ಕುಟ್ರಾಲಂ - ಧುಮ್ಮಿಕ್ಕುವ ಜಲಪಾತಗಳ ಮನೋಹರ ತಾಣ

ಒಂದೇ ಸ್ಥಳದಲ್ಲಿ ಹತ್ತಾರು ದೇವಾಲಯಗಳನ್ನು ನೋಡುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ಅದರಲ್ಲೂ ಧಾರ್ಮಿಕ ನಂಬುಗೆಗಳಿದ್ದವರಿಗೆ ಒಂದಿಷ್ಟು ಸಮಯ ಮನಸ್ಸಿಗೆ ಹಿತವೆನಿಸದೆ ಇರುವುದೇ ಇಲ್ಲ. ಅಂತಹ ಅದ್ಭುತ ದೇವಾಲಯಗಳ ಪ್ರದೇಶ ತಮಿಳುನಾಡಿನಲ್ಲಿದೆ.

ಕೇವಲ ಯಾತ್ರಿಗಳಿಗೆ ಮಾತ್ರವಲ್ಲದೇ ಪ್ರವಾಸಿಗರ ಮೈ ಮನ ತಣಿಸುವ ಒಂಬತ್ತಕ್ಕೂ ಹೆಚ್ಚು ಜಲಪಾತಗಳು ಕುಟ್ರಾಲಂ ನಗರದಲ್ಲಿದೆ. ಮಳೆಗಾಲದಲ್ಲಿನ ಈ ಪ್ರದೇಶದ ಸೌಂದರ್ಯವನ್ನಂತೂ ಅನುಭವಿಸಿಯೇ ತೀರಬೇಕು!

ಸಾಮಾನ್ಯವಾಗಿ 'ದಕ್ಷಿಣದ ಸ್ಪಾ' ಎಂದೇ ಕರೆಯಲ್ಪಡುವ ಕುಟ್ರಾಲಂ, ದಕ್ಷಿಣ ಭಾರತೀಯ ರಾಜ್ಯ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿನ ಒಂದು ಉಪನಗರವಾಗಿದೆ. ಪಶ್ಚಿಮ ಘಟ್ಟಗಳಲ್ಲಿ 167 ಮೀಟರ್ ಎತ್ತರದಲ್ಲಿ ಸ್ಥಿತವಾಗಿದೆ.  ಕುಟ್ರಾಲಂ, ಔಷಧೀಯ ಗುಣಗಳನ್ನು ಹೊಂದಿವೆಯೆಂದು ಹೇಳಲಾಗುವ ಜಲಪಾತಗಳು, ಹಲವಾರು ಆರೋಗ್ಯ ರೆಸಾರ್ಟ್ ಗಳು ಮತ್ತು ಚಿಕಿತ್ಸಾಲಯಗಳನ್ನು ಹೊಂದಿದ್ದು ಇಲ್ಲಿನ ಆರೋಗ್ಯಕರ ಸ್ಪಾ ಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲ್ಲಿನ ಹಲವಾರು ಜಲಪಾತಗಳು ಮತ್ತು ನದಿಗಳು ಅತ್ಯದ್ಭುತವಾದ ಸೌಂದರ್ಯವನ್ನು ಹೊಂದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಕುಟ್ರಾಲಂ ಮತ್ತು ಸುತ್ತಮುತ್ತಲಿರುವ ಪ್ರವಾಸೀ ಸ್ಥಳಗಳು

