Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಆಕರ್ಷಣೆಗಳು » ಮೇಘಮಲೈ ಗಿರಿಪ್ರಾಂತ್ಯ

ಮೇಘಮಲೈ ಗಿರಿಪ್ರಾಂತ್ಯ, ತೇಣಿ

3

ಮೇಘಮಲೈ ಗಿರಿಶ್ರೇಣಿಯು ತೇಣಿಯಿಂದ 70 ಕಿಮೀ ದೂದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿದೆ. ಇದು ಸಮುದ್ರ ಮಟ್ಟದಿಂದ 500 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಪ್ರಾಕೃತಿಕ ಸಂಪತ್ತು ಮತ್ತು ವನ್ಯಜೀವಿಗಳು ಹೇರಳವಾಗಿವೆ. ಇಲ್ಲಿ ಸುಮಾರು 100 ಬಗೆಯ ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಇದು ಪಕ್ಷಿವೀಕ್ಷಕರಿಗೆ ಪ್ರಿಯವಾದ ತಾಣ. ಇಲ್ಲಿನ ಜೈವಿಕ ವೈವಿಧ್ಯವನ್ನು ಕಾಪಾಡುವ ಸಲುವಾಗಿ ತಮಿಳುನಾಡು ಸರ್ಕಾರವು ಇದನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ.

ಈ ಗಿರಿ ಪಂಕ್ತಿಯು ಹಲವು ರೀತಿಯ ಪ್ರಾಣಿಗಳಿಗೆ, ಸರೀಸೃಪಗಳಿಗೆ ಮತ್ತು ಚಿಟ್ಟೆಗಳಿಗೆ ತವರು ಮನೆ. ಇಲ್ಲಿ ಚಿರತೆ, ಹುಲಿ, ಕಾಡು ಹಂದಿ, ನೀಲಗಿರಿ ತಾರ್, ಮುಳ್ಳು ಹಂದಿ, ಕಾಡೆತ್ತು, ಹಾರುವ ಅಳಿಲು, ಚುಕ್ಕೆ ಜಿಂಕೆ, ಕಪ್ಪು ಕರಡಿ, ಊಳಿಡುವ ಜಿಂಕೆ, ಮೃದು ಚರ್ಮದ ನೀರುನಾಯಿ, ಸಾಂಬಾರು ಜಿಂಕೆ, ಉದ್ದಬಾಲದ ಕೋತಿ, ನೀಲಗಿರಿ ಕೋತಿಗಳು, ಸಾಧಾರಣ ಕೋತಿಗಳು ಇನ್ನೂ ಹಲವು ಬಗೆಯ ಪ್ರಾಣಿಗಳನ್ನು ಇಲ್ಲಿ ಕಾಣಬಹುದು.

ಈ ಸ್ಥಳವು ಟೀ ಮತ್ತು ಏಲಕ್ಕಿ ತೋಟಗಳಿಗೆ ಪ್ರಸಿದ್ಧವಾದದ್ದು. ಆದರೆ ಹೆಚ್ಚಿನ ಭೂಪ್ರದೇಶವು ಅರಣ್ಯದಿಂದ ಆವೃತವಾಗಿದೆ. ಇಲ್ಲಿ ಮೆಣಸು ಮತ್ತು ದಾಲ್ಚಿನ್ನಿಯನ್ನು ಕೂಡ ಬೆಳೆಯುತ್ತಾರೆ. ಮೇಘಮಲೈ ಹೆಸರೇ ಹೇಳುವಂತೆ ಇವು ಮೋಡಗಳನ್ನು ಚುಂಬಿಸುವಷ್ಟು ಎತ್ತರವಾಗಿದೆ. ಈ ಎತ್ತರದ ಕಾರಣದಿಂದಲೇ ಸುತ್ತಲ ಪ್ರದೇಶಗಳ ಸುಂದರ ನೋಟಗಳನ್ನು ಇಲ್ಲಿಂದ ನೋಡಬಹುದು. ಈ ಗಿರಿಶ್ರೇಣಿಯಲ್ಲೇ ಸುರುಳಿ ಜಲಪಾತ ಮತ್ತು ಮೇಘಮಲೈ ಜಲಪಾತಗಳು ಹುಟ್ಟುವುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri