Search
 • Follow NativePlanet
Share
ಮುಖಪುಟ » ಸ್ಥಳಗಳು» ತಿರುಪುರ್

ತಿರುಪುರ್ - ದೇವಾಲಯ ಹಾಗಿ ಜವಳಿ ಉದ್ಯಮದ ನಾಡು

18

ದಕ್ಷಿಣ ಭಾರತದಲ್ಲೆ, ಜವಳಿ ಉದ್ಯಮದ ಕೇಂದ್ರವಾದ ತಿರುಪುರಿನ ಕುರಿತು ಕೇಳದೆ ಇರುವವರು ತುಂಬಾನೆ ವಿರಳ. ತಿರುಪುರ್ ತಮಿಳುನಾಡಿನ ಕೊಯಮತ್ತೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಇಲ್ಲಿ ತಯಾರಿಸಲಾಗುವ ವಸ್ತ್ರಗಳನ್ನು ದೇಶಾದ್ಯಂತ ಮಾರಲಾಗುತ್ತದೆ.

ಮಂಚೂಣಿಯಲ್ಲಿರುವ ಹಲವು ಹೆಸರುವಾಸಿಯಾದಂತಹ ಬಟ್ಟೆಯ ಉದ್ದಿಮೆಗಳು ತಿರುಪುರಿನಲ್ಲಿವೆ. ಇದರ ಹೊರತಾಗಿ ತಿರುಪುರ್ ತನ್ನಲ್ಲಿರುವ ಪುರಾತನ ದೇಗುಲಗಳಿಂದಾಗಿಯೂ ಹೆಸರುವಾಸಿಯಾಗಿದೆ. ಇದು ತಿರುಪುರ್ ಜಿಲ್ಲೆಯ ಆಡಳಿತಾತ್ಮಕ ಕೆಂದ್ರವಾಗಿದ್ದು ನೊಯ್ಯಲ್ ನದಿಯ ತಟದ ಮೆಲೆ ನೆಲೆಸಿದೆ. ಇದು ತಮಿಳುನಾಡಿನ ಕೊಂಗು ನಾಡು ಪ್ರದೇಶದ ಭಾಗ. ಒಂದು ಡಜನ್ ಗಿಂತಲೂ ಅಧಿಕವಾಗಿರುವ ಇಲ್ಲಿನ ಜವಳಿ ಉದ್ದಿಮೆಗಳಲ್ಲಿ ಕೆಲಸ ಆರಿಸಿಕೊಂಡು ದೇಶಾದ್ಯಂತ ಕಾರ್ಮಿಕ ವರ್ಗದ ಹಲವು ವಲಸೆಗಾರರು ಇಲ್ಲಿ ಬಂದು ನೆಲೆಸಿದ್ದಾರೆ. ಜನಸಂಖ್ಯೆ ಹಾಗು ಭೌಗೋಳಿಕ ದೃಷ್ಟಿಯಿಂದ ತಿರುಪುರ್ ತಮಿಳುನಾಡಿನ 7 ನೇಯ ದೊಡ್ಡ ನಗರವಾಗಿದೆ.

ತಿರುಪುರ್ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಜವಳಿ ಉದ್ದಿಮೆಗಳ ಹೊರತಾಗಿ ತಿರುಪುರಿನಲ್ಲಿ, ಚೋಳರು ಹಾಗು ಪಾಂಡ್ಯರ ಕಾಲದಲ್ಲಿ ನಿರ್ಮಿತವಾದ ಹಲವು ದೇವಾಲಯಗಳನ್ನು ಕಾಣಬಹುದು. ಹಲವು ದಂತಕಥೆಗಳಿಗೆ ತವರಾಗಿರುವ ತಿರುಪುರಿನಲ್ಲಿ ಅವಿನಾಶಿಯ ಅರುಲ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್, ತಿರುಪುರ್ ತಿರುಪತಿ ದೇವಾಲಯ ಮತ್ತು ಸುಕ್ರೀಸ್ವರರ್ ದೇವಾಲಯಗಳನ್ನು ಕಾಣಬಹುದಾಗಿದೆ.

ಇವೆಲ್ಲವುಗಳ ನಡುವೆ ನಗರದ ಹೃದಯ ಭಾಗದಲ್ಲಿ ನೆಲೆಸಿರುವ, ಪುರಾತನ ದೇಗುಲಗಳಲ್ಲೊಂದಾಗಿರುವ ವಿಸ್ವೇಸ್ವರಸ್ವಾಮಿ ದೇವಾಲಯದ ಹಿನ್ನಿಲೆಯು ರೋಚಕವಾಗಿದೆ. ದಂತಕಥೆಯೊಂದರ ಪ್ರಕಾರ, ಇಲ್ಲಿ ಪೂಜಿಸಲಾಗುವ ಶಿವಲಿಂಗವು ರಾಜನೊಬ್ಬಾತನು ಕಾಶಿ ಯಾತ್ರೆ ಮುಗಿಸಿ ಮರುಳುತ್ತಿರುವಾಗ ಬಿಟ್ಟು ಹೋದದ್ದಾಗಿದೆ.

