India
Search
  • Follow NativePlanet
Share
ಮುಖಪುಟ » ಸ್ಥಳಗಳು » ತಿಂಗಳೂರು » ತಲುಪುವ ಬಗೆ

ತಲುಪುವ ಬಗೆ

ತಿರುವಾಯೂರು ಕುಂಬಕೋಣಂ ರಸ್ತೆಯಲ್ಲಿ ಸುಮಾರು ಆರು ಕಿ.ಮೀ. ದೂರದಲ್ಲಿದೆ ತಿಂಗಳೂರು. ತಾಂಜಾವೂರಿನಿಂದ ತಿಂಗಳೂರಿಗೆ ಸುಮಾರು ಇಪ್ಪತ್ತೈದು ಕಿ.ಮೀ. ದೂರವಿದ್ದು ನಿಯಮಿತ ಬಸ್ ಸಂಚಾರವಿದೆ. ತಿಂಗಳೂರಿಗೆ ಸುತ್ತಮುತ್ತಲ ಕಡೆಗಳಿಂದ ಆಗಮಿಸುವ ವಾಹನಗಳಿಗಾಗಿ ತಮಿಳುನಾಡು ಸರ್ಕಾರ ಉತ್ತಮ ರಸ್ತೆಗಳನ್ನು ನಿರ್ಮಿಸಿದೆ. ಅಲ್ಲದೇ ಚೆನ್ನೈ, ಕೊಯಮುತ್ತೂರು, ಮದುರೈ,ತಿರುವಾಯೂರು ಹಾಗೂ ಕುಂಬಕೋಣಂ ನಿಂದ ಸರ್ಕಾರಿ ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ. ಇತ್ತೀಚೆಗೆ ವೋಲ್ವೋ ಮತ್ತು ಡಿಲಕ್ಸ್ ಬಸ್ ಸಂಚಾರವನ್ನೂ ಆರಂಭಿಸಲಾಗಿದೆ. ಡಿಸೆಂಬರ್ ಫೆಬ್ರವರಿ ನಡುವೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಮುಂಚಿತವಾಗಿ ಬಸ್ ಟಿಕೆಟ್ ಖರೀದಿಸಿಟ್ಟುಕೊಳ್ಳುವುದು ಒಳಿತು.