Search
  • Follow NativePlanet
Share
ಮುಖಪುಟ » ಸ್ಥಳಗಳು» ತಿರುನೆಲ್ವೇಲಿ

ತಿರುನೆಲ್ವೇಲಿ - ಹಳೆಕಾಲವು ಹೊಸಕಾಲದೊಂದಿಗೆ ಸಂಗಮವಾಗುವ ಸ್ಥಳ

22

ತಿರುನೆಲ್ವೇಲಿಯು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಆದರೆ ಅತ್ಯಂತ ಪ್ರಸಿದ್ಧವಾಗಿರುವ ಹೆಸರುಗಳೆಂದರೆ ನೆಲ್ಲೈ, ಟಿನ್ನೆವೆಲಿ ಮತ್ತು ತಿರುನೆಲ್ವೇಲಿಗಳಾಗಿವೆ. ಬ್ರಿಟೀಷರ ತಮ್ಮ ಆಡಳಿತಾವಧಿಯಲ್ಲಿ ಇದನ್ನು ಟಿನ್ನೆವೆಲಿ ಎಂದು ಕರೆಯುತ್ತಿದ್ದರು. ಈ ಹೆಸರನ್ನು ಸ್ವಾತಂತ್ರ್ಯನಂತರ ಆಗಾಗ್ಗೆ ಬಳಸುತ್ತಿದ್ದರು. ಆದರೆ ಇಲ್ಲಿನ ಸ್ಥಳೀಯರ ಬಾಯಲ್ಲಿ ಇದು ನೆಲ್ಲೈ ಎಂದೆ ಕರೆಯಲ್ಪಡುತ್ತದೆ.

ತಿರುನೆಲ್ವೇಲಿಯು ತಿರುನೆಲ್ವೇಲಿ ಜಿಲ್ಲೆಯ ಜಿಲ್ಲಾಕೇಂದ್ರವು ಸಹ ಹೌದು. ಇದು ತಮಿಳು ನಾಡು ರಾಜ್ಯದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ತನ್ನದೇ ಆದ ವಿಶೇಷ ಭೌಗೋಳಿಕ ಮಹತ್ವವನ್ನು ಪಡೆದಿರುವ ತಿರುನೆಲ್ವೇಲಿಯು ದಖನ್ ಪ್ರಸ್ಥಭೂಮಿಯ ದಕ್ಷಿಣದ ತುದಿಯಲ್ಲಿ ನೆಲೆಗೊಂಡಿದೆ. ತಿರುನೆಲ್ವೇಲಿಯು ರಾಜಧಾನಿ ಚೆನ್ನೈನಿಂದ 700 ಕಿ.ಮೀ ಮತ್ತು ನೆರೆಯ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರದಿಂದ 130 ಕಿ.ಮೀ ದೂರದಲ್ಲಿದೆ.

ದೇವಾಲಯಗಳ ಮತ್ತು ಪವನ ಶಕ್ತಿ ಯಂತ್ರಗಳ ನಾಡು - ತಿರುನೆಲ್ವೇಲಿಯಲ್ಲಿ ಮತ್ತು ಸುತ್ತ- ಮುತ್ತ ಇರುವ ಪ್ರವಾಸಿ ತಾಣಗಳು.

ತಿರುನೆಲ್ವೇಲಿಯಲ್ಲಿ ಹಲವಾರು ದೇವಾಲಯಗಳಿವೆ. ಇವುಗಳಲ್ಲಿ ಕೆಲವೊಂದು ಪ್ರಾಚೀನ ದೇವಾಲಯಗಳು ಸೇರಿರುವುದು ವಿಶೇಷ. ಈ ಸ್ಥಳದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ನೆಲ್ಲಿಯಪ್ಪರ್ ದೇವಾಲಯವು ನೆಲೆಗೊಂಡಿರುವುದು. ಇದು ರಾಜ್ಯದಲ್ಲಿರುವ ಅತ್ಯಂತ ದೊಡ್ಡ ಶಿವನ ದೇವಾಲಯವೆಂಬ ಖ್ಯಾತಿಗೆ ಪಾತ್ರವಾಗಿದೆ.

ತಿರುನೆಲ್ವೇಲಿ ಪ್ರದೇಶವು ಪವನ ಶಕ್ತಿ ಕೇಂದ್ರಕ್ಕೆ ಪ್ರಶಸ್ತವಾದ ಸ್ಥಳವಾಗಿದೆ. ಹಾಗಾಗಿ ಈ ನಗರದ ಹೊರವಲಯದಲ್ಲಿ ಪವನಶಕ್ತಿ ಉತ್ಪಾದನಾ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿನ ಕಂಪನಿಗಳು ಪವನಶಕ್ತಿಯಿಂದ 3500 ಮೆ.ವ್ಯಾ ವಿದ್ಯುತ್ತನ್ನು ಇಲ್ಲಿ ಉತ್ಪಾದಿಸುತ್ತಾರೆ.

ಇದರ ಜೊತೆಗೆ ಇಲ್ಲಿ ಕಪ್ಪಲ್ ಮಾತಾ ಚರ್ಚ್, ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯ, ಶ್ರೀ ವರದರಾಜ ಪೆರುಮಾಳ್ ದೇವಾಲಯ, ಮೇಲೆ ತಿರುವೆಂಕಟನಾಥ ದೇವಾಲಯ, ಕೀಳೆ ತಿರುವೆಂಕಟನಾಥಪುರಂ, ಕೀಳೆ ತಿರುಪತಿಗಳು ಇಲ್ಲಿ ನೋಡಬೇಕಾಗಿರುವ ಸ್ಥಳಗಳ ಪಟ್ಟಿಯಲ್ಲಿ ಸೇರಿವೆ.

ತಿರುನೆಲ್ವೇಲಿಗೆ ತಲುಪುವುದು ಬಗೆ

ತಿರುನೆಲ್ವೇಲಿಯು ತಮಿಳು ನಾಡಿನ ಮುಖ್ಯ ನಗರಗಳೊಂದಿಗೆ ಉತ್ತಮ ರಸ್ತೆಯ ಸಂಪರ್ಕವನ್ನು ಹೊಂದಿದೆ. ಟ್ಯುಟಿಕಾರನ್ ಬಂದರು, ಮಧುರೈ ಮತ್ತು ನೆರೆಯ ಕನ್ಯಾಕುಮಾರಿ ಜಿಲ್ಲೆಗಳ ಮೂಲಕ ತಿರುನೆಲ್ವೇಲಿಗೆ ನೀವು ತಲುಪಬಹುದು.

ತಿರುನೆಲ್ವೇಲಿ ಹವಾಮಾನ

ತಿರುನೆಲ್ವೇಲಿಯ ಹವಾಮಾನವು ತಮಿಳುನಾಡಿನ ಇತರ ಭಾಗಗಳಿಗಿಂತ ವಿಭಿನ್ನವಾಗಿದೆ. ಬಿಸಿಲು ಮತ್ತು ಆರ್ದ್ರತೆಯು ಇಲ್ಲಿ ಸಾಮಾನ್ಯ. ಆದರೆ ಬೇಸಿಗೆಯು ಸಹಿಸಿಕೊಳ್ಳಲಸಾಧ್ಯ. ಆದರೂ ಮಳೆಗಾಲ ಮತ್ತು ಚಳಿಗಾಲಗಳು ಇಲ್ಲಿ ಪರವಾಗಿಲ್ಲ ಎಂಬ ವಾತಾವರಣವನ್ನು ಹೊಂದಿರುತ್ತವೆ.

ತಿರುನೆಲ್ವೇಲಿ ಪ್ರಸಿದ್ಧವಾಗಿದೆ

ತಿರುನೆಲ್ವೇಲಿ ಹವಾಮಾನ

ಉತ್ತಮ ಸಮಯ ತಿರುನೆಲ್ವೇಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಿರುನೆಲ್ವೇಲಿ

  • ರಸ್ತೆಯ ಮೂಲಕ
    ತಿರುನೆಲ್ವೇಲಿಯು ತಮಿಳು ನಾಡು ರಾಜ್ಯದ ಪ್ರಮುಖ ನಗರಗಳ ಜೊತೆಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಚೆನ್ನೈನಿಂದ ತಿರುನೆಲ್ವೇಲಿಗೆ 630 ಕಿ.ಮೀ ದೂರವಾಗುತ್ತದೆ. ದೂರದ ಪ್ರಕಾರ ತಿರುನೆಲ್ವೇಲಿಗೆ ಕೇರಳದ ರಾಜಧಾನಿ ತ್ರಿವೇದ್ರಂ ಅತ್ಯಂತ ಹತ್ತಿರದ ಸ್ಥಳವಾಗಿದೆ. ಇದು ಇಲ್ಲಿಂದ 165 ಕಿ.ಮೀ ದೂರದಲ್ಲಿದೆ. ಕೊಚ್ಚಿ, ಬೆಂಗಳೂರು, ಕೊಯಮತ್ತೂರ್ ಮತ್ತು ಚೆನ್ನೈಗಳಿಂದ ತಿರುನೆಲ್ವೇಲಿಗೆ ಉತ್ತಮ ರಸ್ತೆ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತಿರುನೆಲ್ವೇಲಿಗೆ ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ನಗರದ ರೈಲು ನಿಲ್ದಾಣವು ದೇಶದ ಪ್ರಮುಖ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ತಿರುನೆಲ್ವೇಲಿಯಿಂದ ತಮಿಳುನಾಡಿನ ಚೆನ್ನೈ, ಮಧುರೈ, ತಂಜಾವೂರ್ ಮತ್ತು ಕೊಯಮತ್ತೂರ್ ಮುಂತಾದ ನಗರಗಳಿಗೆ ಉತ್ತಮ ರೈಲು ಸಂಪರ್ಕವಿದೆ. ನೆರೆಯ ಕೇರಳ ರಾಜ್ಯದಿಂದ ಹಲವಾರು ರೈಲುಗಳು ತಿರುನೆಲ್ವೇಲಿಗೆ ಬಂದು ಹೋಗುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತಿರುನೆಲ್ವೇಲಿಗೆ ಸಮೀಪದ ವಿಮಾನ ನಿಲ್ದಾಣ ಮಧುರೈನಲ್ಲಿದೆ. ಈ ವಿಮಾನ ನಿಲ್ದಾಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಬಂದು ಹೋಗುವ ವ್ಯವಸ್ಥೆಯನ್ನು ಹೊಂದಿದೆ. ನೀವು ತಿರುನೆಲ್ವೇಲಿಗೆ ವಿಮಾನದಲ್ಲಿ ಬರಬೇಕೆಂದರೆ ಮೊದಲು ಮಧುರೈವರೆಗು ವಿಮಾನದಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಅಥವಾ ರಸ್ತೆ ಮೂಲಕ ಮಧುರೈ ತಲುಪಬೇಕು. ಮಧುರೈನಿಂದ ತಿರುನೆಲ್ವೇಲಿಗೆ 154 ಕಿ.ಮೀ ದೂರವಾಗುತ್ತದೆ. ಇಲ್ಲಿಗೆ ತಲುಪುವ ರಸ್ತೆಗಳು ಅತ್ಯುತ್ತಮವಾಗಿವೆ. ಆಗಾಗಿ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat