ತಿರುವತ್ತೂರು - ಪವಿತ್ರ ಭೂಮಿ.

ತಿರುವತ್ತೂರು ಈ ದೈವಿಕ ಮತ್ತು ಪವಿತ್ರ ಭೂಮಿಯ ಚಿಕ್ಕ ಪಂಚಾಯಿತಿ ಗ್ರಾಮವಾಗಿದ್ದು, ದಕ್ಷಿಣ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಶಾಂತವಾಗಿ ಮಲಗಿದೆ, ಹಿಂದೂ ಯಾತ್ರಿಕರು ಈ ಕ್ಷೇತ್ರವನ್ನು ನೊಡಲೇಬೇಕಾದ ಸ್ಥಳವಾಗಿದ್ದು, ಈ ಕ್ಷೇತ್ರವು 108 ದಿವ್ಯದೇಶಂ ಗಳಲ್ಲಿ ಒಂದಾಗಿದೆ.

ತಿರುವತ್ತೂರು ನಗರವು ಧಾರ್ಮಿಕ ಕ್ಷೇತ್ರವಲ್ಲದೆ, ಪ್ರವಾಸಿಗರ ಸ್ವರ್ಗವಾಗಿಯೂ ಪ್ರಸಿದ್ದವಾಗಿದೆ. ಈ ಕ್ಷೇತ್ರದ ಸೌಂದರ್ಯವನ್ನು ಅನುಭವಿಸಲು ಎರಡು ಕಣ್ಣು ಸಾಲದು. ಈ ನಗರವು ಪಹರೇಲಿ ಮತ್ತು   ಕೋತಾಲ್ ನದಿಗಳ ಮದ್ಯೆಯಿದ್ದು, ನಗರದ ಉದ್ದಕ್ಕೂ ಹರಿಯುತ್ತವೆ. ಮೂವತ್ತೂ ಮುಗಂನಲ್ಲಿ ಎರಡೂ ನದಿಗಳ ಸಂಗಮವಾಗಿದ್ದು, ಈ ಕ್ಷೇತ್ರಕ್ಕೆ ಇದೆ ಹೆಸರು ಬಂದಿದೆ ತಮಿಳಿನಲ್ಲಿ "ತಿರು" ಎಂದರೆ ಪವಿತ್ರವಾದದ್ದು, ತಮಿಳಿನಲ್ಲಿ "ವಟ್ಟ" ಎಂದರೆ ಸುತ್ತಲಿನ ಪರಿಸರ, ಮತ್ತು ತಮಿಳಿನಲ್ಲಿ "ಅರು" ಎಂದರೆ ನದಿ ಎಂದರ್ಥ. ಆದ್ದರಿಂದ ತಿರುವತ್ತೂರು ಎಂದರೆ ನದಿಗಳಿಂದ ಆವೃತವಾದ ಪವಿತ್ರ ಕ್ಷೇತ್ರ.

ಈ ಕ್ಷೇತ್ರದ ಪ್ರಧಾನ ಆಕರ್ಷಣೆ ಎಂದರೆ ಇಲ್ಲಿಯ ಪವಿತ್ರವಾದ ಆದಿಕೇಶವ ಪೆರುಮಾಳ್ ಸ್ವಾಮಿಯ ದೇವಸ್ಥಾನ. ಈ ದೇವಸ್ಥಾನವು ಈ ಕ್ಷೇತ್ರಕ್ಕೆ ದೈವಿಕ ಕಳೆಯನ್ನು ಕೊಟ್ಟಿದೆ. ಮಥುರ್ ತೂಗು ಸೇತುವೆ, ಸಂತ ಜೇಮ್ಸ್ ಚರ್ಚ್ (ಶತಮಾನದಷ್ಟು ಹಳೆಯದು), ಉದಯಗಿರಿ ಕೋಟೆ, ತಿರ್ ಪರುಪ್ಪ ಜಲಪಾತ (ಸುಮಾರು ಹತ್ತು ಕಿಲೋಮೀಟರ್ ದೂರ) ಈ ಕ್ಷೇತ್ರದ ಪ್ರಧಾನ ಆಕರ್ಷಣೆಗಳು ಹಾಗು ಪ್ರವಾಸಿಗರು ಆಗಿಂದಾಗೆ ಭೇಟಿ ಕೊಡುವ ಪ್ರಸಿದ್ದ  ಪ್ರವಾಸಿ ಸ್ಥಾನಗಳು ಕ್ಷೇತ್ರವು ಹಿಂದುಗಳಿಗೆ ಯಾತ್ರಾ ಸ್ತಳವಾಗಿರುವುದರಿಂದ, ದೇಶಾದ್ಯಂತ ರಸ್ತೆಯ ಮೂಲಕ ಸೇರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಕನ್ಯಾಕುಮಾರಿಯು ಹತ್ತಿರದ ರೈಲ್ವೆ ನಿಲ್ದಾಣವಾಗಿದೆ ಮತ್ತು ತಿರುವನಂತಪುರವು ಹತ್ತಿರದ ವಿಮಾನ ನಿಲ್ದಾಣ , ಚಳಿಗಾಲದಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ, ಯಾತ್ರಿಕರು ಮತ್ತು ಪ್ರವಾಸಿಗರು ಈ ಕಾಲದಲ್ಲಿ ಭೇಟಿ ನೀಡಲು ಆದ್ಯತ್ಯೆ ಕೊಡುತ್ತಾರೆ. ಬೇಸಿಗೆಯಲ್ಲಿ ಸುಡು ಬಿಸಿಲು ಮತ್ತು ಮಳೆಗಾಲದಲ್ಲಿ ಚಂಡಮಾರುತ ಬರುವುದರಿಂದ, ಇವೆರಡೂ ಕಾಲಗಳಲ್ಲೂ ಇಲ್ಲಿಗೆ ಬರುವುದು ಪ್ರಯಾಸಕರ.

Please Wait while comments are loading...