ಕುಟ್ರಾಲಂ, ಇಲ್ಲಿನ ಒಂಬತ್ತು ಜಲಪಾತಗಳಿಗೆ ಪ್ರಸಿದ್ಧವಾಗಿದೆ. 60 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಪೆರಾರುವಿ, ಮುಖ್ಯ ಜಲಪಾತವಾಗಿದೆ. ಚಿತ್ರರುವಿ ಅಥವಾ ಸಣ್ಣ ಜಲಪಾತ ಶೆನ್ಬಗ ದೇವಿ ಜಲಪಾತ ಮತ್ತು ತೆನರುವಿ ಜಲಪಾತಕ್ಕೆ ಕಾರಣವಾಗಿದೆ. ಶೆನ್ಬಗ ದೇವಿ ಜಲಪಾತ ಶೆನ್ಬಗ ಮರಗಳ ಮೂಲಕ ಪ್ರವಹಿಸುತ್ತದೆ.
ತೆನರುವಿ ಅಥವಾ ಹನಿ ಜಲಪಾತ 40 ಮೀ. ಎತ್ತರದಿಂದ ಬೀಳುತ್ತಿದ್ದು ಈ ಜಲಪಾತ ಒಣಗಿದಾಗ ದೊಡ್ಡ ಜೇನುಹುಟ್ಟನ್ನು ಕಾಣಬಹುದು. ಐಂತರುವಿ ಅಥವಾ ಐದು ಜಲಪಾತಗಳು ಒಳಗೆ ಪ್ರತ್ಯೇಕವಾಗಿ ಕಂಡುಬರುತ್ತವೆ. ಪಜಾತೊಟ್ಟ ಅರುಹಿ ಜಲಪಾತವನ್ನು ವಿಐಪಿ ಜಲಪಾತ ಎಂದೇ ಕರೆಯಲಾಗುತ್ತದೆ.
ಪಜಾಯಾ ಕುಟ್ರಾಲ ಅರುಹಿ ಅಥವಾ ಹಳೆಯ ಕುಟ್ರಾಲಂ ಜಲಪಾತ (ಓಲ್ಡ್ ಕುಟ್ರಾಲಂ) ಬದಲಾಗಿದ್ದು ಮತ್ತೆ ಈಗ ಅದನ್ನು ಪ್ರವಾಸಿಗರ ಪ್ರವೇಶಕ್ಕೆ ತೆರೆಯಲಾಗಿದೆ. ಪುಲಿ ಅರುವಿ ಅಥವಾ ಟೈಗರ್ ಜಲಪಾತ, ಇಲ್ಲಿನ ನೀರನ್ನು ಕುಡಿಯಲು ಆಗಾಗ್ಗೆ ಹುಲಿಗಳು ಬರುತ್ತಿದ್ದರಾದ್ದರಿಂದ ಈ ಹೆಸರನ್ನು ಪಡೆದುಕೊಂಡಿದೆ.