Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ಆಕರ್ಷಣೆಗಳು » ಸುಕ್ರೀಸ್ವರರ್ ದೇವಾಲಯ

ಸುಕ್ರೀಸ್ವರರ್ ದೇವಾಲಯ, ತಿರುಪುರ್

1

ತಮಿಳುನಾಡಿನ ತಿರುಪುರ್ ನಲ್ಲಿ ಕಾಣಬಹುದಾದ ಮತ್ತೊಂದು ಮುಖ್ಯ ದೇವಾಲಯವೆಂದರೆ ಸುಕ್ರೀಸ್ವರರ್ ದೇವಾಲಯ. ತಿರುಪುರ್ ನಲ್ಲಿ ಹರಿದಿರುವ ನೊಯ್ಯಲ್ ನದಿಯ ಉಪನದಿಯಾದ ನಲ್ಲಾರ್ ನದಿಯ ದಂಡೆಯ ಮೇಲೆ ನೆಲೆಸಿದೆ ಈ ದೇವಾಲಯ. ಈ ಪ್ರದೇಶವನ್ನು ಆಳುತ್ತಿದ್ದ ಪಾಂಡ್ಯರಿಂದ ಸುಮಾರು ಹತ್ತನೇಯ ಶತಮಾನದಲ್ಲಿ ಈ ದೇವಸ್ಥಾನದ ನಿರ್ಮಾಣವಾಗಿದ್ದರೂ, ಈ ದೇವಾಲಯದ ಸಂಕೀರ್ಣದಲ್ಲಿರುವ ಇತರೆ ಹಲವು ರಚನೆಗಳು ಚೋಳ ರಾಜರಿಂದ ನಿರ್ಮಿಸಲ್ಪಟ್ಟಿವೆ. ತಮಿಳು ದೇವಾಲಯಗಳ ವಾಸ್ತುಶೈಲಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಈ ದೇವಾಲಯ ಸಂಕೀರ್ಣವು ಎರಡು ಗೋಪುರಗಳನ್ನು ಹೊಂದಿದ್ದು, ಅದನ್ನು ವಿಮಾನಂ ಎಂದು ಕರೆಯಲಾಗಿದೆ. ಒಂದು ಗೋಪುರವು ಅಮ್ಮನವರಿಗೆ ಮುಡಿಪಾಗಿದ್ದರೆ, ಮತ್ತೊಂದು ಶಿವನಿಗೆ ಸಮರ್ಪಿತವಾಗಿದೆ. ಒಟ್ಟು ಐದು ಶಿವಲಿಂಗಗಳಿವೆ ಈ ದೇವಾಲಯದಲ್ಲಿ. ಈ ದೇವಾಲಯವನ್ನು ಹತ್ತನೇಯ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದರೂ ಸಹ, ಇಲ್ಲಿ  ದೊರೆತಿರುವ ಶಾಸನ(ಕೆತ್ತನೆ)ಗಳ ಪ್ರಕಾರ, ಐದನೇಯ ಶತಮಾನದಲ್ಲೇ ಬುಡಕಟ್ಟು ಜನರು ಇಲ್ಲಿ ಶಿವನನ್ನು ಆರಾಧಿಸುತ್ತಿದ್ದರು ಎನ್ನಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue