ಆಳಿಯಾರ್ ಡ್ಯಾಂ ಪೊಲ್ಲಾಚಿಯಿಂದ 24 ಕಿ.ಮೀ ದೂರದಲ್ಲಿದೆ. ಆಳಿಯಾರ್ ನದಿಗೆ ಅಡ್ಡಲಾಗಿ 1959 ರಿಂದ 1969 ನಡುವಿನಲ್ಲಿ ನೀರಾವರಿ ಉದ್ದೇಶದಿಂದ ಈ ಡ್ಯಾಂ ಅನ್ನು ನಿರ್ಮಿಸಲಾಯಿತು. ಆಣೆಕಟ್ಟು 81ಮೀಟರ್ ಎತ್ತರವಿದ್ದು, ತಾಂತ್ರಿಕತೆಯ ದೃಷ್ಟಿಯಿಂದ ಉತ್ಕೃಷ್ಟ ಉದಾಹರಣೆಯಾಗಿದೆ. ಇಂದು ಇದೊಂದು ಸಂತೋಷದಿಂದ ಸಮಯ ಕಳೆಯಬಹುದಾದ ಒಂದು ಉತ್ತಮ ಪಿಕ್ನಿಕ್ ತಾಣವೂ ಹೌದು.