ತಿರುಪುರ್ ತಿರುಪತಿ ದೇವಾಲಯವೂ ಕೂಡ ತಿರುಪುರ್ ನಗರದ ಮತ್ತೊಂದು ಪ್ರಮುಖ ಲ್ಯಾಂಡ್ ಮಾರ್ಕ್. ನಗರ ಭಾಗದಲ್ಲೆ ಸ್ಥಿತವಿರುವ ಈ ದೇವಾಲಯಕ್ಕೆ ಪ್ರತಿವರ್ಷ ಬಹುಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಇದು ಆಂಧ್ರಪ್ರದೇಶದ ಪ್ರಖ್ಯಾತ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಲುವಂತಿದೆ. ನಿರಂತರವಾಗಿ ಪೂಜೆ ಪುನಸ್ಕಾರಗಳನ್ನು ಕಾಣುವ ಈ ದೇವಸ್ಥಾನವು ವರ್ಷಪೂರ್ತಿ ತೆರೆದಿರುತ್ತದೆ. ಆದ್ದರಿಂದ ಯಾವುದೆ ಪವಿತ್ರ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಬಹುದಾಗಿದೆ. ನಗರದ ಮಧ್ಯದಲ್ಲೆ ಇರುವುದರಿಂದ ಬಸ್ಸುಗಳು ಇಲ್ಲವೆ ಆಟೊಗಳ ಮೂಲಕ ಸುಲಭವಾಗಿ ಇಲ್ಲಿಗೆ ತೆರಳಬಹುದು.