ಹೊಗೇನಕಲ್ - ಹೊಗೆಯ ಕಲ್ಲುಗಳ ಸಂದಿನಲ್ಲೊಂದು ಜಲಪಾತ

ಹೊಗೇನಕಲ್, ಕಾವೇರಿ ನದಿಯ ತೀರದಲ್ಲಿರುವ ಒಂದು ಚಿಕ್ಕ ಹಳ್ಳಿ. ಇದು ತನ್ನ ಹೆಸರನ್ನು ಕನ್ನಡದ ಪದದಿಂದ ಪಡೆದುಕೊಂಡಿದೆ, ಹೊಗೆಯ ಅರ್ಥ ಸ್ಮೊಕ್ ಮತ್ತು ಕಲ್(ಕಲ್ಲು) ಅರ್ಥ ರಾಕ್, ಅದ್ದರಿಂದ ಇದನ್ನು "ಹೊಗೇನಕಲ್" "ಸ್ಮೋಕಿರಾಕ್" ಎನ್ನುತ್ತಾರೆ. ಈ ನದಿ ತೀರದ ಹಳ್ಳಿಯು ಬೆಂಗಳೂರಿಂದ ಸರಿ ಸುಮಾರು 150 ಕಿ.ಮೀ ದೂರದಲ್ಲಿದೆ ಮತ್ತು ಇದು ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ಗಡಿ ಪ್ರದೇಶವಾಗಿದೆ.

ಇದು ದೇಶೀಯ ಮತ್ತು ವಿದೇಶೀಯ ಪ್ರವಾಸಿಗರ ವಾರಾಂತ್ಯದ ನೆಚ್ಚಿನ ಪ್ರವಾಸಿತಾಣವಾಗಿದೆ. ಕಾವೇರಿಯ ಜುಳು ಜಳು ಶಬ್ದ, ನೀರಿನೊಡಲಲ್ಲಿ ದೊರೆಯುವ ಮೀನುಗಳು, ಪರಿಣಿತ ಅಂಗಮರ್ದನಗಾರರ (ಮಾಲೀಸುಗಾರರು)ನೈಸರ್ಗಿಕ ಗಿಡಮೂಲಿಕೆ ತೈಲದಿಂದ ಮಾಡುವ ಕಾಂತಿ ವೃದ್ದಿಸುವ ಮಸಾಜ್, ವಿಶೇಷ ತೈಲಗಳು, ಆಗಾತಾನೆ ನೀರಿನಿಂದ ತೆಗೆದು ಬೇಯಿಸಿದ ಮೀನು, ಪ್ರಾಚೀನಕಾಲದ ಮಸಾಜ್ ಮಾಡುವ ಕಲೆಯನ್ನು ಈಗಿನ ಪೀಳಿಗೆಯು ನಡೆಸಿಕೊಂಡು ಬಂದಿರುವುದು, ಇದೆಲ್ಲವು ಸೇರಿ ಹೊಗೇನಕಲ್ ನಿಮಗೆ ಒಂದು ಕುತೂಹಲದ ಅನುಭವ ನೀಡುತ್ತದೆ. ಹೊಗೇನಕಲ್ ಪ್ರವಾಸಿಗರಿಗೆ ಹೆಚ್ಚಿನ ಅನುಭವ ನೀಡುತ್ತದೆ, ಸಾಹಸ ಕ್ರೀಡೆಯನ್ನು ಬಯಸುವವರಿಗೆ ಜಲಪಾತದ ಹತ್ತಿರ ಇರುವ ನದಿಯಲ್ಲಿ ಈಜಬಹುದು ಆದರೆ ಇದು ನೋಡಿದಷ್ಟು ಸುಲಭವಲ್ಲ, ಪರಿಣಿತ ಈಜುಗಾರರ ಮಾತ್ರ ಪ್ರಯತ್ನಿಸಬೇಕು ಅಥವಾ ಕಾಲ್ನಡಿಗೆಯ ಮೂಲಕ ಮೇಲಗಿರಿ ಬೆಟ್ಟದ್ದಲ್ಲಿ ಪ್ರಯಾಣ ಮಾಡಬಹುದು. ಇದು ಕೇವಲ ಕಾಡಿನ ತಾಜ ಗಾಳಿಯಿಂದ ಉತ್ತೇಜಿತ ಅನುಭವ ನೀಡುವುದಲ್ಲದೆ ಅಚ್ಚ ಹಸಿರಿನ ಹಾಗು ಈ ಪ್ರದೇಶದ ಅಂದವನ್ನು ವೀಕ್ಷಿಸಬಹುದು. ಅನೇಕ  ನಿರ್ಮಾಪಕರು ತಮ್ಮ ಚಿತ್ರದ ಪ್ರಣಯದ ಹಾಡುಗಳ ಚಿತ್ರೀಕರಣಕ್ಕೆ ಈ ತಾಣವನ್ನು ಬಳಸುತ್ತಾರೆ.

ಆಕರ್ಷಣೆ - ಪ್ರಕೃತಿಯ ಮಡಿಲಿನಲ್ಲಿ

ಹೊಗೇನಕಲ್ಲಿನ ಒಂದು ಮುಖ್ಯ ಆಕರ್ಷಣೆ ಎಂದರೆ ಕಾವೇರಿ ನದಿಯಲ್ಲಿ ಹಾಯಿದೋಣಿ ಚಾಲನೆ. ಹಾಯಿದೋಣಿಯು ವೃತ್ತಾಕಾರದಲ್ಲಿದ್ದು ನೀರು ಮೇಲೆ ಬರದಂತೆ ಅದರ ಕೆಳಗೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಲಾಗಿದೆ. ಅಂಬಿಗನ ಜೊತೆ ಸೇರಿ ಕಾವೇರಿ ನದಿಯಲ್ಲಿ ಹಾಯಿದೋಣಿ ಸವಾರಿಯನ್ನು ಆನಂದಿಸಿ, ಇದು ನೋಡುವುದಕ್ಕೆ ಚಿಕ್ಕಾದಾದರೂ ಒಂದು ಹಾಯಿದೋಣಿಯು 8 ಜನರನ್ನು ಹೊತ್ತೊಯ್ಯಬಲ್ಲದು. ಆಹಾರ ಮತ್ತು ಸ್ಥಳೀಯ ಅಂಗಮರ್ದಕರಿಂದ ಅರೋಗ್ಯ ಚಿಲುಮೆ ಚಿಕಿತ್ಸೆ, ಸ್ಥಳೀಯ ಮಕ್ಕಳು ಕೇವಲ 5 ರೂಪಾಯಿಗೆ 30 ಅಡಿ ಎತ್ತರದಿಂದ ನದಿಗೆ ಧುಮುಕುವ ತಮ್ಮ ಪ್ರತಿಭೆಯನ್ನು ತೋರಿಸುವುದು, ಹೀಗೆ ಹತ್ತು ಹಲವಾರು ಆಕರ್ಷಣೆಗಳು ಸದಾ ಕಾಯುತ್ತಿರುತ್ತವೆ ನಿಮಗಾಗಿ. ಈ ಪ್ರದೇಶವು ಉತ್ತಮ ರಸ್ತೆ ಸಂಪರ್ಕ ಹಾಗು ವರ್ಷಪೂರ್ತಿ ಆಹ್ಲಾದಕರ ವಾತವರಣವನ್ನು ಹೊಂದಿದ್ದು, ಸದಾ ಕೈಬಿಸಿ ಕರೆಯುತ್ತಿರುತ್ತದೆ.

Please Wait while comments are loading...