Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ಹವಾಮಾನ

ತಿರುಪುರ್ ಹವಾಮಾನ

ಸೆಪ್ಟಂಬರ್ ನಿಂದ ಪ್ರಾರಂಭವಾಗಿ ಜನವರಿಯವರೆಗೂ ಮುಂದುವರೆಯುವ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲವಾಗಿದೆ. ಏಕೆಂದರೆ ಈ ಸಂದರ್ಭದಲ್ಲಿ ವಾತಾವರಣದ ತಾಪಮಾನವು ಎಂದಿಗೂ 29 ಡಿಗ್ರಿ ಸೆಲ್ಶಿಯಸ್ ದಾಟುವುದಿಲ್ಲ ಹಾಗು ಕನಿಷ್ಠ ಉಷ್ಣಾಂಶ 24 ಡಿಗ್ರಿ ಆಗಿರುತ್ತದೆ.

ಬೇಸಿಗೆಗಾಲ

ಮಾರ್ಚ್, ಏಪ್ರಿಲ್, ಮೇ ಇವು ತಿರುಪುರ್ ನಲ್ಲಿ ಬೇಸಿಗೆಯ ಸಮಯ. ಈ ಸಮಯದಲ್ಲಿ ಉಷ್ಣಾಂಶ ಸುಮಾರು 29 ಡಿಗ್ರಿ ಸೆಲ್ಶಿಯಸ್ ನಿಂದ 35 ಡಿಗ್ರಿ ಸೆಲ್ಶಿಯಸ್ ವೆರೆಗೆ ಇರುತ್ತದೆ. ತಮಿಳುನಾಡಿನ ಇತರೆ ಭಾಗಗಳಿಗಿಂತ ಈ ಸಮಯದಲ್ಲಿ ಈ ರೀತಿಯ ತಾಪಮಾನ ನಿಜವಾಗಿಯೂ ಕಡಿಮೆಯೆ.

ಮಳೆಗಾಲ

ಜೂನ್, ಜುಲೈ, ಅಗಸ್ಟ್ ಇಲ್ಲಿ ಮಳೆಗಾಲದ ಸಮಯ. ಕಡಿಮೆ ತಾಪಮಾನ ಇರುವ ಈ ಸಮಯದಲ್ಲಿ ಮಧ್ಯಮ ಮಳೆ ಸಾಮಾನ್ಯ. ಇಲ್ಲಿಗೆ ಭೇಟಿ ನೀಡಲು ಇದೊಂದು ಉತ್ತಮವಾದ ಸಮಯವೆಂದು ಹೇಳಬಹುದು.

ಚಳಿಗಾಲ

ಸೆಪ್ಟಂಬರ್ ನಿಂದ ಪ್ರಾರಂಭವಾಗುವ ಚಳಿಗಾಲ ಜನವರಿಯವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ವಾತಾವರಣದ ತಾಪಮಾನವು ಎಂದಿಗೂ 29 ಡಿಗ್ರಿ ಸೆಲ್ಶಿಯಸ್ ದಾಟುವುದಿಲ್ಲ ಹಾಗು ಕನಿಷ್ಠ ಉಷ್ಣಾಂಶ 24 ಡಿಗ್ರಿ ಆಗಿರುತ್ತದೆ. ಇದು ಕೂಡ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.