ಮುತುಗಾಪಟ್ಟಿ ಪೆರಿಯಸ್ವಾಮಿ ದೇವಸ್ಥಾನವು ಕೊಳ್ಳಿ ಬೆಟ್ಟದ ಕೆಳಭಾಗದಲ್ಲಿ ನೆಲಸಿದೆ. ಈ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಇದು ಅತ್ಯಂತ ಜನಪ್ರಿಯ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ರೈತರ ದೇವರಿಗೆ ಸಮರ್ಪಿಸಲಾಗಿದೆ. ಈ ದೆವಾಸ್ಥಾನದ ವಿಗ್ರಹವು ಒಂದು ಆಲದಮರದ ಕೆಳಗೆ ತೆರೆದ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಅನೇಕ ಭಕ್ತರು ಭಾನುವಾರದಿನದಂದು ರೈತರ ದೇವರನ್ನು ಪೂಜಿಸಲೋಸುಗ ಮುತುಗಾಪಟ್ಟಿ ಪೆರಿಯಸ್ವಾಮಿ ದೇವಸ್ಥಾನದಲ್ಲಿ ಸೇರುತ್ತಾರೆ.