ಬೆಯ್ಟ್ದ್ವಾರಕ ಪ್ರತಿ ಧಾರ್ಮಿಕ ವ್ಯಕ್ತಿಯು ಪ್ರಶಂಸಿಸುವ ಸ್ಥಳ. ಇದೊಂದು ಸಣ್ಣ ದ್ವೀಪ. ಇದನ್ನು ಬೆಯ್ಟ್ ಶಂಖೋಧರ್ ಎಂದು ಕೂಡ ಕರೆಯುತ್ತಾರೆ. ಇದೊಂದು ಬೆಳೆಯುತ್ತಿರುವ ಬಂದರು. ಇಲ್ಲಿ ಡಾಲ್ಫಿನ್ಗಳಿವೆ. ಇಲ್ಲಿ ಪ್ರವಾಸಿಗರು ಕ್ಯಾಂಪಿಂಗ್ ಮತ್ತು ಮರೈನ್ ಎಕ್ಸ್ಕರ್ಷನ್ಸ್ಗಳನ್ನು ಮಾಡಬಹುದು. ಇಲ್ಲಿನ ಕೆಲವು ಮುಖ್ಯ ದೇವಾಲಯಗಳೆಂದರೆ 500 ವರ್ಷಗಳಷ್ಟು ಹಳೆಯದಾದ ವಲ್ಲಭಾಚಾರ್ಯನು ಕಟ್ಟಿದ ಕೃಷ್ಣನ ದೇವಾಲಯ, ಹನುಮಂತನ ಮಗನಾದ ಮಕರಧ್ವಜನ ವಿಗ್ರಹವಿರುವ ಹನುಮಂತನ ದೇವಾಲಯ, ಶ್ರೀ ರಾಮನ ದೇವಾಲಯ- ಕಚೊರಿಯು, ಪ್ರಸಿದ್ಧ ಸೂಫಿ ಸಂತ ಹಾಜಿ ಕಿರ್ಮಾನಿ ಪೀರ್ ಸಮಾಧಿ ಮತ್ತು ಗುರುದ್ವಾರ.