ಯವಿರುತ್ತದೆ. ಇನ್ನೂ ಇಲ್ಲಿ ಪ್ರವಾಸ ಹೋಗಬಯಸುವಿರಾದರೆ ಚಳಿಗಾಲದ ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ ತಿಂಗಳುಗಳು ಉತ್ತಮ ಅವಧಿಯಾಗಿರುತ್ತದೆ.

ತಿಂಗಳೂರು ಪ್ರಸಿದ್ಧವಾಗಿದೆ

ತಿಂಗಳೂರು ಹವಾಮಾನ

ಉತ್ತಮ ಸಮಯ ತಿಂಗಳೂರು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಿಂಗಳೂರು

  • ರಸ್ತೆಯ ಮೂಲಕ
    ತಿರುವಾಯೂರು ಕುಂಬಕೋಣಂ ರಸ್ತೆಯಲ್ಲಿ ಸುಮಾರು ಆರು ಕಿ.ಮೀ. ದೂರದಲ್ಲಿದೆ ತಿಂಗಳೂರು. ತಾಂಜಾವೂರಿನಿಂದ ತಿಂಗಳೂರಿಗೆ ಸುಮಾರು ಇಪ್ಪತ್ತೈದು ಕಿ.ಮೀ. ದೂರವಿದ್ದು ನಿಯಮಿತ ಬಸ್ ಸಂಚಾರವಿದೆ. ತಿಂಗಳೂರಿಗೆ ಸುತ್ತಮುತ್ತಲ ಕಡೆಗಳಿಂದ ಆಗಮಿಸುವ ವಾಹನಗಳಿಗಾಗಿ ತಮಿಳುನಾಡು ಸರ್ಕಾರ ಉತ್ತಮ ರಸ್ತೆಗಳನ್ನು ನಿರ್ಮಿಸಿದೆ. ಅಲ್ಲದೇ ಚೆನ್ನೈ, ಕೊಯಮುತ್ತೂರು, ಮದುರೈ,ತಿರುವಾಯೂರು ಹಾಗೂ ಕುಂಬಕೋಣಂ ನಿಂದ ಸರ್ಕಾರಿ ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ. ಇತ್ತೀಚೆಗೆ ವೋಲ್ವೋ ಮತ್ತು ಡಿಲಕ್ಸ್ ಬಸ್ ಸಂಚಾರವನ್ನೂ ಆರಂಭಿಸಲಾಗಿದೆ. ಡಿಸೆಂಬರ್ ಫೆಬ್ರವರಿ ನಡುವೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಮುಂಚಿತವಾಗಿ ಬಸ್ ಟಿಕೆಟ್ ಖರೀದಿಸಿಟ್ಟುಕೊಳ್ಳುವುದು ಒಳಿತು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಅತ್ಯಂತ ಹತ್ತಿರದ ರೈಲು ನಿಲ್ದಾಣವೆಂದರೆ ಮೆಟ್ಟುಪಾಳ್ಯಂ ನಿಲ್ದಾಣ. ಅಲ್ಲಿಂದ ಸುಮಾರು 67 ಕಿ.ಮೀ ದೂರವಿರುವ ತಿಂಗಳೂರು ತಲುಪಲು ಬಸ್ ಹಾಗೂ ಟ್ಯಾಕ್ಸಿಗಳು ದೊರಕುತ್ತವೆ. ಮೆಟ್ಟುಪಾಳ್ಯಂ ನಿಲ್ದಾಣಕ್ಕೆ ಕೊಯಮುತ್ತೂರು ಹಾಗೂ ಕಾರಮಡೈ ನಿಂದ ರೈಲು ಸಂಪರ್ಕವಿದೆ. ತಿಂಗಳೂರಿಗೆ ಮೆಟ್ಟೂರು ಡ್ಯಾಂ ನಿಲ್ದಾಣದ ಮೂಲಕವಾಗಿಯೂ ತಲುಪಬಹುದು. ಇಲ್ಲಿಂದ ತಿಂಗಳೂರು 71 ಕಿ.ಮೀ. ದೂರವಿದೆ. ಮೆಟ್ಟೂರು ಡ್ಯಾಂ ನಿಲ್ದಾಣಕ್ಕೆ ಸೇಲಂ ಹಾಗೂ ಕೊಯಮುತ್ತೂರುಗಳಿಂದ ರೈಲು ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಯಮುತ್ತೂರಿನ ಪೀಲಮೇಡು ನಿಲ್ದಾಣ. ಅಲ್ಲಿಂದ ತಿಂಗಳೂರು ಸುಮಾರು 93 ಕಿ.ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದಲೇ ಖಾಸಗಿ ಟ್ಯಾಕ್ಸಿಗಳನ್ನು ಪಡೆದುಕೊಳ್ಳಬಹುದು. ಟ್ಯಾಕ್ಸಿ ಬಾಡಿಗೆ ಸುಮಾರು ಒಂದೂವರೆ - ಎರಡು ಸಾವಿರ ರೂಪಾಯಿಗಳು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri