Search
  • Follow NativePlanet
Share
ಮುಖಪುಟ » ಸ್ಥಳಗಳು» ಜುನಾಗಡ್

ಜುನಾಗಡ್ : ಕೌತುಕಮಯ ತಾಣದಲ್ಲೊಂದು ಪಯಣ

36

ಗುಜರಾತಿನ ವೈವಿಧ್ಯತೆ ಹೊಂದಿರುವ ಕೆಲವೇ ಸ್ಥಳಗಳಲ್ಲಿ ಜುನಾಘಡ  ಕೂಡ ಒಂದು.ಗಿರ್ನಾರ್ ಶ್ರೇಣಿಯ ಬುಡದಲ್ಲಿರುವ ಈ ತಾಣಕ್ಕೆ ಜುನಾಗಡ್ ಎಂಬ ಹೆಸರು ಕ್ರಿ, ಪೂ 320 ರಲ್ಲಿ ಚಂದ್ರಗುಪ್ತ ಮೌರ್ಯ ಕಟ್ಟಿದ ಕೋಟೆ ಉಪಾರಕೋಟೆ  ಯಿಂದ  ಬಂತು. ಜುನಾಗಡ್ ಪದದ ಅರ್ಥ 'ಹಳೆಯ ಕೋಟೆ', ನಗರದ ಕೇಂದ್ರ ಬಿಂದು ಕೋಟೆ ಎಂದು ಅರ್ಥ.

ಇತಿಹಾಸ

ಜುನಾಗಡ್ ಪುರಾತನ ಕಾಲದ್ದಾಗಿದ್ದು, ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಚಕ್ರವರ್ತಿ ಕಾಲದಲ್ಲಿ ಕಂಡು ಬಂಡ ತಾಣ. ಸಕಾ ಆಳ್ವಿಕೆಯ ಕಾಲದ ಮಹಾಕ್ಷತ್ರಾಪ ರುದ್ರದಾಮನ್ ಕಾಲದ ಶಾಸನಗಳಲ್ಲಿ ಇದರ ಉಲ್ಲೇಖ ಕಾಣಬಹುದು. ಮೊಹಮದ್ ಬಹಾದ್ದೂರ್ ಖಾಂಜಿ ಕಾಲದಲ್ಲಿ ಈ ನಗರವನ್ನು ಸ್ಥಾಪಿಸಲಾಯಿತು. ನಂತರ ಅವನು ಬಾಬಿ ಕುಲದವರಿಗೆ ಇದನ್ನು ಆಳಲು ಅನುಮತಿ ನೀಡಿದನು. ಬ್ರಿಟಿಷರು ಭಾರತದ ವಿಭಜನೆ ಸಂದರ್ಭದಲ್ಲಿ ಜುನಾಗಡ್ ಅನ್ನು ರಾಜೋಚಿತ ರಾಜ್ಯವಾಗಿ ಘೋಷಿಸಿದರು.

ಧಾರ್ಮಿಕ ಸಂಬಂಧ

ಹಿಂದೂ, ಜೈನ, ಬೌದ್ಧ, ಮುಸ್ಲಿಂ ಎಲ್ಲಾ ಧರ್ಮದವರು ಈ ಸ್ಥಳಕ್ಕೆ ಬಂದು ಕೆಲವು ಗುರುತುಗಳನ್ನು ಬಿಟ್ಟು ಹೋದರು. ಕ್ರಿ ಪೂ 500  ಹಿಂದಿನ ಕಲ್ಲಿನಿಂದ ಬೌದ್ಧ ಜನಾಂಗದವರು ಕೊರೆದ ಗುಹೆಯನ್ನುಇಲ್ಲಿ ಕಾಣಬಹುದು ಮತ್ತು ಗುಹೆಯ ಗೋಡೆಗಳ ಮೇಲೆ ಹೂವಿನ ಕಲೆಗಳನ್ನು ಕಾಣಬಹುದು. ಅಶೋಕನ ರಾಜಶಾಸನಗಳಲ್ಲಿ 33 ಶಾಸನಗಳ ಪೈಕಿ 14 ಅನ್ನು ಉಪಾರಕೋಟೆಯಲ್ಲಿ ಕಾಣಬಹುದು.

ಬೌದ್ಧ ಮತದೊಂದಿಗೆ ಹಿಂದೂ ಮತ್ತು ಜೈನ ಮತದವರಿಗೂ ಕೂಡ ಜುನಾಗದ್ ಪ್ರಮುಖ ಸ್ಥಳವಾಗಿದೆ. ಈ ನಗರದ ತುದಿಯಲ್ಲಿರುವ ಗಿರ್ನಾರ್ ಪರ್ವತ ಹಿಂದೂ ಮತ್ತು ಜೈನ ಧರ್ಮದವರಿಗೆ ಪವಿತ್ರ ಸ್ಥಳವಾಗಿದೆ. ಈ ಪರ್ವತವನ್ನು ಹತ್ತಲು 9999 ಮೆಟ್ಟಿಲುಗಳಿವೆ. ತುದಿಯಲ್ಲಿರುವ ದೇವಾಲಯಕ್ಕೆ ಕಟ್ಟಲಾಗಿರುವ ಈ ಮೆಟ್ಟಿಲುಗಳು ಆಕಾಶಕ್ಕೆ ಏರಲು ಮೆಟ್ಟಿಲುಗಳನ್ನು ಕಟ್ಟಿರುವಂತೆ ಭಾಸವಾಗುತ್ತವೆ.

ಭೂಗೋಳ

ಜುನಾಗಡ್ ನೈಋತ್ಯ ದಲ್ಲಿ ಅರಬ್ಬೀ ಸಮುದ್ರ,ಉತ್ತರದಲ್ಲಿ ಪೋರಬಂದರ್ ಮತ್ತು ಪೂರ್ವದಲ್ಲಿ ಅರ್ಮೇಲಿಯನ್ನು ಹೊಂದಿದೆ. ಸೋನರಾಕ್ ಮತ್ತು ಕಲ್ವೋ ಎಂಬ ನದಿಗಳು ಇಲ್ಲಿ ಹರಿಯುತ್ತದೆ. ನರಸಿಂಹ ಮೆಹ್ತಾ ಸರೋವರ, ದಾಮೋದರ್ ಮತ್ತು ಸುದರ್ಶನ  ಸರೋವರಗಳನ್ನು ಇಲ್ಲಿ ಕಾಣಬಹುದು. ಸರ್ಕೇಶ್ವರ ಬೀಚ್ ಮತ್ತು ಮಾದವಪುರ ಬೀಚ್ ಗಳು ಇಲ್ಲಿನ ಬೀಚ್ ಗಳು.

ಹವಾಮಾನ

ಜುನಾಗಡ್ ಪ್ರದೇಶವು ಶುಷ್ಕ ವಾತಾವರಣದ ವಿಭಿನ್ನ ಹವಾಮಾನವನ್ನು ಹೊಂದಿದೆ. ಅರಬ್ಬೀ ಸಮುದ್ರ ಮತ್ತು ಕ್ಯಾಂಬೆ ಕೊಲ್ಲಿ ಇಲ್ಲಿನ ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ. ಬೇಸಿಗೆಯಲ್ಲಿ ಎಷ್ಟು ಬಿಸಿಲನ್ನು ಹೊಂದಿರುತ್ತದೆಯೋ ಹಾಗೆಯೇ ಚಳಿಗಾಲದಲ್ಲೂ ಅಷ್ಟೇ ಚಳಿ ಕಾಣಬಹುದು.

ಆಕರ್ಷಣೀಯ ಸ್ಥಳಗಳು

ನವ್ಗಾನ್ ಕುವೋ ಮತ್ತು ಆದಿ ಕಡಿ ವಾವ್ ಇದು ಪ್ರಾಚೀನ ಕಾಲದ ಮೆಟ್ಟಿಲುಗಳನ್ನು ಹೊಂದಿದ ಸಂಪೂರ್ಣಗೊಳ್ಳದ ಒಂದು ಜೋಡಿ ಬಾವಿ. ಇದು ಸಂಪೂರ್ಣಗೊಳ್ಳದಿದ್ದರೂ ಘನ ಬಂಡೆಯನ್ನು ನೀರು ಹುಡುಕಲು 170 ಅಡಿ ಕೆಳಭಾಗದವರೆಗೆ ಕೆತ್ತಲಾಗಿದೆ. ಏಷಿಯಾ ಸಿಂಹಗಳಿಗೆ ಹೆಸರುವಾಸಿ ಆಗಿರುವ ಘೀರ್ ರಾಷ್ಟ್ರೀಯ ಅಭಯಾರಣ್ಯ ಗುಜರಾತ್ ನ ಅತ್ಯಂತ ಜನಪ್ರಿಯ ಮೀಸಲು ಅರಣ್ಯವಾಗಿದೆ. ಇದರ ಜೊತೆಗೆ ಪನಿಯ ವನ್ಯಜೀವಿ ಅಭಯಾರಣ್ಯ ಮತ್ತು ಮಿತಿಯಾಲ ವನ್ಯಜೀವಿ ಅಭಯಾರಣ್ಯ ಕೂಡ ನೋಡಬೇಕಾದ ಸ್ಥಳ. ಐತಿಹಾಸಿಕ ಸ್ಥಳಗಳಾದ ರಾಜ ಅಶೋಕನ ಶಾಸನ, ಜಾಮಾ ಮಸೀದಿ ಕೂಡ ನೋಡಲೇಬೇಕಾದ ಸ್ಥಳಗಳು.

ಜುನಾಗಡ್ ಗೀರ್ ರಾಷ್ಟ್ರೀಯ ಉದ್ಯಾನವನ ಎಲ್ಲರ ಕೇಂದ್ರತಾಣವಾಗಿದ್ದು ಪ್ರವಾಸಿಗರನ್ನು ಗುಜರಾತಿಗೆ ಆಕರ್ಷಿಸಲು ಅದೇ ಮುಖ್ಯ ಕಾರಣವಾಗಿದೆ.

ಜುನಾಗಡ್ ಪ್ರಸಿದ್ಧವಾಗಿದೆ

ಜುನಾಗಡ್ ಹವಾಮಾನ

ಉತ್ತಮ ಸಮಯ ಜುನಾಗಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜುನಾಗಡ್

  • ರಸ್ತೆಯ ಮೂಲಕ
    ರಾಜಕೋಟೆ ಮತ್ತು ಮಹಾರಾಷ್ಟ್ರಾದ ನಗರಗಳಿಂದ ಬಸ್ಸಿನ ಸೌಲಭ್ಯವಿದೆ. ಉನಾ, ಅಹ್ಮದಾಬಾದ್, ಜಾಮ್ನಗರ್ ಮತ್ತು ವೆರವಲ್ ನಿಂದ ಸ್ಥಳೀಯ ಸಾರಿಗೆ ವ್ಯವಸ್ಥೆಗಳಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜುನಾಗಡ್ ನಲ್ಲಿ ರೈಲ್ವೇ ನಿಲ್ದಾಣವಿದೆ. ರಾಜ್ಯದಿಂದ ಮತ್ತು ಹತ್ತಿರದ ಇತರ ರಾಜ್ಯದ ನಗರಗಳಿಂದ ರೈಲಿನ ಸಂಪರ್ಕ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ವಿಮಾನ ನಿಲ್ದಾಣ ದೇಶೀಯ ವಿಮಾನ ನಿಲ್ದಾಣವಾದ 104 ಕಿ ಮೀ ಅಂತರದಲ್ಲಿರುವ ರಾಜಕೋಟ್ ವಿಮಾನ ನಿಲ್ದಾಣ. ರಾಷ್ಟ್ರೀಯ ಹೆದ್ದಾರಿ 8D,NH 27,SH26 ಮೂಲಕ ತಲುಪಬಹುದು. ಭಾರತದ ಇತರ ಮುಖ್ಯ ನಗರಗಳಿಗೆ ಸಂಪರ್ಕ ಸಾಧಿಸುವ ಜೆಟ್ ಏರ್ವೇಸ್ ಮತ್ತು ಏರ್ ಇಂಡಿಯಾ ವಿಮಾನಗಳ ಸೌಲಭ್ಯ ಇಲ್ಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat