ಶಿವಕಾಶಿ – ಕಾಶಿಯಲ್ಲಿನ ಶಿವಲಿಂಗ ಇರುವ ಸ್ಥಳ

ಶಿವನ ಬಗ್ಗೆ ತಿಳಿಯುವುದು ಅಥವಾ ಶಿವಲಿಂಗದ ಅದ್ಭುತ ನಗರವನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಲ್ಲಿದೆ ನಿಮಗೊಂದು ಅವಕಾಶ. ತಮಿಳುನಾಡಿನ ಹಲವಾರು ಸುಂದರ ಸ್ಥಳದ ಜೊತೆಗೆ ಶಿವಕಾಶಿ ನಗರವೂ ಒಂದು ಲಾವಣ್ಯ ತುಂಬಿದ ತಾಣ. ಬನ್ನಿ, ಈ ನಗರದ ಸುತ್ತ ಒಂದು ಸುತ್ತು ಹಾಕಿ ಬರೋಣ.

ಶಿವಕಾಶಿ, ಫೈರ್ ವರ್ಕ್ಸ್ ಮತ್ತು ಬೆಂಕಿಪೆಟ್ಟಿಗೆ ತಾಯಾರಿಕಾ ಕೈಗಾರಿಕೆಗಳಿಗೆ ಹೆಸರಾದ ಒಂದು ನಗರವಾಗಿದೆ. ಇದು ತಮಿಳುನಾಡಿನ ವಿರುಧ್ ನಗರ ಜಿಲ್ಲೆಯಲ್ಲಿದೆ. ಇದು ಅತ್ಯಂತ ಪ್ರಮುಖ ದೇವಾಲಯಗಳ ನೆಲೆಯಾಗಿದೆ ಮತ್ತು ವಿವಿಧ ಋತುಗಳಲ್ಲಿ ಕೆಲವು ವರ್ಣರಂಜಿತ ಸ್ಥಳೀಯ ಉತ್ಸವಗಳನ್ನು ಇಲ್ಲಿ ಆಚರಿಸಲಾಗುತ್ತದೆ ಈ ಕಾರಣದಿಂದ ಶಿವಕಾಶಿ, ಉದಯೋನ್ಮುಖ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ.

ಶಿವಕಾಶಿ –ಪ್ರವಾಸಿ ತಾಣದ ಒಳಗೆ ಮತ್ತು ಸುತ್ತುಮುತ್ತ

ಶಿವಕಾಶಿಯ ಇತರ ಆಕರ್ಷಣೆಗಳೆಂದರೆ ಶ್ರೀ ಭದ್ರಕಾಳಿಅಮ್ಮನ್ ದೇವಸ್ಥಾನ, ಪರಾಶಕ್ತಿ ಮಾರಿ ಅಮ್ಮನ್ ದೇವಸ್ಥಾನ, ತಿರುತನಂಗಲ್,ಶ್ರೀ ವೆಂಕಟಚಲಪತಿ, ಮಾರಿಯಮ್ಮನ್ ಕೊಯಿಲ್, ಅಯ್ಯನರ್ಫಾಲ್ಸ್/ಜಲಪಾತ, ಮುಥಲಿಯರ್/ಮುಥಲೈಯ್ಯರ್ ಊತು, ಪಿಲವಕ್ಕಲ್ ಅಣೆಕಟ್ಟು, ನೆನ್ಮೆನಿ ಕುಲ್ಲೂರು ಸಂಧಾಯಿ ಜಲಾಶಯ ಮತ್ತು ವೆಂಬಾಕೊಟ್ಟಾಯಿ ಮೊದಲಾದವುಗಳು.

ಶಿವಕಾಶಿಯ ಇತಿಹಾಸ 600 ವರ್ಷಗಳಷ್ಟು ಹಳೆಯದು. ಇದು ದಕ್ಷಿಣ ಮಧುರೈನ ಆಡಳಿತಗಾರ ರಾಜ ಹರಿಕೇಸರಿ ಪರಕ್ಕಿರಾಮಪಾಂಡಿಯನ್, ಶಿವಕಾಶಿಯನ್ನು ತನ್ನ ಆಡಳಿತದ ಭಾಗವಾಸಿಕೊಂಡಿದ್ದ. ಕಾಶಿ (ಈಗ ವಾರಣಾಸಿ)ಯಿಂದ ಈ ಭಾಗಕ್ಕೆ ಒಂದು ಶಿವ ಲಿಂಗವನ್ನು ತರಲಾಯಿತು.

ಈ ಪವಿತ್ರವಾದ ಸ್ಥಳದಲ್ಲಿ 'ಕಾಶಿಯಿಂದ ತಂದ ಶಿವಲಿಂಗ'  ಇರುವುದರಿಂದ ಶಿವಕಾಶಿ ಎಂಬಹೆಸರು ಈ ಭಾಗಕ್ಕೆ ಚಿರಪರಿಚಿತವಾಯಿತು. ನಂತರ ರಾಜ ಪಾಂಡ್ಯ ಮತ್ತು  ರಾಜ ತಿರುಮಲೈ ನಾಯ್ಕರ್ ಕಾಶಿಯಲ್ಲಿ ವಿಶ್ವನಾಥ ಸ್ವಾಮಿ ಎಂಬ ಪ್ರಖ್ಯಾತ ಶಿವನ ದೇವಸ್ಥಾನವನ್ನು ನಿರ್ಮಿಸಿದರು. ಇಂದು ಈ ಸ್ಥಳ ಪ್ರವಾಸಿಗರ ಮತ್ತು ಭಕ್ತರು ಒಂದು ಆಕರ್ಷಣೆಯಾಗಿಮಾರ್ಪಟ್ಟಿದೆ.

ಶಿಮಕಾಶಿ ಹವಾಮಾನ

ಶಿವಕಾಶಿಯಲ್ಲಿ ವರ್ಷವಿಡಿ ಅತಿ ಹೆಚ್ಚು ಉಷ್ಣ ಮತ್ತು ಆರ್ದ್ರ ಹವಾಮಾನವಿರುತ್ತದೆ. ವಿಶೇಷವಾಗಿ ಎಪ್ರೀಲ್ ಮತ್ತು ಜೂನ್ ನಲ್ಲಿ ಬಿಸಿಲಿನ ಪ್ರಮಾಣ ಅಧಿಕವಾಗಿರುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಈ ನಗರಕ್ಕೆ ಭೇಟಿ ನೀಡುವುದು ಸೂಕ್ತವಲ್ಲ. ಅಕ್ಟೋಬರ್ ಮತ್ತು ಮಾರ್ಚ್ ತಿಂಗಳಿನಲ್ಲಿ ಶಿವಕಾಶಿ ಪಟ್ಟಣಕ್ಕೆ ಬರಲು ಅತ್ಯಂತ ಪ್ರಶಸ್ತ ಸಮಯ.

ಶಿವಕಾಶಿ ತಲುಪುವುದು ಹೇಗೆ?

ತಮಿಳುನಾಡಿನ ಎಲ್ಲಾ ಭಾಗಗಳಿಂದ ಉತ್ತಮ ಸಂಪರ್ಕ ಹೊಂದಿರುವ ಬಸ್ ಹಾಗೂ ಟ್ರೈನ್ ಪ್ರಯಾಣಗಳು ಶಿವಕಾಶಿ ತಲುಪಲು ಅತ್ಯಂತ ಉತ್ತಮ ಮಾರ್ಗಗಳಾಗಿವೆ. ಶಿವಕಾಶಿಯಿಂದ 58 ಕಿ.ಮೀ  ಅಂತರದಲ್ಲಿರುವ ಮಧುರೈ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದೆ.

Please Wait while comments are loading...