Search
 • Follow NativePlanet
Share
ಮುಖಪುಟ » ಸ್ಥಳಗಳು» ದ್ವಾರಕಾ

ದ್ವಾರಕ : ಗುಜರಾತಿನ ಪವಿತ್ರ ಭೂಮಿ

40

ಸಂಸ್ಕೃತ ಸಾಹಿತ್ಯದಲ್ಲಿ ‘ದ್ವಾರಾವತಿ’ ಎಂದು ಹೆಸರಾದ ದ್ವಾರಕ ಭಾರತದ ಏಳು ಪುರಾತನ ನಗರಗಳಲ್ಲೊಂದು. ಇದು ಶ್ರೀ ಕೃಷ್ಣನ ಊರು.  ಇದು ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವ ‘ಚಾರ್ಧಾಮ್’ಗಳಲ್ಲೊಂದು ಮತ್ತು ‘ಸಪ್ತಪುರಿ’ಗಳಲ್ಲೊಂದು ಹೇಳಲಾಗುತ್ತದೆ.

ಪೌರಾಣಿಕ ಸಂಬಂಧ

ಶ್ರೀ ಕೃಷ್ಣನು ತನ್ನ ವೈರಿ ಮತ್ತು ಸೋದರಮಾವನಾದ ಮಥುರೆಯ ರಾಜನಾದ ಕಂಸನನ್ನು ಸಂಹರಿಸಿದನು. ಇದರಿಂದಾಗಿ ಕಂಸನ ಮಾವನಾದ ಜರಾಸಂಧನಿಗೂ ಯಾದವರಿಗೂ ಬದ್ಧವೈರತ್ವ ಉಂಟಾಯಿತು. ಕಂಸನ ಸಾವಿನ ಸೇಡನ್ನು ತೀರಿಸಿಕೊಳ್ಳಲು ಜರಾಸಂಧನು ಯಾದವರ ಮೇಲೆ 17 ಬಾರಿ ಆಕ್ರಮಣ ಮಾಡಿದನು. ಆಗ ಕೃಷ್ಣನು ಇದನ್ನು ತಪ್ಪಿಸುವ ಸಲುವಾಗಿ ತನ್ನವರನ್ನು ಕರೆದುಕೊಂಡು ಸೌರಾಷ್ಟ್ರ ಅಥವ ಗುಜರಾತಿನ ಗಿರಿನಾರ್ ಬೆಟ್ಟಗಳ ಪ್ರಾಂತ್ಯಕ್ಕೆ ಬಂದನು.

ಹೀಗೆ ಯುದ್ಧವನ್ನು ಬಿಟ್ಟು ಬಂದಿದಕ್ಕಾಗಿ ಕೃಷ್ಣನು ‘ರಣಚ್ಚೊಡ್ರಿ’ ಎನ್ನುವ ಹೆಸರನ್ನು ಪಡೆದನು. ಕೃಷ್ಣನು ಮಥುರೆಯನ್ನು ಬಿಟ್ಟು ದ್ವಾರಕೆಗೆ ಬಂದು ತನ್ನ ಸಾಮ್ರಾಜ್ಯಕ್ಕೆ ಬೆಯ್ಟ್ ದ್ವಾರಕ ಎನ್ನುವಲ್ಲಿ ಬುನಾದಿಯನ್ನು ಹಾಕಿದನು. ಇದು ಓಕಾ ಬಂದರಿನ ಸಮೀಪದಲ್ಲಿದೆ. ಇಲ್ಲಿ ಆತ ತನ್ನ ಜೀವನದ ಬಹುಭಾಗವನ್ನು ಕಳೆದನು. ಕೃಷ್ಣನ ಮರಣದ ನಂತರ ಪ್ರವಾಹದಲ್ಲಿ ಈ ನಗರವು ಮುಳುಗಿತು. ದ್ವಾರಕೆಯು 6 ಬಾರಿ ನೀರಿನಲ್ಲಿ ಮುಳುಗಿದೆ ಎಂದು ಹೇಳಲಾಗುತ್ತದೆ. ಈಗಿರುವುದು 7ನೇ ಬಾರಿ ನಿರ್ಮಿಸಲಾಗಿರುವ ದ್ವಾರಕ.

ಪವಿತ್ರ ನಗರ

ದ್ವಾರಕ ಎನ್ನುವ ಹೆಸರು ಸಂಸ್ಕೃತದ ‘ದ್ವಾರ್’ ಎನ್ನುವುದರಿಂದ ಬಂದಿದೆ. ಇದರರ್ಥ ಬಾಗಿಲು ಎಂದು ಮತ್ತು ಈ ಪದದ ಮಹತ್ವವೆಂದರೆ ಇದು ಬ್ರಹ್ಮನ ಬಾಗಿಲು ಎಂದು. ಈ ನಗರವು ವೈಷ್ಣವರಿಗೆ ಮಹತ್ವದ ಸ್ಥಳ.ಇಲ್ಲಿನ ಜಗತ್ಮಂದಿರದಲ್ಲಿ ಕೃಷ್ಣನು ‘ದ್ವಾರಕಾಧೀಶ’ನೆಂದು ಪೂಜಿಸಲ್ಪಡುತ್ತಾನೆ. ಶಿವನ 12 ಜ್ಯೋರ್ತಿಲಿಂಗಗಳಲ್ಲಿ ಒಂದಾದ ನಾಗೇಶ್ವರ ಜ್ಯೋರ್ತಿಲಿಂಗವು ದ್ವಾರಕೆಯ ಸಮೀಪದಲ್ಲಿದೆ.

ಬೆಯ್ಟ್ ದ್ವಾರಕ

ಬೆಯ್ಟ್ ದ್ವಾರಕದಲ್ಲಿ ಕೃಷ್ಣನು ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. ಈ ದ್ವೀಪವು ಗಲ್ಫ್ ಆಫ್ ಕುಚ್ನಲ್ಲಿದೆ. ಇದೊಂದು ಸಣ್ಣ ದ್ವೀಪ ಮತ್ತು ಓಖಾ ಮುಖ್ಯ ಬಂದರಾಗಿ ಅಭಿವೃದ್ಧಿಗೊಳ್ಳುವುದಕ್ಕೆ ಮುಂಚೆ ಇದು ಈ ಪ್ರದೇಶದ ಮುಖ್ಯ ಬಂದರಾಗಿತ್ತು. ದ್ವಾರಕೆಯಿಂದ ಈ ಪ್ರದೇಶಕ್ಕೆ ಹೋಗಲು ಓಖಾ ಬಂದರಿಗೆ ಹೋಗಿ ಅಲ್ಲಿಂದ ದೋಣಿಯಲ್ಲಿ ಹೋಗಬೇಕು.

ಈ ದ್ವೀಪದಲ್ಲಿ ಕ್ರಿಶ 3ನೇ ಶತಮಾನಕ್ಕೆ ಸೇರಿದ ಇತಿಹಾಸದ ಪಳೆಯುಳಿಕೆಗಳನ್ನು ಕಾಣಬಹುದು. ಬೆಯ್ಟ್ ದ್ವಾರಕದಲ್ಲಿ ಶಂಖಾಸುರನೆಂಬ ರಾಕ್ಷಸನು ವಿಷ್ಣುವು ಕೊಂದನೆಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಈ ದ್ವೀಪವನ್ನು ಬೆಯ್ಟ್ ಶಂಖೋಧರ ಎಂದು ಕೂಡ ಕರೆಯುತ್ತಾರೆ. ಬೆಯ್ಟ್ ದ್ವಾರಕದಲ್ಲಿ ಪ್ರವಾಸಿಗರು ಡಾಲ್ಫಿನ್ಗಳನ್ನು ಕಾಣಬಹುದು. ಇಲ್ಲಿಗೆ ಪಿಕ್ನಿಕ್ಗೆ ಅಥವ ಕ್ಯಾಪಿಂಗ್ ಮಾಡಲು ಮತ್ತು ಮ್ಯಾರೇನ್ ಎಕ್ಸ್ಕರ್ಷನ್ಗಳಿಗೆ ಕೂಡ ಹೋಗಬಹುದು.

ಭೂಗೋಳ

ದ್ವಾರಕ ನಗರವು ಗುಜರಾತಿನ ಜಮ್ನಾಗರ್ ಜಿಲ್ಲೆಯಲ್ಲಿದೆ. ಗುಜರಾತಿ ಪಶ್ಚಿಮದ ತುತ್ತತುದಿಯಲ್ಲಿದೆ.

ಪ್ರವಾಸಿ ಆಕರ್ಷಣೆಗಳು

ದ್ವಾರಕ ಮತ್ತು ಬೆಯ್ಟ್ ದ್ವಾರಕದ ಸುತ್ತಮುತ್ತ ಹಲವು ಪವಿತ್ರ ಸ್ಥಳಗಳಿವೆ. ಪ್ರತಿವರ್ಷವು ಇದು ಅಸಂಖ್ಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ದ್ವಾರಕಾಧೀಶ ದೇಗುಲ, ನಾಗೇಶ್ವ್ರ ಜ್ಯೋರ್ತಿಲಿಂಗ ದೇಗುಲ, ಮೀರಾಬಾಯಿ ಸ್ಮಾರಕ, ಶ್ರೀ ಕೃಷ್ಣನ ದೇವಾಲಯ, ಹನುಮಾನ್ ದೇವಾಲಯ ಮತ್ತು ಬೆಯ್ಟ್ ದ್ವಾರಕದಲ್ಲಿನ ಕಚೊರಿಯು ಇಲ್ಲಿನ ಕೆಲವು ಪ್ರಮುಖ ಧಾರ್ಮಿಕ ಸ್ಥಳಗಳು. ಈ ಎಲ್ಲ ಧಾರ್ಮಿಕ ಹಿನ್ನೆಲೆಯಿಂದಾಗಿ ದ್ವಾರಕ ನಗರವು ಹಿಂದೆ ಮತ್ತು ಮುಂದೆ ಕೂಡ ಗುಜರಾತಿನ ಪ್ರಮುಖ ಪ್ರವಾಸಿ ತಾಣವಾಗಿ ಉಳಿಯುತ್ತದೆ.

ದ್ವಾರಕಾ ಪ್ರಸಿದ್ಧವಾಗಿದೆ

ದ್ವಾರಕಾ ಹವಾಮಾನ

ಉತ್ತಮ ಸಮಯ ದ್ವಾರಕಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ದ್ವಾರಕಾ

 • ರಸ್ತೆಯ ಮೂಲಕ
  ಇದು ದ್ವಾರಕಾದಿಂದ ಜಮ್ನಾನಗರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿದೆ. ದ್ವಾರಕಕ್ಕೆ ಜಮ್ನಾನಗರ ಮತ್ತು ಅಹಮದಾಬಾದ್ನಿಂದ ಸುಲಭವಾಗಿ ಬಸ್ ಮೂಲಕ ತಲುಪಬಹುದು. ಗುಜರಾತಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ರಾಜ್ಯದ ಎಲ್ಲ ಮುಖ್ಯ ನಗರಗಳ ನಡುವೆ ಓಡಾಡುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ದ್ವಾರಕ ನಿಲ್ದಾಣವು ಅಹಮದಾಬಾದ್-ಓಖಾ ಬ್ರಾಡ್ಗೇಜ್ ರೈಲ್ವೇ ಮಾರ್ಗದಲ್ಲಿದೆ. ಇಲ್ಲಿಗೆ ರಾಜಕೋಟ್, ಅಹಮದಾಬಾದ್ ಮತ್ತು ಜಮ್ನಾನಗರಗಳಿಗೆ ರೈಲು ಸಂಪರ್ಕವಿದೆ. ಅಲ್ಲದೆ ಕೆಲವು ರೈಲುಗಳು ಸೂರತ್, ವಡೋದ್ರಾ, ಗೋವ, ಕರ್ನಾಟಕ, ಮುಂಬೈ ಮತ್ತು ಕೇರಳಗಳಿಗೂ ಹೋಗುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣ 137 ಕಿಮೀ ದೂರದಲ್ಲಿರುವ ಜಮ್ನಾನಗರದಲ್ಲಿದೆ. ಇಲ್ಲಿಂದ ದ್ವಾರಕಕ್ಕೆ ಟ್ಯಾಕ್ಸಿಯ ಮೂಲಕ ತಲುಪಬಹುದು. ಮುಂಬೈನಿಂದ ಜಮ್ನಾನಗರಕ್ಕೆ ನಿಯಮಿತವಾಗಿ ವಿಮಾನಗಳು ಹಾರಾಡುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Jan,Mon
Return On
18 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jan,Mon
Check Out
18 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jan,Mon
Return On
18 Jan,Tue