Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪುರ್ » ಆಕರ್ಷಣೆಗಳು » ಅರುಳ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್

ಅರುಳ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್, ತಿರುಪುರ್

4

ಕೊಯಮತ್ತೂರಿನಿಂದ 40 ಕಿ.ಮೀ ದೂರದಲ್ಲಿ, ಈರೋಡ್ ಗೆ ಹೋಗುವ ಹಾದಿಯ ಮೇಲೆ ನೆಲೆಸಿದೆ ಅರುಳ್ಮಿಗು ಅವಿನಾಶಿ ಲಿಂಗೇಶ್ವರರ್ ತಿರುಕೋಯಿಲ್. ಪಾಂಡ್ಯರ ರಾಜ ಸುಂದರ ಪಾಂಡ್ಯನಿಂದ ಸುಮಾರು 15 ನೇಯ ಶತಮಾನದಲ್ಲಿ ನಿರ್ಮಿತವಾಗಿದೆ ಈ ದೇವಾಲಯ. ಈ ದೇವಸ್ಥಾನದ ಹಿಂದೆ ಅತಿ ರೋಚಕವಾದ ಕಥೆಯೊಂದಿದೆ. ಅದೆನೆಂದರೆ, ಒಮ್ಮೆ ಇಬ್ಬರು ಬಾಲಕರು ಈ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ, ಕೊಳದಲ್ಲಿದ್ದ ಮೊಸಳೆಯೊಂದು ಒಬ್ಬ ಬಾಲಕನನ್ನು ನುಂಗಿಬಿಟ್ಟಿತು. ಈ ಘಟನೆ ನಡೆದ ಮೂರು ವರ್ಷಗಳ ತರುವಾಯ ಬದುಕುಳಿದಿದ್ದ ಮತ್ತೊಬ್ಬ ಬಾಲಕನ ಉಪನಯನವನ್ನು ಪಾಲಕರು ದುಖತಪ್ತರಾಗಿಯೆ ಮಾಡಿದರು. ಈ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲೆ ಸಾಗುತ್ತಿದ್ದ ಸುಂದರಮೂರ್ತಿ ನಯನರ್ ಎಂಬುವವರಿಗೆ ಈ ಘಟನೆ ಕುರಿತು ತಿಳಿಯಿತು. ಇದರಿಂದ ಮನನೊಂದ ಅವರು ತಕ್ಷಣವೆ ಶಿವನ ಕುರಿತು ಒಂದು ಸಂಗೀತವನ್ನು ರಚಿಸಿ, ತೀರಿಹೋದ ಬಲಾಕನನ್ನು ಮತ್ತೆ ಜೀವ ತುಂಬಿಸಿ ಮಾತಾ-ಪಿತೃಗಳಿಗೆ ಹಿಂದಿರುಗಿಸಬೇಕೆಂದು ಬೇಡಿಕೊಂಡನು.

ಆಗ ಪವಾಡವೆಂಬಂತೆ ಬರಿದಾಗಿದ್ದ ದೇವಸ್ಥಾನದ ಆ ಕೊಳದಲ್ಲಿ ನೀರು ಮತ್ತೆ ತುಂಬಿ, ಅದರಿಂದ ಮೊಸಳೆಯು ಹೊರಬಂದು ನುಂಗಿದ್ದ ಬಾಲಕನನ್ನು ಮತ್ತೆ ಮೊದಲಿನ ಸ್ಥಿತಿಯಲ್ಲೆ ಹೊರಹಾಕಿತು. ತಿರುಪುರಿಗೆ ಭೇಟಿ ನೀಡಿದ್ದಾಗ, ನೋಡಲೆ ಬೇಕಾದ ಆಕರ್ಷಣೆಗಳಲ್ಲಿ ಈ ದೇವಾಲಯವೂ ಒಂದು. ಮತ್ತೊಂದು ವಿಶೇಷವೆಂದರೆ ಈ ದೇವಸ್ಥಾನದ ತನ್ನದೆ ಆದ ವಿಶೀಷ್ಟ ರೀತಿಯ ರಥ ಅಥವಾ ತೇರು. ಇದು ದಕ್ಷಿಣ ಭಾರತದಲ್ಲಿಯೆ ದೊಡ್ಡದಾದ ತೇರಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue