Search
 • Follow NativePlanet
Share

ಮಸಾಲೆ ಗಂಧ ಹೊತ್ತ ಗಾಳಿ ಸುಳಿದಾಡುವ ‘ತೇಣಿ’

27

ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ತೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ. ಈ ಹೊಸ ಜಿಲ್ಲೆಯು ಪೆರಿಯಾಕುಳಂ, ಉತ್ತಮಪಾಳ್ಯಂ ಮತ್ತು ಆಂಡಿಪಟ್ಟಿಗಳನ್ನು ಒಳಗೊಂಡಿದೆ. ಇವು ಕರಕುಶಲ ಕಲೆ ಮತ್ತು ಕೈಮಗ್ಗದ ವಸ್ತ್ರಗಳಿಗೆ ಹೆಸರುವಾಸಿಯಾದ ಊರುಗಳು. ತೇಣಿ ಮೃದುವಾದ ಟವಲ್ಲುಗಳು, ರಸಭರಿತ ಮಾವಿನಹಣ್ಣುಗಳು, ಉತ್ತಮ ಹತ್ತಿ ರೇಷ್ಮೆ ವಸ್ತ್ರಗಳು, ಏಲಕ್ಕಿ, ಕೆಂಪು ಮೆಣಸಿನಕಾಯಿ, ಕಾಫಿ ಬೀಜ ಮತ್ತು ಹಸಿರು ಟೀಗೆ ಪ್ರಸಿದ್ಧವಾದದ್ದು. ನೀವು ತೇಣಿಗೆ ಹೋದಾಗ ಇವುಗಳ ಖರೀದಿ ಮಾಡಲು ಮರೆಯದಿರಿ.

ತೇಣಿಯ ಸುತ್ತಮುತ್ತಲ ಪ್ರವಾಸಿ ತಾಣಗಳು- ಅಣೆಕಟ್ಟು, ದೇವಾಲಯಗಳು ಮತ್ತು ಜಲಪಾತಗಳ ತವರು

ತೇಣಿಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ವಾಗೈ, ಸೊತ್ತುಪ್ಪಾರಿ, ಷಣ್ಮುಗನಾಥೈ ಆಣೆಕಟ್ಟುಗಳು ಅತಿಸುಂದರವಾದ ಪ್ರವಾಸಿ ತಾಣಗಳು. ಇವಲ್ಲದೆ ಸುರಳಿ, ಕುಂಬಕ್ಕರೈ ಮತ್ತು ಚಿನ್ನ ಸುರುಳಿಯಂತಹ ಮನಮೋಹಕ ಜಲಪಾತಗಳಿವೆ. ಹಲವು ಪ್ರಸಿದ್ಧವಾದ ಹಾಗೂ ಪುರಾತನವಾದ ದೇವಾಲಯಗಳೂ ಸಹ ಇಲ್ಲಿವೆ.

ಭಾರತದ ಎಲ್ಲ ಮೂಲೆಗಳಿಂದಲೂ ಭಕ್ತಾದಿಗಳು ಕುಚನೂರು, ಮಾವೊತ್ತು, ತೀರ್ಥ ತೊಟ್ಟಿ, ಕೌಮಾರಿಯಮ್ಮನ್ ದೇವಾಲಯ, ದೇವದಾನಪಟ್ಟಿ ಕಾಮಾಕ್ಷಿ ಅಮ್ಮನ್ ದೇವಾಲಯ ಮತ್ತು ಬಾಲಸುಬ್ರಮಣ್ಯ ದೇವಾಲಯಗಳಿಗೆ ಬರುತ್ತಾರೆ. ಮೇಘಮಲೈ ಗಿರಿಶ್ರೇಣಿ, ಬೋಡಿ ಮೆಟ್ಟು ಮತ್ತು ಪರವಸ ಉಲಗಂ ವಾಟರ್ ಥೀಮ್ ಪಾರ್ಕ್ ಇವು ತೇಣಿಯ ಇನ್ನುಳಿದ ಪ್ರವಾಸಿ ಆಕರ್ಷಣೆಗಳು.

ಹಬ್ಬಗಳು, ಜಾತ್ರಾ ವಿಶೇಷಗಳು

ತೇಣಿಯಲ್ಲಿ ಪೊಂಗಲ್, ಶಿವರಾತ್ರಿ ಮತ್ತು ಮಾಸಿ ಮಾಘಂ ಹಬ್ಬಗಳನ್ನು ಅದ್ದೂರಿಯಾಗಿ ಮಾಡುತ್ತಾರೆ. ಈ ಹಬ್ಬಗಳನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಆಚರಿಸುತ್ತಾರೆ. ತೇಣಿಯ ಪ್ರಸಿದ್ಧವಾದ ಎತ್ತಿನಗಾಡಿ ಸ್ಪರ್ಧೆಯು ಈ ಹಬ್ಬದ ಅವಧಿಯಲ್ಲಿ ನಡೆಯುತ್ತದೆ.

ತೇಣಿಗೆ ವರ್ಷದ ಯಾವ ತಿಂಗಳಲ್ಲಿ ಬೇಕಾದರೂ ಹೋಗಬಹುದು. ಆದರೆ ಹಬ್ಬದ ಸಮಯದಲ್ಲಿ ನಿಮ್ಮ ಪ್ರವಾಸವನ್ನು ರೂಪಿಸಿಕೊಂಡರೆ ಹಬ್ಬದಲ್ಲಿ ಪಾಲ್ಗೊಳ್ಳಬಹುದು. ಈ ಸಮಯದಲ್ಲಿ ಸೆಖೆ ಹೆಚ್ಚಾಗಿರುವುದಿಲ್ಲ ಮತ್ತು ಹವಾಮಾನವು ಓಡಾಟಕ್ಕೆ ತಂಪಾಗಿ ಅನುಕೂಲವಾಗಿರುತ್ತದೆ. ಆದ್ದರಿಂದ ಇದು ತೇಣಿಗೆ ಭೇಟಿ ನೀಡಲು ಉತ್ತಮ ಸಮಯ.

ತೇಣಿ ಪ್ರಸಿದ್ಧವಾಗಿದೆ

ತೇಣಿ ಹವಾಮಾನ

ತೇಣಿ
30oC / 87oF
 • Patchy rain possible
 • Wind: SW 9 km/h

ಉತ್ತಮ ಸಮಯ ತೇಣಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತೇಣಿ

 • ರಸ್ತೆಯ ಮೂಲಕ
  ತೇಣಿಯು ತಮಿಳುನಾಡಿನ ಎಲ್ಲ ಪ್ರದೇಶಗಳಿಗೆ ತಲುಪುವ ಉತ್ತಮ ರಸ್ತೆಗಳನ್ನು ಹೊಂದಿದೆ. ಈ ಸ್ಥಳವನ್ನು ಎಲ್ಲ ಹತ್ತಿರದ ಸ್ಥಳಗಳಿಂದ ಸುಲಭವಾಗಿ ಬಸ್ಸುಗಳ ಮೂಲಕ ತಲುಪಬಹುದು. ತಮಿಳುನಾಡು ಸರ್ಕಾರದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ತೇಣಿ ಮತ್ತು ತಮಿಳು ನಾಡಿನ ಇತರ ಪ್ರದೇಶಗಳ ನಡುವೆ ಓಡಾಡುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತೇಣಿ ತಮಿಳುನಾಡಿನ ಒಂದು ಮುಖ್ಯ ಜಿಲ್ಲೆಯಾಗಿರುವುದರಿಂದ ಇಲ್ಲಿ ರೈಲ್ವೇ ನಿಲ್ದಾಣವಿದೆ. ಈ ನಿಲ್ದಾಣ ಮಧುರೈ ಮತ್ತು ಬೋಡಿಯ ನಡುವಿನ ಮುಖ್ಯ ಜಂಕ್ಷನ್. ಇಲ್ಲಿಂದ ರಾಜ್ಯದ ಎಲ್ಲ ಮುಖ್ಯ ನಗರಗಳಿಗೆ ರೈಲ್ವೇ ಸೌಲಭ್ಯವಿದೆ. ರೈಲಿನಲ್ಲಿ ಹೋಗುವುದು ಉತ್ತಮ ಆಯ್ಕೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತೇಣಿಗೆ ಹತ್ತಿರವಾದ ವಿಮಾನನಿಲ್ದಾಣ ಮಧುರೈನಲ್ಲಿದೆ. ಇದು ತೇಣಿಯಿಂದ 89 ಕಿ.ಮೀ ದೂರದಲ್ಲಿದೆ. ವಿಮಾನದಲ್ಲಿ ಹೋಗುವುದಾದರೆ ಮಧುರೈಗೆ ಹೋಗಿ ಅಲ್ಲಿಂದ ಟ್ಯಾಕ್ಸಿ ಅಥವ ಬಸ್ಸಿನಲ್ಲಿ ಈ ಸ್ಥಳಕ್ಕೆ ಹೋಗಬೇಕು.
  ಮಾರ್ಗಗಳ ಹುಡುಕಾಟ

ತೇಣಿ ಲೇಖನಗಳು

One Way
Return
From (Departure City)
To (Destination City)
Depart On
19 Sep,Thu
Return On
20 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Thu
Check Out
20 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Thu
Return On
20 Sep,Fri
 • Today
  Theni
  30 OC
  87 OF
  UV Index: 7
  Patchy rain possible
 • Tomorrow
  Theni
  27 OC
  80 OF
  UV Index: 7
  Moderate or heavy rain shower
 • Day After
  Theni
  24 OC
  76 OF
  UV Index: 7
  Moderate or heavy rain shower