ತಿರುಮನಂಚೇರಿ: ಮದುವೆಯ ಕನಸನ್ನು ನನಸು ಮಾಡುವ ತಾಣ

ತಮಿಳು ನಾಡು ಹಲವು ಪ್ರಸಿದ್ಧ ದೇವಾಲಯ ನಗರಗಳ ತವರೂರಾಗಿದೆ. ಇದು ಪ್ರವಾಸಿಗಳ ಮನಸ್ಸಿನಲ್ಲಿಯೂ ಇಂತಹುದೇ ಒಂದು ಜಾಗ ಮಾಡಿದೆ. ತಿರುಮನಂಚೇರಿ ಹಲವು ವಿಷಯಗಳಲ್ಲಿ ವಾಸ್ತುಶಿಲ್ಪದ ವಿವಿಧತೆಯ ನಗರವಾಗಿದೆ. ನಾಗಪಟ್ಟಿನಂ ಜಿಲ್ಲೆಯ ಕಾವೇರಿ ನದಿ ದಡದಲ್ಲಿ ಈ ಪಟ್ಟಣವಿದೆ. ಇಲ್ಲಿ ಹಲವು ನಗರಗಳು ಶೈವ ವಾದದ ಕೇಂದ್ರ ನಗರಗಳು ಎಂದು ಹೆಸರುವಾಸಿಯಾಗಿದೆ. ತಿರುಮನಂಚೇರಿ ಇಂತಹುದೇ ಇನ್ನೊಂದು ನಗರವಾಗಿದೆ.

ಇಲ್ಲಿನ ಪ್ರಸಿದ್ಧ ದೇವಾಲಯದಲ್ಲಿ ಶಿವ ದೇವರ ಆರಾಧನೆಯನ್ನು ಮಾಡಲಾಗುತ್ತದೆ. ಈ ದೇವಸ್ಥಾನದ ವಿಶೇಷತೆಯೆನೆಂದರೆ, ಯಾರು ತಮ್ಮ ಜೀವನದ ಸಂಗಾತಿಯ ಹುಡುಕಾಟದಲ್ಲಿರುತ್ತಾರೊ ಅವರು ಮಾತ್ರ ಪೂಜೆ ಮಾಡುತ್ತಾರೆ. ’ತಿರುಮನನ್’ ಎಂದರೆ ಮದುವೆ ಎಂದರ್ಥ ಹಾಗು ’ಚೇರಿ’ ಎಂದರೆ ಗ್ರಾಮ ಅಥವಾ ಹಳ್ಳಿ ಎಂದರ್ಥ. ಇಲ್ಲಿನ ಸ್ಥಳೀಯ ಪ್ರತೀತಿಯ ಪ್ರಕಾರ, ಇಲ್ಲಿ ಶಿವನು ಪಾರ್ವತಿ ದೇವಿಯನ್ನು ಮದುವೆಯಾಗಿದ್ದನು. ಸರಿಯಾದ ಜೀವನ ಸಂಗಾತಿಯನ್ನು ಹುಡುಕಲು ಆಗದೇ ಇರುವವರು ಇಲ್ಲಿ ಬಂದು ಪೂಜೆ ಸಲ್ಲಿಸಿದರೆ ಬೇಗ ಮದುವೆಯ ಯೋಗ ಕೂಡಿ ಬರುವುದು ಎಂದು ಜನ ನಂಬುತ್ತಾರೆ.

ಈ ನಗರವು ರಸ್ತೆ ಹಾಗೂ ರೈಲುಮಾರ್ಗದ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಗೆ ಸಮೀಪವಿರುವ ರೈಲ್ವೆ ನಿಲ್ದಾಣವೆಂದರೆ ಮಯಿಲಾದುತರೈ ಜಂಕ್ಷನ್ ಹಾಗೂ ಈ ನಗರವು ಕುಂಭಕೋಣಂ ರೈಲ್ವೆ ನಿಲ್ದಾಣಕ್ಕೆ ಸಮೀಪದಲ್ಲಿದೆ. ಈ ರಸ್ತೆಯನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಚೆನ್ನೈಯಿಂದ ಪಾಂಡಿಚೆರಿ-ಕುಡ್ಡಲೋರ್ ರಸ್ತೆಯ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ತಿರುಮನಂಚೇರಿಯ ಹವಾಮಾನವೂ ಬಹಳ ಆಹ್ಲಾದಕರವಾಗಿರುತ್ತದೆ. ಹಾಗಾಗಿ ಇಲ್ಲಿಗೆ ಹವಾಮಾನದ ಆಧಾರದ ಮೇಲೆ ನಿಮ್ಮ ಪ್ರವಾಸವನ್ನು ನಿಗದಿ ಪಡಿಸಬೇಕಾಗಿಲ್ಲ. ಇಲ್ಲಿ ವರ್ಷಪೂರ್ತಿ ಒಂದೆ ತರನಾದ ವಾತಾವರಣ ಇರುತ್ತದೆ.

Please Wait while comments are loading...