ಸುಚಿಂದ್ರಂ - ಒಂದು ಪವಿತ್ರ ಯಾತ್ರಾ ಕ್ಷೇತ್ರ

ತಮಿಳುನಾಡು ರಾಜ್ಯದ ಕನ್ಯಾಕುಮಾರಿ ಜಿಲ್ಲೆಯ ಭಾಗವಾಗಿರುವ ಸುಚಿಂದ್ರಂ ಆಧ್ಯಾತ್ಮಿಕ ಹೊಳಪು ಹಾಗೂ ಪ್ರಶಾಂತತೆಯ ನೆಲೆವೀಡಾಗಿದ್ದು ಯಾತ್ರಾರ್ಥಿಗಳ ನಗರವಾಗಿದೆ. ತನುಮಲಯನ್ ದೇವಸ್ಥಾನದಿಂದಾಗಿ ಸುಚಿಂದ್ರಂ ಪ್ರಸಿದ್ದಿ ಪಡೆದುಕೊಂಡಿದೆ. ಪುರಾತನ ಕಾಲದಲ್ಲಿ ಸುಚಿಂದ್ರಂ ತಿರುವಾಂಕೂರು ಪಟ್ಟಣಕ್ಕೆ ಕೋಟೆಯಂತೆ ವರ್ತಿಸುತ್ತಿತ್ತು.

ಹಬ್ಬ ಜಾತ್ರೆಗಳ ಸಮ್ಮಿಲನ:

ಇಲ್ಲಿನ ಎರಡು ಹಬ್ಬಗಳು ಸುಪ್ರಸಿದ್ದ-ಮರ್ಕಳಿ ಮತ್ತು ಚಿತ್ತಿರೈ. ತಮಿಳುನಾಡಿನ ಎಲ್ಲ ಕಡೆಗಳಿಂದ ಮತ್ತು ಅಕ್ಕಪಕ್ಕದ ರಾಜ್ಯಗಳಿಂದಲೂ ಸಹ ಯಾತ್ರಾರ್ಥಿಗಳು ಈ ಹಬ್ಬಗಳಲ್ಲಿ ಪಾಲ್ಗೊಳ್ಳಲು ಸುಚಿಂದ್ರಂಗೆ ಬರುತ್ತಾರೆ. ಡಿಸೆಂಬರ್ ಅಥವಾ ಜನವರಿ ತಿಂಗಳ ಚಳಿಗಾಲದ ಸಮಯದಲ್ಲಿ ಮರ್ಕಳಿ ಹಬ್ಬವನ್ನು ಆಚರಸಲಾಗುತ್ತದೆ. ಒಂಭತ್ತು ದಿನಗಳ ವರೆಗೆ ಆಚರಿಸಲ್ಪಡುವ ಈ ಹಬ್ಬದ ಕೊನೆಯ ದಿನದಂದು ದೇವತೆಗಳ ಮೂರ್ತಿಯನ್ನು ರಥದಲ್ಲಿಟ್ಟು ಊರಿನ ತುಂಬ ಮೆರವಣಿಗೆ ಮಾಡಲಾಗುತ್ತದೆ. ಮತ್ತೊಂದು ಹಬ್ಬ ಚಿತ್ತಿರೈ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇರುತ್ತದೆ.

ದೇವಾಲಯ ಮತ್ತು ದೇವತೆಗಳ ನಗರಿ:

ತನುಮಲಯನ್ ದೇವಸ್ಥಾನ ಇಲ್ಲಿ ಪ್ರಸಿದ್ದವಾದರೂ ಕೂಡ ಇತರೆ ಸಾಕಷ್ಟು ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು. ದ್ವಾರಕಾ ಕೃಷ್ಣ ದೇವಸ್ಥಾನ, ಮುನುತಿತನಂಕೈ ದೇವಸ್ಥಾನ, ಆಸ್ರಮಮ್ ಸಾಸ್ತಾ ದೇವಸ್ಥಾನ, ಕರುಪಸಾಮಿ ಕೋಯಿಲ್, ತಮೌರನ್ ತಂಪುರತಿ ದೇವಸ್ಥಾನ, ಅಕ್ಕರೈ ದೇವಾಲಯ, ಆಸ್ರಮ ಔಸುಯ ಮತ್ತು ಆತ್ರಿ ಮುನಿವರ್ ಹೋಮ ಕುಂಡ, ಸ್ರಮಮರುಳಿಕು ಶ್ರೀ ಭುತತನ್ಮಾಡ್ ಅಂತಂಪುರ ಮೆಣಸಕಿ ಅಮ್ಮನ್ ಕೋವಿಲ್, ದಿ ಮುತರಮ್ಮನ್ ದೇವಸ್ಥಾನ ಮತ್ತು ಪೆರಂಬಲಮ್ ನಟರಾಜ ದೇವಸ್ಥಾನ.

ಈ ಎಲ್ಲ ದೇವಸ್ಥಾನಗಳ ಮಧ್ಯೆಯೂ ತನುಮಲಯನ್ ದೇವಸ್ಥಾನವು ತನ್ನ ಮೂರು ವಿಭಿನ್ನ ರೀತಿಯ ಹಿಂದೂ ದೇವತೆಗಳಿಂದಾಗಿ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.

ಸುಚಿಂದ್ರಂನ ಪ್ರಮುಖ ಆಕರ್ಷಣೆ ತನುಮಲಯನ್ ದೇವಸ್ಥಾನ ಮತ್ತು ಹತ್ತಿರದಲ್ಲಿಯೇ ಇರುವ ಐತಿಹಾಸಿಕ ಕೋಲಾಚಲ ನಗರ.

Please Wait while comments are loading...