Search
  • Follow NativePlanet
Share
ಮುಖಪುಟ » ಸ್ಥಳಗಳು » ತಿಂಗಳೂರು » ಹವಾಮಾನ

ತಿಂಗಳೂರು ಹವಾಮಾನ

ತಿಂಗಳೂರಿನಲ್ಲಿ ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಹವಾಮಾನ ತಂಪಾಗಿದ್ದು ಈ ಕಾಲ ಭೇಟಿಗೆ ಅತ್ಯಂತ ಸೂಕ್ತವಾಗಿದೆ. ಸಂಜೆ ಮತ್ತು ರಾತ್ರಿ ವೇಳೆ ಸಾಮಾನ್ಯಕ್ಕಿಂತಲೂ ಹೆಚ್ಚಿನ ಚಳಿ ಇರುವುದರಿಂದ ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಒಳಿತು.

ಬೇಸಿಗೆಗಾಲ

ಮಾರ್ಚ್ ಹದಿನೈದರಿಂದ ಜೂನ್ ಕೊನೆಯವರೆಗೂ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚಾಗಿರುವುದರಿಂದ ಈ ಕಾಲ ಭೇಟಿಗೆ ಸೂಕ್ತವಲ್ಲ. ಅಲ್ಲದೇ ಗಾಳಿಯಲ್ಲಿ ಆರ್ದ್ರತೆಯೂ ಹೆಚ್ಚಾಗಿರುತ್ತದೆ.

ಮಳೆಗಾಲ

ಜೂನ್ ಕೊನೆಯಿಂದ ಸೆಪ್ಟೆಂಬರ್ ವರೆಗೂ ಸಾಮಾನ್ಯದಿಂದ ಭಾರೀ ಮಳೆಯಾಗುವ ಈ ಕಾಲದಲ್ಲಿ ವಾತಾವರಣ ತಂಪಾಗಿದ್ದರೂ ಮಳೆಯ ಆರ್ಭಟದಿಂದ ಭೇಟಿ ಅಷ್ಟೊಂದು ಸೂಕ್ತವಲ್ಲ. ಅಲ್ಲದೇ ಜುಲೈ ಆಗಸ್ಟ್ ತಿಂಗಳಲ್ಲಿ ಚಂಡಮಾರುತದ ಪರಿಣಾಮವಾಗಿ ಕೆಲ ದಿನಗಳಲ್ಲಿ ಅತ್ಯಂತ ಹೆಚ್ಚಿನ ಮುಸಲಧಾರೆಯಾಗುತ್ತದೆ. ಅಕ್ಟೋಬರ್ ನವೆಂಬರ್ ನಲ್ಲಿಯೂ ಅಲ್ಪಪ್ರಮಾಣದ ಮಳೆಯಾಗುತ್ತದೆ.

ಚಳಿಗಾಲ

ತಿಂಗಳೂರಿನಲ್ಲಿ ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಹವಾಮಾನ ತಂಪಾಗಿದ್ದು ಈ ಕಾಲ ಭೇಟಿಗೆ ಅತ್ಯಂತ ಸೂಕ್ತವಾಗಿದೆ. ಸಂಜೆ ಮತ್ತು ರಾತ್ರಿ ವೇಳೆ ಸಾಮಾನ್ಯಕ್ಕಿಂತಲೂ ಹೆಚ್ಚಿನ ಚಳಿ ಇರುವುದರಿಂದ ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಒಳಿತು.