ಪೆನ್ನಾಗರಂ ದಟ್ಟವಾದ ಕಾಡಿನ ಮದ್ಯದಲ್ಲಿರುವ ಒಂದು ಗ್ರಾಮ. ಹೊಗೇನಕಲ್ಲಿನಿಂದ ಸುಮಾರು 15 ಕೀ ಮೀ ದೂರದಲ್ಲಿದೆ ಹಾಗು ವಿಹಾರಕ್ಕೆಂದು ತೆರಳಲು ಯೋಗ್ಯವಾಗಿದೆ. ಹೊಗೇನಕಲ್ ಮತ್ತು ಪೆನ್ನಾಗರಂ ಅನ್ನು ಸೇರಿಸುವ ರಸ್ತೆಯು ಅಂಕು ಡೊಂಕಾಗಿದೆ.
ಈ ಒಂದು ವಿಹಾರದಲ್ಲಿ ರೇಷ್ಮೆ ಹುಳುಗಳ ಆಹಾರವಾದ ಮಲ್ಬೆರ್ರಿ ತೋಟಗಳು, ಹೊಳೆಯುವ ಬಣ್ಣದ ಟೆರ್ರಾಕೊಟ್ಟಾದಿಂದ ತಯಾರಿಸಿದ ಪ್ರತಿಮೆಗಳನ್ನು ಕಾಣಬಹುದು. ಇವುಗಳನ್ನು ಅಯನಾರ್ ಎಂದು ಸ್ಥಳೀಯರು ಕರೆಯುತ್ತಾರೆ. ಈ ಪ್ರತಿಮೆಗಳನ್ನು ಗ್ರಾಮದ ಜನತೆ ರಕ್ಷಕರೆಂದು ನಂಬುತ್ತಾರೆ. ಇಲ್ಲಿ ವಾರಂತ್ಯದಲ್ಲಿ ನಡೆಯುವ ವರ್ಣರಂಜಿತ ಉತ್ಸವವು ಪ್ರವಾಸಿಗರಿಗೆ ಮುದ ನೀಡುತ್ತದೆ.