ತನ್ನ ಅದ್ಭುತ ಸೌಂದರ್ಯದ ಜೊತೆಗೆ, ಪಟ್ಟಣವು ಪೆರಾರುವಿ, ಚಿತ್ರರುವಿ, ಷೇನ್ ಭಾಗ್ ದೇವಿ ಜಲಪಾತ, ತೆನ್ ರುವಿ, ಐನ್ತರುವಿ, ಪಜತೊಟ್ಟ ಅರುವಿ, ಪಜಯ ಕೊಟ್ರಾಲ ಅರುವಿ ಮತ್ತು ಪುಲಿ ಅರುವಿ ಎಂಬ ಸುಂದರ ಜಲಪಾತಗಳಿಗೆ  ಹೆಸರುವಾಸಿಯಾಗಿದೆ. ಇಷ್ಟೇ ಅಲ್ಲದೆ, ಇಲ್ಲಿ ಕೆಲವು ಪ್ರಮುಖ ದೇವಾಲಯಗಳನ್ನೂ ಹೆಸರಿಸಬಹುದು. ಅವುಗಳೆಂದರೆ ತಿರುಕಟ್ರಾಲನಾದಾರ್ ಕೋವಿಲ್, ತಿರುಮಲೈ ಕೋವಿಲ್, ಕುಮಾರನ್ ಕೋವಿಲ್, ಕಾಶಿವಿಶ್ವನಾಥರ್ ಕೋವಿಲ್,  ದಕ್ಷಿಣಮೂರ್ತಿ ಕೋವಿಲ್, ಪಾಪನಾಶನಂ ಉಲಗಾಂಬಿಹೈ ಮತ್ತು ಸಿವನ್ ಕೋವಿಲ್ ಮತ್ತು ಅರಿಯಂಕಾವು ಲಯಪ್ಪನ್ ಕೋವಿಲ್ ಮೊದಲಾದವುಗಳು.

ಈ ಪ್ರದೇಶದ ಇತರ ಆಕರ್ಷಣೆಗಳೆಂದರೆ, ತೆರ್ಕುಮಾಲೈ ಎಸ್ಟೇಟ್, ಐಂತರುವಿ ಹತ್ತಿರದ ಬೋಟ್ ಹೌಸ್ ಮತ್ತು ಪಜಯ ಕುಟ್ರಾಲ ಅರುವಿ, ಪೆರಾರುವಿ ಹತ್ತಿರದ ಸ್ನೇಕ್ ಹೌಸ್ ಮತ್ತು ಅಕ್ವೇರಿಯಂ ಹಾಗೂ ಮಕ್ಕಳ ಉದ್ಯಾನಗಳನ್ನೂ ಇಲ್ಲಿ ಕಾಣಬಹುದು. ಸ್ಥಳೀಯರು ಈಗಲೂ ಬಳಸುವ ಪದ, ಕುಟ್ರಾಲಂ ಒಂದು ಆಂಗ್ಲ ಆವೃತ್ತಿಯ ಪದವಾಗಿದೆ. ಮುಕ್ತಿವೇಲಿ, ನನ್ನಾಗ್ರಂ, ಪಿತುರ್ ಕಾಂಡ, ತೀರ್ಥಪುರಂ, ತಿರುನಗರಂ ಮತ್ತು ವಸಂತಪೆರುರ್ ಹೀಗೆ ಹಲವಾರು ಇತರೆ ಹೆಸರುಗಳಿಂದ ಈ ಸ್ಥಳವನ್ನು ಕರೆಯಲಾಗುತ್ತದೆ.

ಕುಟ್ರಾಲಂ ಪಟ್ಟಣಕ್ಕೆ ಸಂಬಂಧಿಸಿದ ಅನೇಕ ಪ್ರಸಿದ್ಧ ಪುರಾಣಗಳಿವೆ. ಭಗವಾನ್ ಶಿವನು ಸಂತ ಅಗಸ್ತ್ಯಾರ್ (ಅಗಸ್ತ್ಯ) ನನ್ನು  ಕೈಲಾಸ ಪರ್ವತದಲ್ಲಿ ನಡೆಯುತ್ತಿರುವ ಆಕಾಶ ವಿವಾಹವನ್ನು ನೋಡಲು ನೆರೆದ ಭಕ್ತರನ್ನು ನಿಯಂತ್ರಿಸಲು ದಕ್ಷಿಣಕ್ಕೆ ಕಳುಹಿಸಿದ ಎಂದು ನಂಬಲಾಗಿದೆ. ಕುಟ್ರಾಲಂನಲ್ಲಿ ಬಹುತೇಕ ದೇವಾಲಯಗಳು ಶಿವ ದೇವಾಲಯಗಳಾಗಿವೆ ಮತ್ತು ಈ ದೇವಾಲಯಗಳನ್ನು ನಿರ್ಮಿಸಿರುವ ಚೋಳರು ಮತ್ತು ಪಾಂಡ್ಯ ರಾಜರ ಹಲವಾರು ಕಥೆಗಳನ್ನು ಇವು ಹೊಂದಿವೆ.

ಕುಟ್ರಾಲಂ ತಲುಪುವುದು ಹೇಗೆ?

ಕುಟ್ರಾಲಂ ಪ್ರದೇಶದಲ್ಲಿ ವಿಶ್ವ ದರ್ಜೆಯ ಹಲವಾರು ರೆಸಾರ್ಟ್ ಗಳು ನಿರ್ಮಾಣವಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಒಂದು ಜನಪ್ರಿಯ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಆದರೆ ಪ್ರವಾಸಿಗರು ವಿಶೇಷವಾಗಿ ರಜಾದಿನಗಳ ಸಮಯದಲ್ಲಿ ಮುಂಗಡ ಬುಕಿಂಗ್ ಮಾಡಿಕೊಳ್ಳುವುದು ಉತ್ತಮ. ಈ ಪಟ್ಟಣ ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೂ ಹತ್ತಿರವಾಗಿರುವುದರಿಂದ ಸುಲಭವಾಗಿ ಈ ರಾಜ್ಯಗಳ ಮೂಲಕ ಈ ಸ್ಥಳಕ್ಕೆ ಪ್ರವೇಶಿಸಬಹುದಾಗಿದೆ.

ತೂತುಕುಡಿ  ವಿಮಾನ ನಿಲ್ದಾಣವು ಕುಟ್ರಾಲಂ ಪಟ್ಟಣಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ ಮತ್ತು ಇದರ ದೂರ 85 ಕಿ.ಮೀ. ಈ ವಿಮಾನ ನಿಲ್ದಾಣವು, ಚೆನೈ, ಮಧುರೈ ಮತ್ತು ಕೊಯಮತ್ತೂರು ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ರೈಲ್ವೆ ನಿಲ್ದಾಣವೆಂದರೆ ಸೆಂಗೊಟ್ಟೈ ರೈಲ್ವೆ ನಿಲ್ದಾಣ.  ಆದಾಗ್ಯೂ, ತಿರುನಲ್ವೇಲಿ ಹತ್ತಿರದ ಪ್ರಮುಖ ರೈಲು ನಿಲ್ದಾಣವಾಗಿದೆ. ಕುಟ್ರಾಲಂಗೆ  ಕೇರಳ ಮತ್ತು ತಮಿಳುನಾಡಿನ ಹಲವಾರು ನಗರಗಳಿಂದ ಬಸ್ ಮೂಲಕವೂ ಪ್ರವೇಶಿಸಬಹುದಾಗಿದೆ.

ಕುಟ್ರಾಲಂ ತಲುಪಲು ಸೂಕ್ತ ಸಮಯ

ಕುಟ್ರಾಲಂ ಪಟ್ಟಣಕ್ಕೆ ಹೋಗಲು ಸೂಕ್ತ ಸಮಯ ಮಾರ್ಚ್ ಮತ್ತು ಜುಲೈ ತಿಂಗಳ ನಡುವಿನ ಮಾನ್ಸೂನ್ ಮತ್ತು ಚಳಿಗಾಲದ ಅವಧಿ. ಇಲ್ಲಿನ ಬೇಸಿಗೆ, ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುತ್ತದೆ, ಆದ್ದರಿಂದ ಸ್ಥಳದ ಪ್ರಮುಖ ಆಕರ್ಷಣೆಗಳಾದ ಜಲಪಾತಗಳೂ ಸಹ ಈ ಸಮಯದಲ್ಲಿ  ಬತ್ತಿ ಹೋಗುತ್ತವೆ. ಮಾನ್ಸೂನ್ ಸಮಯವು ಅತ್ಯಂತ ಆಹ್ಲಾದಕರವಾಗಿದ್ದು, ಚಳಿಗಾಲವೂ ಉತ್ತಮವಾಗಿರುತ್ತದೆ. ಮುಂಗಾರಿನ ತುಂತುರು ಮತ್ತು ತಂಗಾಳಿ, ವರ್ಷದ ಈ ಅವಧಿಯನ್ನು ಅತ್ಯಂತ ಆಕರ್ಷಣೀಯವನ್ನಾಗಿಸುತ್ತವೆ.

Please Wait while comments are loading...