Search
 • Follow NativePlanet
Share
ಮುಖಪುಟ » ಸ್ಥಳಗಳು» ಗೊಂಡಾಲ್

ಗೊಂಡಾಲ್ - ಭಾರತದ ಏಕೈಕ ವಿಂಟೇಜ್ ಕಾರುಗಳ ರಾಜಧಾನಿ

19

ಗೊಂಡಾಲ್ ಒಮ್ಮೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಕಾಥೈವಾರ್ ಎಂಬ ಎಂಟು ರಾಜ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ರಾಜರುಗಳಿಗೆ ಕಾರುಗಳ ಮೋಡಿಯಾಗಿತ್ತು.  ಹಾಗೆಯೇ ಗುಜರಾತ್ ರಾಜ್ಯವು ಆ ಸಮಯದಲ್ಲಿ ಅತ್ತ್ಯುತ್ತಮ ಯೋಜಿತ ರಸ್ತೆಯ ವ್ಯವಸ್ತೆಯನ್ನೂ ಹೊಂದಿತ್ತು. ಠಾಕೂರ್ ಶ್ರೀ ಕುಂಭೋಜಿ ಮೆರಾಮಂಜಿ ಎಂಬ ರಾಜನು ಗೊಂಡಾಲ್ ರಾಜ್ಯವನ್ನು ಸ್ಥಾಪಿಸಿದನು ಮತ್ತು ನಮಗೆ ಸ್ವಾತಂತ್ರ್ಯ ಬರುವವರೆಗೂ ಆಳಿದ ಸರ್ ಭಗವತ್‍ಸಿಂಗ್‍ಜಿ ಅವರ ಕಾಲದಲ್ಲಿ ಈ ರಾಜ್ಯವು ಪ್ರಖ್ಯಾತಿಗೆ ಬಂದಿತು.  

ಈ ರಾಜನು ತನ್ನ ಮಗ ಯುವರಾಜ್ ಭೋಜ್‍ರಾಜಿ ಅವನಿಗೆ ನದಿಯ ಪಕ್ಕದಲ್ಲಿ ಕಟ್ಟಿಸಿದ ’ರಿವರ್ಸೈಡ್ ಪ್ಯಾಲೇಸ್’ ಪ್ರಸ್ತುತದಲ್ಲಿ ಒಂದು ಹೆರಿಟೇಜ್ ಹೋಟೆಲ್ ಅಗಿದೆ.  ಈ ಹೆರಿಟೇಜ್ ಹೋಟೇಲಿನಲ್ಲಿ ಪುರಾತನ ವಸಾಹತು ಶೈಲಿಯ ಪೀಠೋಪಕರಣ, ದೀಪಗುಚ್ಚಗಳು ಮತ್ತು ಇತರ ಅಲಂಕಾರಗಳು ನಿಜಕ್ಕೂ ವೀಕ್ಷಿಸಲು ಅತ್ಯಂತ ಯೋಗ್ಯವಾಗಿವೆ. ಈ ರಾಜಮನೆತನದವರಿಗೆ ಯಾವಾಗಲೂ ವಿಂಟೇಜ್ (ಪ್ರಾಚೀನತೆಯ) ಕಾರುಗಳನ್ನು ಸಂಗ್ರಹಣೆ ಮಾಡುವ ಮನೋಭಾವವಿತ್ತು.  

ಈಗಲೂ ಸಹ ಈ ವಿಂಟೇಜ್ ಕಾರುಗಳು ಪ್ರವಾಸಿಗಳಿಗೆ ಒಂದು ಆಕರ್ಷಣೆಯಾಗಿಬಿಟ್ಟಿದೆ.  ಹದಿನೇಳನೇ ಶತಮಾನದಲ್ಲಿ ನವ್‍ಲಖಾ ಎಂಬ ಅದ್ಭುತ ಅರಮನೆಯೊಂದನ್ನು ಇಲ್ಲಿ ಕಟ್ಟಲಾಯಿತು. ಈ ಅರಮನೆಯನ್ನು ಕಟ್ಟಲು ತಗುಲಿದ ವೆಚ್ಚ ಒಂಬತ್ತು ಲಕ್ಷ ರೂಪಾಯಿ ಯಾಗಿದ್ದರಿಂದ ಇದಕ್ಕೆ ನವ್‍ಲಖಾ ಎಂದು ಕರೆಯಲ್ಪಟ್ಟಿತು.   ಈ ಭವ್ಯ ಅರಮನೆಯಲ್ಲಿ ಅದ್ಭುತ ಕಲ್ಲಿನ ಕೆತ್ತನೆಗಳು, ಮೊಗಸಾಲೆ ಅಥವ ಝಾರೋಖಾಗಳು, ಸುಂದರವಾಗಿ ಕೆತ್ತಲಾದ ಕಮಾನುಗಳು, ಸುರುಳಿಯಾಕಾರದ ಮೆಟ್ಟಿಲುಗಳು ಇವೆ.