ಈ ನಗರವು ಕ್ರಾಂತಿಗಾಗಿಯೂ ಪ್ರಸಿದ್ಧಿ ಪಡೆದಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಈ ಪ್ರದೆಶ ರಾಜಕೀಯ ಅಸ್ಥಿರತೆಯ ತಾಣವಾಗಿ ಪರಿಣಮಿಸಿತ್ತು. ಅಲ್ಲದೆ ತಿರುಪ್ಪುರ್ ಕುಮಾರನ್ ನಂತಹ ದೇಶಪ್ರೇಮಿಗಳನ್ನು ಈ ಪ್ರದೇಶವು ನೀಡಿದೆ. ಇವರ ಸ್ಮಾರಕವನ್ನು ಇಂದಿಗೂ ನಗರದಲ್ಲಿ ಕಾಣಬಹುದಾಗಿದೆ. ಪೆರಿಯಾರ್, ಇ.ವಿ.ರಾಮಸ್ವಾಮಿ ಮತ್ತು ಸಿ.ಎನ್.ಅಣ್ಣಾದುರೈ ನಂತಹ ದೂರದೃಷ್ಟಿಯುಳ್ಳ ಚಿಂತಕರು ಈ ತಾಣದಲ್ಲಿ ಸಭೆ ಸೇರುತ್ತಿದ್ದರು.

ಆಂಡಿಪಾಳಯಂ ಕೆರೆ ಮತ್ತು ಸಿವನ್ಮಲೈ, ಇಲ್ಲಿರುವ ಪ್ರವಾಸಿಗರ ಆಕರ್ಷಣೆಗಳು. ಸಮುದ್ರ ಮಟ್ಟದಿಂದ 967 ಅಡಿ ಎತ್ತರದಲ್ಲಿ ನೆಲೆಸಿರುವ ತಿರುಪುರ್ ತಮಿಳುನಾಡಿನ ವಾಣಿಜ್ಯ ಪ್ರಾಮುಖ್ಯತೆಯುಳ್ಳ ನಗರಗಳಾದ ಸೇಲಂ, ಈರೋಡ್ ಮತ್ತು ಕೊಯಮತ್ತೂರುಗಳ ಮಧ್ಯದಲ್ಲಿ ಸೂಕ್ಷ್ಮವಾಗಿ ನೆಲೆಸಿದೆ. ಆದ್ದರಿಂದ ತಿರುಪುರ್ ನಲ್ಲಿ ಜವಳಿ ಉದ್ಯಮಕ್ಕೆ ಬೇಕಾಗುವ ಕಚ್ಚಾ ವಸ್ತುಗಳ ಆಮದು ಹಾಗು ತಯಾರಿಸಲಾದ ಬಟ್ಟೆ ಬರೆಗಳ ರಫ್ತು ಸರಳ ಹಾಗು ಸುಲಭವಾಗಿದೆ. ಔದ್ಯೋಗಿಕ ರಂಗದಲ್ಲಿ ಇದೊಂದು ಪ್ರಮುಖವಾದ ತಾಣವಾಗಿರುವುದರಿಂದ, ದೇಶಾದ್ಯಂತ ಬಹುಸಂಖ್ಯೆಯಲ್ಲಿ ಕೆಲಸಗಾರರನ್ನು ಆಕರ್ಷಿಸುತ್ತದೆ. ಹಾಗಾಗಿ ಇಲ್ಲಿನ ಜನಸಂಖ್ಯೆಯಲ್ಲಿ ಭಾರತದ ಹಲವು ಜನಾಂಗಗಳ ಜನರನ್ನು ಕಾಣಬಹುದು. ಇಲ್ಲಿನ ಒಟ್ಟಾರೆ ಜನಸಂಖ್ಯೆಯಲ್ಲಿ ಬಹುಪಾಲು ಹಿಂದೂಗಳಾಗಿದ್ದರೂ, ಮುಸ್ಲಿಂ ಹಾಗು ಕ್ರೈಸ್ತರನ್ನೂ ಕಾಣಬಹುದು. ಔದ್ಯೋಗೀಕರಣ ಹೇಗೆ ಆರ್ಥಿಕತೆಯ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರುತ್ತದೆ ಎಂಬುದಕ್ಕೆ ತಿರುಪುರಿನ ಯಶಸ್ಸೆ ಒಂದು ಜೀವಂತ ಉದಾಹರಣೆ.  

ತಿರುಪುರ್ ಹವಾಮಾನ

ತಮಿಳುನಾಡಿನ ಒಳಭಾಗದಲ್ಲೆ ಅಪರೂಪವೆನ್ನಲಾಗುವ, ಸ್ಥಿರವಾಗಿರುವ ಹವಾಮಾನವನ್ನು ತಿರುಪುರ್ ಹೊಂದಿದೆ. ಹಾಗಾಗಿ ವರ್ಷದ ಯಾವುದೆ ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದು.

ತಲುಪುವ ಬಗೆ

ಸಂಚಾರದ ಮೂರು ಪ್ರಮುಖ ಮಾಧ್ಯಮಗಳಾದ ರಸ್ತೆ, ರೈಲು ಮತ್ತು ವಾಯುಯಾನಗಳ ಮೂಲಕ ತಿರುಪುರ್ ಅನ್ನು ಸುಲಭವಾಗಿ ತಲುಪಬಹುದು. ಇಲ್ಲಿಂದ ಕೇವಲ 50 ಕಿ.ಮೀ ದೂರದಲ್ಲಿರುವ ಕೊಯಮತ್ತೂರು ತನ್ನದೆ ಆದ ಡೊಮೆಸ್ಟಿಕ್ ವಿಮಾನ ನಿಲ್ದಾಣವನ್ನು ಹೊಂದಿದೆ. ಹಾಗಾಗಿ ಭಾರತದ ಯಾವುದೆ ಭಾಗಗಳಿಂದ ತಿರುಪುರ್ ಅನ್ನು ಸುಲಭವಾಗಿ ತಲುಪಬಹುದಾಗಿದೆ. ಜವಳಿ ಉದ್ಯಮದಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವುದರಿಂದ ರಸ್ತೆ ಸಾರಿಗೆಯ ಮುಖಾಂತರವೂ ಹೆಚ್ಚಿನ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ತಿರುಪುರ್ ತನ್ನದೆ ಆದ ಸ್ವಂತ ರೈಲು ನಿಲ್ದಾಣವನ್ನೂ ಹೊಂದಿದೆ.

ತಿರುಪುರ್ ಪ್ರಸಿದ್ಧವಾಗಿದೆ

ತಿರುಪುರ್ ಹವಾಮಾನ

ತಿರುಪುರ್
30oC / 86oF
 • Haze
 • Wind: WSW 9 km/h

ಉತ್ತಮ ಸಮಯ ತಿರುಪುರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತಿರುಪುರ್

 • ರಸ್ತೆಯ ಮೂಲಕ
  ತಿರುಪುರ್ ತಮಿಳುನಾಡು ರಾಜ್ಯ ಮಾತ್ರವಲ್ಲದೆ, ಇತರೆ ಭಾಗಳೊಂದಿಗೆ ಉತ್ತಮವಾದ ರಸ್ತೆ ಜಾಲಗಳ ಮೂಲಕ ಸಂಪರ್ಕವನ್ನು ಹೊಂದಿದೆ. ಈರೋಡ್ ಮತ್ತು ಕೊಯಮತ್ತೂರಿನಿಂದ ನಿರಂತರವಾದ ಬಸ್ ಸೇವೆ ಇಲ್ಲಿಗೆ ಲಭ್ಯವಿರುತ್ತದೆ. ಬಸ್ ಪ್ರಯಾಣ ದರವು ದೂರಗಳ ಆಧಾರದ ಮೇಲೆ Rs.50 ರಿಂದ Rs.500 ಆಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತಿರುಪುರ್ ತನ್ನದೆ ಆದ ರೈಲು ನಿಲ್ದಾಣವನ್ನು ಹೊಂದಿದೆ. ದೇಶದ ಪ್ರಮುಖ ಭಾಗಗಳಿಗೆ ಇಲ್ಲಿಂದ ಉತ್ತಮ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  50 ಕಿ.ಮೀ ದೂರದಲ್ಲಿರುವ ಕೊಯಮತ್ತೂರು ವಾಯುನಿಲ್ದಾಣ ತಿರುಪುರ್ ಗೆ ಹತ್ತಿರದಲ್ಲಿರುವ ನಿಲ್ದಾಣ. ಆದ್ದರಿಂದ ವಿಮಾನಪ್ರಿಯ ಪ್ರವಾಸಿಗರು ಕೊಯಮತ್ತೂರಿನವರೆಗೆ ವಿಮಾನಿನಲ್ಲಿ ಬಂದು ಅಲ್ಲಿಂದ ಬಸ್ ಅಥವಾ ಕ್ಯಾಬ್ ಮುಖಾಂತರ ತಿರುಪುರ್ ಗೆ ತೆರಳಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Sep,Sat
Return On
27 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Sep,Sat
Check Out
27 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Sep,Sat
Return On
27 Sep,Sun
 • Today
  Tirupur
  30 OC
  86 OF
  UV Index: 7
  Haze
 • Tomorrow
  Tirupur
  27 OC
  81 OF
  UV Index: 7
  Moderate or heavy rain shower
 • Day After
  Tirupur
  27 OC
  80 OF
  UV Index: 7
  Moderate or heavy rain shower