Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಹವಾಮಾನ

ತೇಣಿ ಹವಾಮಾನ

ಇದು ಸ್ಥಳಗಳನ್ನು ನೋಡಲು, ಸುತ್ತಾಡಲು, ಮತ್ತಿತ್ತರ ಚಟುವಟಿಕೆಗಳನ್ನು ನಡೆಸಲು ಸೂಕ್ತವಾದ ಸಮಯ. ‘ಇದು ತೇಣಿಗೆ ಪ್ರವಾಸಕ್ಕೆ ತೆರಳಲು ಅತ್ಯುತ್ತಮ ಸಮಯ’.

ಬೇಸಿಗೆಗಾಲ

ತೇಣಿಯಲ್ಲಿ ಬೇಸಿಗೆಯ ಧಗೆ ಅತ್ಯಧಿಕವಾಗಿರುತ್ತದೆ. ಮಾರ್ಚ್ನಿಂದ ಮೇವರೆಗಿನ ಬೇಸಿಗೆ ಸಮಯದಲ್ಲಿ ಈ ಪ್ರದೇಶದಲ್ಲಿ 29 ಡಿಗ್ರಿ ಸೆಲ್ಶಿಯಸ್ ನಿಂದ 40 ಡಿಗ್ರಿ ಸೆಲ್ಶಿಯಸ್ವರೆಗೆ ಉಷ್ಣತೆಯಿರುತ್ತದೆ. ಇದು ತೇಣಿಗೆ ಭೇಟಿ ನೀಡಲು ಸೂಕ್ತ ಸಮಯವಲ್ಲ. ಒಂದು ವೇಳೆ ಈ ಸಮಯದಲ್ಲಿ ಭೇಟಿ ನೀಡುವುದಾದರೆ ಹತ್ತಿಯ ಬಟ್ಟೆಗಳನ್ನು ಮತ್ತು ಸನ್ ಸ್ಕ್ರೀನ್ ಕ್ರೀಂಗಳನ್ನು ಒಯ್ಯುವುದು ಉತ್ತಮ.

ಮಳೆಗಾಲ

ಮಳೆಗಾಲದಲ್ಲಿ ವರ್ಷಧಾರೆಯು ಇಲ್ಲಿನ ಉಷ್ಣತೆಯನ್ನು ಕಡಿಮೆಮಾಡುತ್ತದೆ. ಜೂನ್-ಆಗಸ್ಟ ವರೆಗೆ ಇಲ್ಲಿ ಮಳೆಗಾಲ. ಈ ಸಮಯದಲ್ಲಿ ತೇಣಿಯಲ್ಲಿ ಹವಾಮಾನವು ತಂಪಾಗಿರುತ್ತದೆ. ಆಣೆಕಟ್ಟುಗಳು ಮತ್ತು ಜಲಪಾತಗಳು ಮೈತುಂಬಿರುತ್ತವೆ. ಇದು ಪ್ರವಾಸಕ್ಕೆ ಸೂಕ್ತ ಸಮಯ. ಕೊಡೆಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ.

ಚಳಿಗಾಲ

ಇಲ್ಲಿ ಚಳಿಗಾಲವು ಅಕ್ಟೋಬರ್ ನಿಂದ ಫೆಬ್ರವರಿವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣತೆಯು 20 ಡಿಗ್ರಿ ಇಂದ 29 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಇದಕ್ಕಿಂತ ಹೆಚ್ಚಾಗಿರುವುದಿಲ್ಲ. ಇದು ಸ್ಥಳಗಳನ್ನು ನೋಡಲು, ಸುತ್ತಾಡಲು, ಮತ್ತಿತ್ತರ ಚಟುವಟಿಕೆಗಳನ್ನು ನಡೆಸಲು ಸೂಕ್ತವಾದ ಸಮಯ. ‘ಇದು ತೇಣಿಗೆ ಪ್ರವಾಸಕ್ಕೆ ತೆರಳಲು ಅತ್ಯುತ್ತಮ ಸಮಯ’.