ಪ್ರಸ್ತುತ, ರಾಜಕುಟುಂಬದ ನಿವಾಸವಾದ ಹುಜೂರ್ ಅರಮನೆಯು ಪುರಾತನ ಪೀಠೋಪಕರಣ, ವರ್ಣಚಿತ್ರಗಳು, ತೋಟಗಳು ಮತ್ತು ಉದ್ಯಾನಗಳಿಂದ ತುಂಬಿಹೋಗಿವೆ. ಸ್ವಾಮಿ ನಾರಾಯಣ ಸಂಪ್ರದಾಯಕ್ಕೆ ಸೇರಿದ ದೇವಾಲಯ ಅಕ್ಷರ್ ಮಂದಿರ, ಗುಣಾತೀತನಂದ ಸ್ವಾಮಿಯವರ ಸಮಾಧಿ ಸ್ಥಳ, ಸುರೇಶ್ವರ್ ಮಹಾದೇವ್ ದೇವಾಲಯ, ಧಾರೇಶ್ವರ್ ಮಹಾದೇವ್ ದೇವಾಲಯ ಮತ್ತು ಭುವನೇಶ್ವರಿ ಮಂದಿರ ಇವುಗಳು ಕೆಲವು ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ.

ಗೊಂಡಾಲ್ ಪ್ರಸಿದ್ಧವಾಗಿದೆ

ಗೊಂಡಾಲ್ ಹವಾಮಾನ

ಉತ್ತಮ ಸಮಯ ಗೊಂಡಾಲ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗೊಂಡಾಲ್

 • ರಸ್ತೆಯ ಮೂಲಕ
  ಗೋಂಡಾಲಿಗೆ ಸಮೀಪದಲ್ಲಿರುವ ರಾಜ್‍ಕೋಟಿಗೆ ಗುಜರಾತ್ ರಾಜ್ಯದ ವಿವಿಧ ನಗರಗಳಿಗೆ ರಸ್ತೆಯ ಮೂಲಕ ಒಳ್ಳೆಯ ಸಂಪರ್ಕವಿದೆ. ರಾಜ್‍ಕೋಟಿನಿಂದ ಎಲ್ಲಾ ಪಟ್ಟಣ ಮತ್ತು ಹಳ್ಳಿಗಳಿಗೆ ಸಾರಿಗೆ ಬಸ್ಸಿನ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗೋಂಡಾಲನ್ನು ರಾಜ್‍ಕೋಟ್ ರೈಲ್ವೇ ನಿಲ್ದಾಣದ ಮೂಲಕ ತಲುಪಬಹುದು. ರಾಜ್‍ಕೋಟ್ ನಿಲ್ದಾಣವು ಪಶ್ಚಿಮ ರೈಲ್ವೇ ವಿಭಾಗದಲ್ಲಿ ಅಹ್ಮದಾಬಾದ್ - ಹಾಪಾ ಬ್ರಾಡ್‍ಗೇಜ್ ಮಾರ್ಗದಲ್ಲಿದೆ. ರಾಜ್‍ಕೋಟಿನಿಂದ ಪ್ರಮುಖ ಸ್ಥಳಗಳಾದ ಮುಂಬೈ, ಕೊಯಮತ್ತೂರ್, ದೆಹಲಿ, ಅಮೃತಸರ, ಭೋಪಾಲ್, ಕೋಲ್ಕತಾ ಮತ್ತು ಕೊಚಿನ್‌ಗಳಿಗೆ ರೈಲು ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗೋಂಡಾಲಿಗೆ ಹತ್ತಿರವಿರುವ ರಾಜ್‍ಕೋಟಿನಲ್ಲಿ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ ಮತ್ತು ಮುಂಬೈ‍ನಿಂದ ರಾಜ್‍ಕೋಟಿಗೆ ದೈನಂದಿನ ವಿಮಾನಗಳು ಚಲಿಸುತ್ತದೆ. ಪಟ್ಟಣದ ಮಧ್ಯಭಾಗವನ್ನು ವಿಮಾನ ನಿಲ್ದಾಣದಿಂದ ಬಸ್‍ಗಳ ಅಥವ ರಿಕ್ಷಾಗಳ ಮೂಲಕ ಸುಲಭವಾಗಿ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun