Search
 • Follow NativePlanet
Share
ಮುಖಪುಟ » ಸ್ಥಳಗಳು» ಅಂಬಸಮುದ್ರಂ

ಅಂಬಸಮುದ್ರಂ - ಸಮುದ್ರ ತಟದ ಸುಂದರ ಊರು

22

ಅಂಬಸಮುದ್ರಂ, ಹೆಸರು ಕೇಳಿ ಸಮುದ್ರತಟದ ಸುಂದರ ಊರೊಂದನ್ನು ಕಲ್ಪಿಸಿಕೊಂಡಿರಾ!....... ನಿಮಗೆ ನಿರಾಶೆ ಕಾದಿದೆ. ಹೆಸರಿಗೆ ತದ್ವಿರುದ್ದವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಸಿರಿನ ನಡುವೆ ಹುದುಗಿ ನವಿರಾಗಿ ಅಹ್ವಾನವೀಯುತ್ತಿದೆ ಅಂಬಸಮುದ್ರಂ ಎಂಬ ಪುಟ್ಟ ಪಟ್ಟಣ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪುಟ್ಟ ಊರಾದ ಅಂಬಸಮುದ್ರಂ ತನ್ನ ಅಪ್ರತಿಮ ನಿಸರ್ಗಸೌಂದರ್ಯ ತಾಣಗಳು ಹಾಗೂ ಧಾರ್ಮಿಕ ಸ್ಥಳಗಳೊಂದಿಗೆ ಆತ್ಮೀಯವಾಗಿ ಆಹ್ವಾನ ನೀಡುತ್ತಿದೆ. ಪಶ್ಚಿಮಘಟ್ಟಗಳ ಕಡಿದಾದ ಅಂಚಿನಿಂದ ತೊಡಗಿ ಅನತಿ ದೂರದಲ್ಲಿ ಹರಿಯುತ್ತಿರುವ ತಮಿರಬರಣಿ ನದಿಯವರೆಗೆ ಈ ಪಟ್ಟಣದ ವಿಸ್ತಾರ. ನದಿಯ ಆಚೆ ದಡದಲ್ಲಿದೆ ಕಲ್ಲಿಡೈಕುರುಚ್ಚಿ ಪಟ್ಟಣ. ಒಂದರ್ಥದಲ್ಲಿ ಇವೆರಡೂ ಒಂದೇ ನದಿಯ ಅಕ್ಕಪಕ್ಕದಲ್ಲಿರುವ ಅವಳಿ ಪಟ್ಟಣಗಳು. ತಮಿಳಿನಲ್ಲಿ ತಮಿರ ಎಂದರೆ ತಾಮ್ರ. ಈ ನದಿಯ ಪಾತ್ರದಲ್ಲಿ ತಾಮ್ರದ ಅಂಶವಿದೆ ಎಂಬ ನಂಬಿಕೆಯಿಂದ ಈ ನದಿಗೆ ತಮಿರಬರಣಿ ಎಂಬ ಹೆಸರು ಬಂದಿದೆ.

ಅಂಬಸಮುದ್ರಕ್ಕೆ ವಿಲಂಕುರುಚ್ಚಿ ಎಂಬ ಹೆಸರೂ ಇದೆ. ಇಂದು ಶಾಸ್ತ್ರೀಯ ಸ್ಥಾನಮಾನ ದೊರಕಿರುವ ತಮಿಳು ಭಾಷೆಗೆ ಸುಮಾರು ಸಾವಿರ ವರ್ಷಗಳ ಹಿಂದೆಯೇ ಅಪಾರ ಕೊಡುಗೆ ನೀಡಿದ್ದ ಸಂತ ಅಗಸ್ತಿಯರ್ ಸಹಾ ಇದೇ ಊರಿನವರು.  ಪಾಪನಾಸಂ ಪಾಪನಾಸರ್ ದೇವಾಲಯ, ಮೆಲಸೇವಲ್ ನವನೀತಕೃಷ್ಣನ್ ದೇವಾಲಯ, ಮೆಲಸೇವಲ್  ಮೆಗಲಿಂಗೇಶ್ವರ ದೇವಾಲಯ, ಮೆಲಸೇವಲ್ ವೇಣುಗೋಪಾಲಸ್ವಾಮಿ ದೇವಾಲಯ ಮೊದಲಾದ ಇತಿಹಾಸಪ್ರಸಿದ್ಧ ದೇವಾಲಯಗಳ ತವರೂರಾದ ಅಂಬಸಮುದ್ರಂನಲ್ಲಿ ಹಲವಾರು ರಮಣೀಯ ನಿಸರ್ಗತಾಣಗಳಿಗೂ ಇವೆ. ಮರದ ಸೂಕ್ಷ್ಮ ಕೆತ್ತನೆಯ ಕರಕುಶಲ ವಸ್ತುಗಳು ಇಲ್ಲಿ ಜೀವತಳೆಯುತ್ತವೆ.

ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಮುಂದಂತುರೈ-ಕಾಲಕಾಡ್ ಹುಲಿ ಧಾಮ. ಅಲ್ಲದೇ ಪಾಪನಾಸಂ ಅಣೆಕಟ್ಟು, ಅಗಸ್ತಿಯರ್ ಜಲಪಾತ, ಮಣಿಮುತ್ತಾರ್ ಅಣೆಕಟ್ಟು ಮತ್ತು ಜಲಪಾತ, ಕರೈಯರ್ ಅಣೆಕಟ್ಟು, ಮಂಜೊಳೈ ಗಿರಿ ಮತ್ತು ವಿಕ್ರಮಸಿಂಗಪುರಂ ಸಹಾ ಪ್ರವಾಸಿಗರನ್ನು ಸೆಳೆಯುತ್ತವೆ. ಈ ಊರಿನ ಗರಿಮುರಿ "ಕೈ ಮುರುಕ್ಕು" ತಿಂಡಿ ಬಹಳ ಜನಪ್ರಿಯ. ಅಲ್ಲದೇ ನುರಿತ ಕೆಲಸಗಾರರಿಂದ ನೇಯಲ್ಪಟ್ಟ ಕೈಮಗ್ಗದ ಹುಲ್ಲಿನ "ಪಾಯ್"ಎಂಬ ಚಾಪೆ ಸಹಾ ಪ್ರಸಿದ್ಧವಾಗಿದೆ. ಪಕ್ಷಿವೀಕ್ಷಣೆ, ಧಾರ್ಮಿಕ, ಇತಿಹಾಸಿಕ ಸ್ಥಳಗಳಿಗೆ ಭೇಟಿ, ಚಾರಣ ಮೊದಲಾದ ವಿವಿಧ ಅಭಿರುಚಿಯುಳ್ಳ ಪ್ರವಾಸಿಗರಿಗೆ ಅಂಬಸಮುದ್ರಂ ಹೇಳಿ ಮಾಡಿಸಿದ ತಾಣವಾಗಿದೆ.

ಅಂಬಸಮುದ್ರಂ ಪ್ರಸಿದ್ಧವಾಗಿದೆ

ಅಂಬಸಮುದ್ರಂ ಹವಾಮಾನ

ಅಂಬಸಮುದ್ರಂ
32oC / 90oF
 • Haze
 • Wind: N 15 km/h

ಉತ್ತಮ ಸಮಯ ಅಂಬಸಮುದ್ರಂ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಂಬಸಮುದ್ರಂ

 • ರಸ್ತೆಯ ಮೂಲಕ
  ತಮಿಳುನಾಡು, ಕೇರಳ ಸರ್ಕಾರದ ಬಸ್ ಗಳು ತಿರುನೆಲ್ವೇಲಿಗೆ ಆಗಮಿಸುತ್ತವೆ. ತಿರುನೆಲ್ವೇಲಿಯಿಂದ ಅಂಬಸಮುದ್ರಂಗೆ ಉತ್ತಮ ರಸ್ತೆ ಸೌಲಭ್ಯವಿದ್ದು ಬಸ್, ಕಾರು, ಟ್ಯಾಕಿ ಮೂಲಕ ಅಂಬಸಮುದ್ರಂ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತಿರುನೆಲ್ವೇಲಿ ಜಂಕ್ಷನ್ ಪ್ರಮುಖ ಕೇಂದ್ರವಾಗಿದ್ದು ಹೆಚ್ಚಿನ ರಾಜ್ಯಗಳಿಂದ ನೇರ ರೈಲು ಸೌಲಭ್ಯವಿದೆ. ತಿರುನೆಲ್ವೇಲಿ ನಿಲ್ದಾಣದಿಂದ ಅಂಬಸಮುದ್ರಂ ರೈಲ್ವೇ ನಿಲ್ದಾಣ 42 ಕಿ.ಮೀ ದೂರವಿದ್ದು ನಿಯಮಿತ ರೈಲು ಸಂಚಾರ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಟ್ಯುಟಿಕಾರಿನ್ ವಿಮಾನ ನಿಲ್ದಾಣ ಅಂಬಸಮುದ್ರಂನಿಂದ ಸುಮಾರು ಎಪ್ಪತ್ತೈದು ಕಿ.ಮೀ ದೂರವಿದೆ. ಆದರೆ ಇದು ರಾಷ್ಟೀಯ ವಿಮಾನ ನಿಲ್ದಾಣವಾದುದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರು ಸುಮಾರು 156 ಕಿ.ಮೀ ಇರುವ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗುತ್ತದೆ. ಈ ನಿಲ್ದಾಣಗಳಿಂದ ತಿರುನೆಲ್ವೇಲಿಗೆ ಉತ್ತಮ ರಸ್ತೆ ಮತ್ತು ರೈಲು ಮಾರ್ಗ ಲಭ್ಯವಿದ್ದು ಬಸ್, ರೈಲು ಅಥವಾ ಟ್ಯಾಕ್ಸಿ ಮೂಲಕ ಆಗಮಿಸಬಹುದು. ತಿರುನೆಲ್ವೇಲಿಯಿಂದ ಅಂಬಸಮುದ್ರಕ್ಕೆ ರೈಲು ಮತ್ತು ರಸ್ತೆ ಮಾರ್ಗವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Ambasamudram
  32 OC
  90 OF
  UV Index: 6
  Haze
 • Tomorrow
  Ambasamudram
  26 OC
  78 OF
  UV Index: 6
  Patchy light rain with thunder
 • Day After
  Ambasamudram
  25 OC
  76 OF
  UV Index: 6
  Patchy rain possible