Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ಹವಾಮಾನ

ಶಿವಕಾಶಿ ಹವಾಮಾನ

ಶಿವಕಾಶಿಯಲ್ಲಿ ವಾತಾವರಣವು ವರ್ಷದ ಬಹುತೇಕ ಸಮಯ ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುತ್ತದೆ. ತಾಪಮಾನ ತಂಪಾದ ಸಂದರ್ಭದಲ್ಲಿ ಅಂದರೆ ಚಳಿಗಾಲದಲ್ಲಿ ಶಿವಕಾಶಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ. ಮಳೆಗಾಲದ ಕೊನೆಯಲ್ಲಿ ಚಳಿಗಾಲ ಆರಂಭವಾಗುತ್ತದೆ. ಅಕ್ಟೋಬರ್ ತಿಂಗಳಿನಿಂದ  ಮಾರ್ಚ್ ತಿಂಗಳು ಶಿವಕಾಶಿ ಪಟ್ಟಣದಲ್ಲಿ ಸಂಚರಿಸಬಹುದಾದ ಉತ್ತಮ ಸಮಯ.

ಬೇಸಿಗೆಗಾಲ

ಶಿವಕಾಶಿಯಲ್ಲಿ, ಬೇಸಿಗೆ ತಿಂಗಳಲ್ಲಿ ಒಣ ಹವಾಮಾನವನ್ನು ಹೊಂದಿದ್ದು, ಆರ್ದ್ರತೆಯ ಜೊತೆಗೆ ಅತ್ಯಂತ ಅಹಿತಕರ ಹವಾಗುಣವನ್ನು ಹೊಂದಿದೆ. ಬೇಸಿಗೆ ಕಾಲವು ಮಾರ್ಚ್  ನಿಂದ ಮೇ ತಿಂಗಳಲ್ಲಿ ಕಂಡುಬರುತ್ತದೆ. ಏಪ್ರಿಲ್ ಮತ್ತು ಮೇ ಅತ್ಯಂತ ಉಷ್ಣ ಹೊಂದಿರುವ ತಿಂಗಳುಗಳು. ಮತ್ತು ಇದು ಈ ತಿಂಗಳಲ್ಲಿ ಶಿವಕಾಶಿಗೆ ಪ್ರಯಾಣ ಮಾಡುವುದು ಅಷ್ಟು ಯೋಗ್ಯವಲ್ಲ.  ಈ ತಿಂಗಳಲ್ಲಿ ಇಲ್ಲಿನ ತಾಪಮಾನ 32 ಡಿಗ್ರಿ ಸೆಲ್ಷಿಯಸ್  ನಿಂದ 40 ಡಿಗ್ರಿ ಸೆಲ್ಷಿಯಸ್ ನಷ್ಟು ದಾಖಲಾಗುತ್ತದೆ.

ಮಳೆಗಾಲ

ಶಿವಕಾಶಿಯಲ್ಲಿ ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ಇರುವ ಮಳೆಗಾಲವು ಶಿವಕಾಶಿ ನಗರವನ್ನೇ ಬದಲಾಯಿಸಿ ಬಿಡುತ್ತದೆ. ಶಿವಕಾಶಿ,ಮಧ್ಯಮ ಪ್ರಮಾಣದ ಮಳೆಯನ್ನು ಅನುಭವಿಸುತ್ತದೆ ಮತ್ತು ತಾಪಮಾನ ಈ ಸಮಯದಲ್ಲಿ ಕಡಿಮೆಯಾಗಿರುತ್ತದೆ.

ಚಳಿಗಾಲ

ಶಿವಕಾಶಿಯಲ್ಲಿ ಚಳಿಗಾಲದಲ್ಲಿ ತಿಂಗಳಿನಲ್ಲಿ ತಾಪಮಾನವು ತುಲನಾತ್ಮಕವಾಗಿ ತಂಪಾದ ಮತ್ತು ಆಹ್ಲಾದಕರವಾಗಿರುತ್ತದೆ. ತಾಪಮಾನವು ಕನಿಷ್ಠ23 ಡಿ.ಸೆ ಮತ್ತು  ಗರಿಷ್ಠ 34 ಡಿ.ಸೆಲ್ಸಿಯಸ್ ನಷ್ಟಿರುತ್ತದೆ. ಚಳಿಗಾಲವು ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರವರಿಯಲ್ಲಿ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಇದು  ಶಿವಕಾಶಿ ಭೇಟಿಗೆ ವರ್ಷದ ಅತ್ಯುತ್ತಮ ಸಮಯ. ಅತ್ಯುತ್ತಮ ಸಮಯ