Search
 • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ಆಕರ್ಷಣೆಗಳು
 • 01ದ್ವಾರಕಾಧೀಶ ದೇವಾಲಯ

  ದ್ವಾರಕೆಯ ಈ ಪ್ರಮುಖ ದೇವಾಲಯವನ್ನು ‘ಜಗತ್ಮಂದಿರ’ ಎಂದು ಕೂಡ ಕರೆಯುತ್ತಾರೆ. ಐತಿಹ್ಯಗಳ ಪ್ರಕಾರ ಈ ಜಗತ್ಮಂದಿರ ಅಥವ ದ್ವಾರಕಾಧೀಶ ದೇವಾಲಯದ ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು ಮತ್ತು ಇದನ್ನು ಶ್ರೀ ಕೃಷ್ಣನ ಮರಿಮೊಮ್ಮಗನಾದ ವಜ್ರನಾಭನು ನಿರ್ಮಿಸಿದನು. ಇದನ್ನು ಮಹಾಭಾರತ ಯುದ್ಧಾ ನಂತರ ನೀರಿನಲ್ಲಿ...

  + ಹೆಚ್ಚಿಗೆ ಓದಿ
 • 02ಲೈಟ್ಹೌಸ್

  ದ್ವಾರಕೆಯ ಲೈಟ್ಹೌಸ್ ಅರೆಬಿಯನ್ ಸಮುದ್ರ ದಂಡೆಯಲ್ಲಿದೆ. ಇದು ಇಡೀ ನಗರ ಮತ್ತು ಅದರಾಚೆಯ ಸುಂದರ ನೋಟವನ್ನು ನೋಡಲು ಸೂಕ್ತವಾದ ಸ್ಥಳ. ಇದು ಪ್ರವಾಸಿಗರ ನೆಚ್ಚನ ತಾಣಗಳಲ್ಲಿ ಒಂದು. ಇದು ಸಾರ್ವಜನಿಕರಿಗಾಗಿ ಸಂಜೆ 4 ರಿಂದ 6ರವರೆಗೆ ತೆರೆದಿರುತ್ತದೆ.

  + ಹೆಚ್ಚಿಗೆ ಓದಿ
 • 03ನಾಗೇಶ್ವರ ಜ್ಯೋರ್ತಿಲಿಂಗ ದೇವಾಲಯ

  ನಾಗೇಶ್ವರ ಜ್ಯೋರ್ತಿಲಿಂಗ ದೇವಾಲಯವು ದ್ವಾರಕ ಮತ್ತು ಸೌರಾಷ್ಟ್ರದ ದ್ವೀಪವಾದ ಬೆಯ್ಟ್ ದ್ವಾರಕ ಮಾರ್ಗದ ಸಮುದ್ರ ತೀರದಲ್ಲಿದೆ. ಇದು ಪ್ರಪಂಚದ 12 ಜ್ಯೋರ್ತಿಲಿಂಗಗಳಲ್ಲಿ ಒಂದರ ದೇವಾಲಯ.  ಇಲ್ಲಿ ಗುಹಾಂತರ ಗರ್ಭಗುಡಿಯಿದ್ದು ಇದರಲ್ಲಿ ಶಿವನ ವಿಗ್ರಹವಿದೆ. ಇದರ ಸುತ್ತಲೂ ಹಸಿರು ಉದ್ಯಾನವನವಿದೆ. ಶಿವರಾತ್ರಿಯನ್ನು ಇಲ್ಲಿ...

  + ಹೆಚ್ಚಿಗೆ ಓದಿ
 • 04ಗೋಮತಿ ಘಾಟ್ ದೇವಾಲಯ

  ಗೋಮತಿ ಘಾಟ್ ದೇವಾಲಯ

  ದ್ವಾರಕ ನಗರವು ಹಲವು ಅದ್ಭುತ ಧಾರ್ಮಿಕ ಸ್ಥಳಗಳು ಮತ್ತು ನಿಗೂಢ ಐತಿಹ್ಯಗಳನ್ನು ಒಳಗೊಂಡಿದೆ. ಇವುಗಳನ್ನು ನೋಡಲು ಮತ್ತು ನಗರದ ಪಕ್ಷಿನೋಟವನ್ನು ನೋಡಲು ಇಲ್ಲಿನ ಗೋಮಾತಿ ನದಿಯಲ್ಲಿ ಪ್ರವಾಸಿಗರು ದೋಣಿಯಲ್ಲಿ ಕೂತು ಒಂದು ಸುತ್ತು ಬರಬಹುದು. ಇಲ್ಲಿನ ದಂಡೆಯಲ್ಲಿ ಶಿವ, ರಾಮ, ಕೃಷ್ಣ ಮತ್ತು ಸುಧಾಮನ ದೇವಾಲಯಗಳಿದೆ. ಸುಧಾಮ...

  + ಹೆಚ್ಚಿಗೆ ಓದಿ
 • 05ಬೆಯ್ಟ್ ದ್ವಾರಕ

  ಬೆಯ್ಟ್ದ್ವಾರಕ ಪ್ರತಿ ಧಾರ್ಮಿಕ ವ್ಯಕ್ತಿಯು ಪ್ರಶಂಸಿಸುವ ಸ್ಥಳ. ಇದೊಂದು ಸಣ್ಣ ದ್ವೀಪ. ಇದನ್ನು ಬೆಯ್ಟ್ ಶಂಖೋಧರ್ ಎಂದು ಕೂಡ ಕರೆಯುತ್ತಾರೆ. ಇದೊಂದು ಬೆಳೆಯುತ್ತಿರುವ ಬಂದರು. ಇಲ್ಲಿ ಡಾಲ್ಫಿನ್ಗಳಿವೆ. ಇಲ್ಲಿ ಪ್ರವಾಸಿಗರು ಕ್ಯಾಂಪಿಂಗ್ ಮತ್ತು ಮರೈನ್ ಎಕ್ಸ್ಕರ್ಷನ್ಸ್ಗಳನ್ನು ಮಾಡಬಹುದು. ಇಲ್ಲಿನ ಕೆಲವು ಮುಖ್ಯ...

  + ಹೆಚ್ಚಿಗೆ ಓದಿ
 • 06ಮೀರಾಬಾಯಿಯ ದೇವಾಲಯ

  ಮೀರಾಬಾಯಿಯ ದೇವಾಲಯ

  ಶ್ರೀ ಕೃಷ್ಣನ ಪರಮಭಕ್ತೆ ಮತ್ತು ಗಾಯಕಿ ಮೀರಾ ಬಾಯಿಯ ಈ ಪುಟ್ಟ ದೇವಾಲಯವು ಜಗತ್ ಮಂದಿರದ ಸಮೀಪದಲ್ಲಿರುವ ವಸತಿ ಪ್ರದೇಶದಲ್ಲಿದೆ. ಶ್ರೀಮಂತ ಮನೆತನಕ್ಕೆ ಸೇರಿದ ಮೀರಾಳನ್ನು ರಾಜಸ್ತಾನದ ರಾಜನೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮೀರಾಗೆ ಈ ದಾಂಪತ್ಯ ಜೀವನದಲ್ಲಿ ಸಂತೋಷವಿರಲಿಲ್ಲ. ಏಕೆಂದರೆ ಆಕೆ ಯಾವಾಗಲೂ ಕೃಷ್ಣನನ್ನೇ...

  + ಹೆಚ್ಚಿಗೆ ಓದಿ
 • 07ಗೋಪಿ ತಾಲಾಬ್

  ದ್ವಾರಕೆಯ ಪ್ರಸಿದ್ಧ ಪ್ರವಾಸಿ ತಾಣವಾದ ಇದೊಂದು ಸಣ್ಣ ಕೊಳ. ಇಲ್ಲೇ ಕೃಷ್ಣನು ಗೋಪಿಕಾ ಸ್ತ್ರೀಯರೊಡನೆ ರಾಸಲೀಲೆಯಾಡಿದ್ದ ಎಂದು ಹೇಳಲಾಗುತ್ತದೆ. ಇದು ದ್ವಾರಕ ನಗರದಿಂದ 20 ಕಿಮೀ ದೂರದಲ್ಲಿದೆ. ಈ ಕೊಳದ ಸುತ್ತಲೂ ಇರುವ ಮರಳು ನುಣ್ಣಗಿದ್ದು ಹಳದಿ ಬಣ್ಣದಲ್ಲಿದೆ. ಇದನ್ನು ಭಕ್ತಾದಿಗಳು ತಿಲಕವಿಡಲು ಬಳಸುತ್ತಾರೆ. ಈ ಕೊಳದ ಹಿಂದೆ...

  + ಹೆಚ್ಚಿಗೆ ಓದಿ
 • 08ಶಾರದಾಪೀಠ ಮಠದ ವಸ್ತುಸಂಗ್ರಹಾಲಯ

  ಶಾರದಾಪೀಠ ಮಠದ ವಸ್ತುಸಂಗ್ರಹಾಲಯ

  ಶಾರದಾಪೀಠ ಮಠವು ಹಿಂದೂಧರ್ಮ ಪುನರುತ್ಥಾನಕಾರರಾದ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ 4 ಮಠಗಳಲ್ಲಿ ಒಂದು. ಇದನ್ನು ದ್ವಾರಕ ಪೀಠ/ಕಾಳಿಕಾ ಪೀಠ ಎಂದೂ ಕರೆಯುತ್ತಾರೆ. ಇದು ದ್ವಾರಕ ದೇವಾಲಯದ ಆವರಣದೊಳಗಿದೆ. ಇಲ್ಲಿ ಶಂಕರಾಚಾರ್ಯರ ಬದುಕಿನ ಇತಿಹಾಸವನ್ನು ಹೇಳುವ ಚಿತ್ರಗಳನ್ನು ಗೋಡೆಯ ಮೇಲೆ ಚಿತ್ರಿಸಲಾಗಿದೆ. ಒಳಗಿನ ಗುಮ್ಮಟದ...

  + ಹೆಚ್ಚಿಗೆ ಓದಿ
 • 09ಭಲ್ಕಾ ತೀರ್ಥ ಮತ್ತು ದೆಹೊತ್ಸಾರ್ಗ್

  ಇದೊಂದು ಕುತೂಹಲಕಾರಿ ಭೇಟಿ ನೀಡಲೇಬೇಕಾದ ಪ್ರದೇಶ. ಸೊಮನಾಥದ ಉತ್ತರಕ್ಕೆ ಭಲ್ಕಾ ತೀರ್ಥ ಎನ್ನುವ ಈ ಜಾಗದಲ್ಲಿ ಕೃಷ್ಣನ ಹೆಬ್ಬೆಟ್ಟಿಗೆ ಬೇಟೆಗಾರನೊಬ್ಬನು ಕೃಷ್ಣನನ್ನು ಜಿಂಕೆಯೆಂದು ತಿಳಿದು ಬಾಣ ಬಿಟ್ಟ ಕಾರಣದಿಂದ ಕೃಷ್ಣ ಸಾವನ್ನಪ್ಪಿದನು. ಇಲ್ಲಿಗೆ ಕೃಷ್ಣನ ಅವತಾರ ಕೊನೆಯಾಯಿತು. ಈ ದೇವಾಲಯದ ಆವರಣದಲ್ಲಿ ಕೃಷ್ಣನ ನೆನಪಿಗೆ...

  + ಹೆಚ್ಚಿಗೆ ಓದಿ
 • 10ಗೋಪನಾಥ ಮಹದೇವ ದೇವಾಲಯ

  ಗೋಪನಾಥ ಮಹದೇವ ದೇವಾಲಯ

  ಗಲ್ಫ್ ಆಫ್ ಖಂಬಾತ್ನಲ್ಲಿ ಸುಂದರ ಶಿವಾಲಯವು ಈ ದಂಡೆಯಲ್ಲಿದೆ. ಇಲ್ಲಿ ಹಲವು ದ್ವೀಪಗಳಿವೆ. ಇವು ಈ ತಾಣವನ್ನು ಸುಂದರವಾಗಿಸಿದೆ. ಇಲ್ಲೇ ಪ್ರಸಿದ್ಧ ಗುಜರಾತಿ ಕವಿ ನರಸಿನ್ಹ ಮೆಹ್ತಾ ಆಧ್ಯಾತ್ಮಿಕ ಜ್ಞಾನವನ್ನು ಪಡೆದರು ಎಂದು ಹೇಳಲಾಗುತ್ತದೆ.

  + ಹೆಚ್ಚಿಗೆ ಓದಿ
 • 11ರುಕ್ಮಿಣಿ ದೇವಿ ದೇವಾಲಯ

  ಗೋಪುರದ ಹೊರಭಾಗದಲ್ಲಿ ಸುಂದರವಾದ ಗಜತಾರಾಸ್(ಆನೆಗಳು) ಮತ್ತು ನರತಾರಾಸ್ (ಮನುಷ್ಯ ವಿಗ್ರಹಗಳು) ಗಳನ್ನು ಕೆತ್ತಲಾಗಿದೆ. ಈ ದೇವಾಲಯವು ದ್ವಾರಕಾಧೀಶ ದೇಗುಲದಿಂದ 2 ಕಿಮೀ ದೂರದಲ್ಲಿದೆ. ಇದು ಶ್ರೀ ಕೃಷ್ಣನ ಮಡದಿಯಾದ ರುಕ್ಮಿಣಿಯ ದೇವಾಲಯ. ಇಲ್ಲಿ ರುಕ್ಮಿಣಿಯು ಮೂಲದೇವಾಲಯದಿಂದ ಹೊರಗುಳಿಯಲು ಒಂದು ಕಾರಣವಿದೆಯಂತೆ: ಒಮ್ಮೆ ಕೃಷ್ಣ...

  + ಹೆಚ್ಚಿಗೆ ಓದಿ
 • 12ಇಸ್ಕಾನ್ ಗೇಟ್ ಮತ್ತು ದೇವಾಲಯ

  ಇಸ್ಕಾನ್ ಗೇಟ್ ಮತ್ತು ದೇವಾಲಯ

  ನಗರಕ್ಕೆ ಪ್ರವೇಶ ಮಾಡುವಾಗಲೇ ಇಸ್ಕಾನ್ ಗೇಟನ್ನು ಕಾಣಬಹುದು. ಇಲ್ಲಿಂದ ಸ್ವಲ್ಪ  ಮುಂದಕ್ಕೆ ಇಸ್ಕಾನ್ ದೇವಾಲಯವಿದೆ. ಇದು ಕಲ್ಲಿನ ದೇಗುಲವಾಗಿದ್ದು ನಗರದ ದೇವಿ ಭವನ ರಸ್ತೆಯಲ್ಲಿದೆ. ಇದನ್ನು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್ನೆಸ್(ಇಸ್ಕಾನ್) ನಡೆಸುತ್ತಿದೆ. ಈ ದೇವಾಲಯದಲ್ಲಿ ಕೃಷ್ಣ-ರಾಧೆಯರ...

  + ಹೆಚ್ಚಿಗೆ ಓದಿ
 • 13ಘುಮ್ಲಿ

  ಘುಮ್ಲಿ

  ಘುಮ್ಲಿ ಬರ್ದಾ ಬೆಟ್ಟಗಳ ತಪ್ಪಲಿನಲ್ಲಿರುವ ಒಂದು ಸಣ್ಣ ಹಳ್ಳಿ. ಜೆತ್ವಾ ಸಾಲ್ ಕುಮಾರ್ ಎನ್ನುವವನಿಂದ ಕ್ರಿಶ 7 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಗುಜರಾತಿನ ಸುಂದರ ದೇವಾಲಯಗಳ ತವರು ಭೂಮಿಯಾಗುವುದಕ್ಕೂ ಮುಂಚೆ ಜೆತ್ವಾ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಸೊಲಂಕಿ ವಂಶದವರ...

  + ಹೆಚ್ಚಿಗೆ ಓದಿ
 • 14ಶ್ರೀ ಕೃಷ್ಣ ದೇವಾಲಯ, ಬೆಯ್ಟ್ ದ್ವಾರಕ

  ಇದು 500 ವರ್ಷಗಳಷ್ಟು ಹಳೆಯದಾದ ದೇವಾಲಯ. ಬೆಯ್ಟ್ ದ್ವಾರಕಕ್ಕೆ ತಲುಪಲು ಓಕಾ ಬಂದರು ಜೆಟ್ಟಿಗೆ ಬಂದು ಇಲ್ಲಿಂದ ದೋಣಿಯಲ್ಲಿ ಹೋಗಬೇಕು. ಇದು 5 ಕಿಮೀ ದೂರದಲ್ಲಿದೆ. ಈ ದೇವಾಲಯವನ್ನು ವಲ್ಲಭಾಚಾರ್ಯನು ಕಟ್ಟಿದನೆಂದು ಹೇಳಲಾಗುತ್ತದೆ. ಇಲ್ಲಿರುವ ವಿಗ್ರಹವನ್ನು ಸ್ವತಃ ರುಕ್ಮಣಿಯೇ ಮಾಡಿದಳೆಂದು ಹೇಳಲಾಗುತ್ತದೆ. ಮತ್ತು ಪ್ರಸಿದ್ಧ...

  + ಹೆಚ್ಚಿಗೆ ಓದಿ
 • 15ಹನುಮಾನ್ ದೇವಾಲಯ

  ಹನುಮಾನ್ ದೇವಾಲಯ

  ದಂಡಿವಾಲಾ ಹನುಮಾನ್ ದೇವಾಲಯವು ಕೃಷ್ಣನ ದೇವಾಲಯದ ಸಮೀಪದಲ್ಲಿದೆ. ಇದರ ಪ್ರಮುಖ ಆಕರ್ಷಣೆಯೆಂದರೆ ಈ ದೇವಾಲಯದಲ್ಲಿಇ ಹನುಮಂತನ ಮಗನಾದ ಮಕರಧ್ವಜನ ವಿಗ್ರಹವಿದೆ. ಹನುಮಂತನು ಲಂಕಾದಹನದ ಬಳಿಕ ನೀರಿನಲ್ಲಿ ಮುಳುಗೆದ್ದಾಗ ಬಿದ್ದ ಬೆವರಿನ ಹನಿಯೊಂದನ್ನು ಮೀನೊಂದು ನುಂಗಿತಂತೆ. ಆ ಮೀನಿನ ಹೊಟ್ಟೆಯಲ್ಲಿ ಈ ಮಕರಧ್ವಜನು ಹುಟ್ಟಿದನು....

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
17 Jan,Mon
Return On
18 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jan,Mon
Check Out
18 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jan,Mon
Return On
18 Jan,Tue