Search
  • Follow NativePlanet
Share
ಮುಖಪುಟ » ಸ್ಥಳಗಳು» ಗಿರ್ ರಾಷ್ಟ್ರೀಯ ಉದ್ಯಾನ

ಗಿರ್ : ಏಷಿಯಾ ಸಿಂಹಗಳ ಏಕೈಕ ಮನೆ / ಕಾಡಿನ ರಾಜನ ರಕ್ಷಣೆಗೆ ನಿಂತ ಅರಣ್ಯ

22

ಗಿರ್ ರಾಷ್ಟ್ರೀಯ ಉದ್ಯಾನ, ಎಂದ ತಕ್ಷಣ ಮನಸ್ಸು ಶಾಲಾದಿನಗಳಿಗೆ ಹೋಗುತ್ತದೆ ಅಲ್ಲವೇ ? ಭಾರತದಲ್ಲೇ ಏಷಿಯನ್ ಸಿಂಹಗಳು ಕಂಡುಬರುವ ಅರಣ್ಯ- ಗಿರ್ ಅರಣ್ಯ ಎಂದು ಕಂಠಪಾಠ ಮಾಡುತ್ತಿದ್ದೆವು. ಆದರೆ ನಿಜ ಸಂಗತಿ ಏನೆಂದರೆ, ಈ ಗಿರ್ ಅರಣ್ಯವು ಒಂದು ರಕ್ಷಿತ ಅರಣ್ಯಪ್ರದೇಶ. ತನ್ನಲ್ಲಿರುವ ಅಪರೂಪದ ಪ್ರಾಣಿಸಂಕುಲಗಳಿಂದಾಗಿ ಏಷ್ಯಾದಲ್ಲೇ ಪ್ರಮುಖ ರಕ್ಷಿತ ಅರಣ್ಯಗಳ ಸಾಲಿಗೆ ಸೇರುತ್ತದೆ. ಇದು ವನ್ಯಜೀವಿಗಳ ಅಭಯಾರಣ್ಯವೂ ಹೌದು.

ಏಷಿಯಾ-ಸಿಂಹಗಳು, ಕಾಡು ಬೆಕ್ಕುಗಳು, ಸ್ಲಾಥ್ ಕರಡಿಗಳು, ಮೈ ಮೇಲೆ ಪಟ್ಟಿಗಳುಳ್ಳ ಕತ್ತೆಕಿರುಬಗಳು, ರಾಟಲ್ಸ್, ನಾಗರಹಾವು, ಸ್ವರ್ಣ ವರ್ಣದ ನರಿಗಳು, ಭಾರತೀಯ ಪಾಂ ಸಿವೆತ್, ಭಾರತೀಯ ಮುಂಗುಸಿಗಳು ಹಾಗು ಬೆಕ್ಕಿನ ಜಾತಿಯ ಪ್ರಾಣಿಗಳಾದ ಮರಳುಗಾಡಿನ ಬೆಕ್ಕು, ತುಕ್ಕಿನಂತಹ ಚಿಕ್ಕೆಗಳುಳ್ಳ ಬೆಕ್ಕುಗಳು ಈ ಅಭಯಾರಣ್ಯದಲ್ಲಿ ಕಂಡುಬರುತ್ತವೆ. ಇವಲ್ಲದೆ ಅಳಿವಿನ ಅಂಚಿನಲ್ಲಿರುವ ಸರಿಸೃಪಗಳಾದ ಮೊನಿಟರ್ ಹಲ್ಲಿಗಳು, ಮಾರ್ಶ್ ಮೊಸಳೆಗಳು ಹಾಗು ಭಾರತದ ವಿಶಿಷ್ಟ ನಕ್ಷತ್ರ ಆಮೆಗಳೂ ಸಹ ಇಲ್ಲಿ ರಕ್ಷಣೆ ಪಡೆದಿವೆ. ಏಷಿಯನ್ ಸಿಂಹಗಳ ಸಂತಾನೋತ್ಪತ್ತಿ ಮತ್ತು ಅವುಗಳ ಪೋಷಣೆಗಾಗಿ ವಿಶೇಷವಾದ ಗಮನ ನೀಡಲಾಗುತ್ತದೆ. ಹಾಗು ಅವುಗಳ ಪುನರ್ವಸತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ.

ನೀವು ಗಿರ್ನಾರ ಬೆಟ್ಟಗಳ ವೀಕ್ಷಣೆಗೆ ಹೋದಾಗ ಈ ಗಿರ್ ರಾಷ್ಟ್ರೀಯ ಉದ್ಯಾನವನ್ನೂ ನೋಡಿಬರಬಹುದು. ಏಕೆಂದರೆ ಇದು ಗಿರ್ನಾರ್ ಅರಣ್ಯದ ಸಮೀಪದಲ್ಲೇ ಇದೆ. ಇಲ್ಲಿನ ಪರಿಸರ ಸ್ವಲ್ಪ ವಿಭಿನ್ನವಾಗಿದೆ. ಎಂದೂ ಬತ್ತದ ನದಿಗಳಾದ ಹಿರನ್, ಶೆತ್ರುನ್ಜಿ, ದತರ್ದಿ, ಶಿಂಗೊಡಾ, ಮಚ್ಚುಂದ್ರಿ,ಗೋದಾವರಿ ಮತ್ತು ರಾವಲ್ ಗಳು ಇಲ್ಲಿನ ಪರಿಸರವನ್ನು ಸಮೃದ್ಧಗೊಳಿಸಿವೆ.

ಭೇಟಿಗೆ ಉತ್ತಮ ಸಮಯ

ಗಿರ್ ನಲ್ಲಿ ಚಳಿಗಾಲವು ನವೆಂಬರ್ನಿಂದ ಫೆಬ್ರವರಿ ವರೆಗೆ. ಈ ಕಾಲದಲ್ಲಿ ತಾಪಮಾನ 15  ಡಿ.ಸೆ ಮತ್ತು 7 ಡಿ.ಸೆ ಗಳ ವ್ಯಾಪ್ತಿಯಲ್ಲಿರುತ್ತದೆ.  ಇದನ್ನು ಗಿರ್ ರಾಷ್ಟ್ರೀಯ ಉದ್ಯಾನವನದ ಭೇಟಿಗೆ ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ.

 

ಗಿರ್ ರಾಷ್ಟ್ರೀಯ ಉದ್ಯಾನ ಪ್ರಸಿದ್ಧವಾಗಿದೆ

ಗಿರ್ ರಾಷ್ಟ್ರೀಯ ಉದ್ಯಾನ ಹವಾಮಾನ

ಉತ್ತಮ ಸಮಯ ಗಿರ್ ರಾಷ್ಟ್ರೀಯ ಉದ್ಯಾನ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಗಿರ್ ರಾಷ್ಟ್ರೀಯ ಉದ್ಯಾನ

  • ರಸ್ತೆಯ ಮೂಲಕ
    ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದ ನಗರವೆಂದರೆ, 60 ಕಿ.ಮಿ ದೂರದ ಜುನಾಘಡ. ಇಲ್ಲಿಂದ ಉದ್ಯಾನವನಕ್ಕೆ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗಿರ್ ದ ಹತ್ತಿರದ ರೈಲ್ವೆ ನಿಲ್ದಾಣವು ಜುನಾಘಡ ನಿಲ್ದಾಣವಾಗಿದ್ದು, ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಗಳಲ್ಲಿ ಉದ್ಯಾನವನಕ್ಕೆ ತೆರಳಬೇಕು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ದೇಶೀಯ ವಿಮಾನ ನಿಲ್ದಾಣವು ಕೆಶೊದ್ ನಿಲ್ದಾಣ. ಇದು ಗಿರ್ ರಾಷ್ಟ್ರೀಯ ಉದ್ಯಾನದಿಂದ 90 ಕಿ.ಮಿ ದೂರದಲ್ಲಿದೆ. ಮತ್ತೊಂದು ವಿಮಾನ ನಿಲ್ದಾಣ, ದಿಯು ವಿಮಾನ ನಿಲ್ದಾಣ. ಇದು ಗಿರ್ ದಿಂದ 100 ಕಿ.ಮಿ ದೂರದಲಿದ್ದು, ಈ ಎರಡೂ ನಿಲ್ದಾಣಗಳಿಂದ ಮುಂಬೈಗೆ ವಿಮಾನಗಳು ಲಭ್ಯವಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun