Search
 • Follow NativePlanet
Share
ಮುಖಪುಟ » ಸ್ಥಳಗಳು» ಪೂಂಪುಗಾರ್

ಪೂಂಪುಗಾರ್ - ಗತಕಾಲ ವೈಭವದ ಬಂದರು ನಗರ

13

ಪೂಂಪುಗಾರ್ ಅಥವಾ ಪುಗಾರ್ ತಮಿಳುನಾಡಿನ ನಾಗಪಟ್ಟಿಣಮ್ ಜಿಲ್ಲೆಯಲ್ಲಿನ ಒಂದು ನಗರ. ಇದು ಹಳೆಯ ಕಾಲದಲ್ಲಿ ಗಿಜಿಗುಡುವ ಬಂದರು ಎಂದೇ ಪ್ರಖ್ಯಾತವಾಗಿತ್ತು. ಇದರ ಹಳೆಯ ಹೆಸರು ಕಾವೇರಿ ಪುಹಂ ಪಟ್ಟಿಣಮ್ ಎಂದಾಗಿತ್ತು. ಹಿಂದೆ ತಮಿಳುನಾಡನ್ನು ಆಳುತ್ತಿದ್ದ ಚೋಳರ ಅಲ್ಪಕಾಲದ ರಾಜಧಾನಿ ಇದಾಗಿತ್ತು. ಪೂಂಪುಗಾರ್, ಕಾವೇರಿ ನದಿಯು ಸಮುದ್ರ ಸೇರುವ ಜಾಗಕ್ಕೆ ತುಂಬಾ ಹತ್ತಿರದಲ್ಲಿದೆ. ಈ ನಗರದ ಹೆಚ್ಚಿನ ಭಾಗವು ಕ್ರಿ.ಶ 500 ರಲ್ಲಿನ ಸುನಾಮಿ ಯಲ್ಲಿ ನಾಮಾವಶೇಷವಾಯಿತು. ಹೀಗಿದ್ದರೂ, ಹಳೆಯ ಕಾಲದ ಮಣ್ಣಿನ ಮಡಿಕೆ ಹಾಗೂ ವಿಗ್ರಹಗಳು ಈ ಸ್ಥಳದಲ್ಲಿ ಪತ್ತೆಯಾಗಿವೆ. ಇದು ತಮಿಳುನಾಡಿನ ಮೊದಲ ಜನವಾಸಸ್ಥಳವೆಂದು ನಂಬಲಾಗುತ್ತದೆ. ಇಂದು ಪೂಂಪುಗಾರ್ ನ ಜನಸಂಖ್ಯೆ 86000 ದಷ್ಟಿದೆ.

ಪೂಂಪುಗಾರ್ ನ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳು

ಇಲ್ಲಿ ಹತ್ತಿರದ ಪ್ರಖ್ಯಾತವಾದ ಎರಡು ಪ್ರೇಕ್ಷಣೀಯ ಸ್ಥಳಗಳೆಂದರೆ ಮಸಿಳಮಣಿ ನಾಥರ್ ಕೋವಿಲ್ ಮತ್ತು ಸಿಳಪ್ಪಡಿಗರ ಆರ್ಟ್ ಗ್ಯಾಲರಿ. ಮಸಿಳಮಣಿ ನಾಥರ್ ಕೊವಿಲ್ ಅನ್ನು ಕ್ರಿ.ಶ 14 ನೇ ಶತಮಾನದಲ್ಲಿ ಕಟ್ಟಲಾಗಿದ್ದು, ಇದು ಕಡಲ್ಕೊರೆತಕ್ಕೆ ಒಳಗಾಗಿರುವುದನ್ನು ಕಾಣಬಹುದು. ಇದು ಆಗಿನ ಕಾಲದ ವಾಸ್ತುಕಲೆಯ ವೈಭವ ಸಾರುತ್ತಾ ಈಗಲೂ ಎದ್ದು ನಿಂತಿದೆ.

ಸಿಳಪ್ಪಡಿಗರ ಆರ್ಟ್ ಗ್ಯಾಲರಿ 7 ಮಹಡಿಯ ಕಟ್ಟಡವಾಗಿದ್ದು, ತಮಿಳಿನ ಮಹಾಕಾವ್ಯವಾದ ಸಿಳಪ್ಪಡಿಗರಮ್ ಗೆ ಮೀಸಲಿಡಲಾಗಿದೆ. ಡ್ಯಾನಿಷ್ ಗವರ್ನರ್ ಬಂಗಲೆ, ಟೌನ್ ಗೇಟ್ವೇ, ಪೂಂಪುಗಾರ್ ಬೀಚ್ ಹಾಗೂ ಜ್ಹಿಯೋನ್ ಚರ್ಚ್ ಇಲ್ಲಿನ ಇತರ ಆಕರ್ಷಣೆಗಳು.

ಪೂಂಪುಗಾರ್ ತಲುಪುವ ಬಗೆ

ಇಲ್ಲಿಗೆ ತಲುಪಲು ರಸ್ತೆ ಸೌಕರ್ಯ ಉತ್ತಮವಾಗಿದೆ. ಇಲ್ಲಿನ ಹತ್ತಿರದ ನಗರಗಳು ನಾಗಪಟ್ಟಿಣಮ್ ಹಾಗೂ ತಿರುಚ್ಚಿ. ಇಲ್ಲಿಗೆ ರೈಲು ಮಾರ್ಗವಾಗಿ ಕೂಡಾ ಹೋಗಬಹುದು. ಇಲ್ಲಿಗೆ ಹತ್ತಿರದ ರೈಲು ನಿಲ್ದಾಣವು ನಾಗಪಟ್ಟಿಣಮ್ ನಲ್ಲಿದೆ. ಇಲ್ಲಿಂದ ಪೂಂಪುಗಾರ್ ಗೆ  ಬಸ್ ವ್ಯವಸ್ಥೆಯೂ ಇದೆ.

ಪೂಂಪುಗಾರ್ ಹವಾಮಾನ

ಪೂಂಪುಗಾರ್ ತೀರಪ್ರದೇಶವಾದ ಕಾರಣ ವರ್ಷದ ಬಹುಭಾಗವೂ ಇಲ್ಲಿ ತುಂಬಾ ಸೆಖೆ ಹಾಗೂ ಶೈತ್ಯವಿರುತ್ತದೆ. ಬೇಸಿಗೆಗಾಲವು ತುಂಬಾ ಬಿಸಿಯಾಗಿದ್ದು, ಚಳಿಗಾಲ ಅಂದರೆ ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳ ನಡುವಿನ ಕಾಲ ಸ್ವಲ್ಪ ತಂಪಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ಇದುವೇ ಸೂಕ್ತ ಸಮಯ.

ಪೂಂಪುಗಾರ್ ಪ್ರಸಿದ್ಧವಾಗಿದೆ

ಪೂಂಪುಗಾರ್ ಹವಾಮಾನ

ಪೂಂಪುಗಾರ್
36oC / 97oF
 • Haze
 • Wind: WSW 19 km/h

ಉತ್ತಮ ಸಮಯ ಪೂಂಪುಗಾರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೂಂಪುಗಾರ್

 • ರಸ್ತೆಯ ಮೂಲಕ
  ಪೂಂಪುಗಾರ್ ಗೆ ರಸ್ತೆ ಮಾರ್ಗವಾಗಿ ಹೋಗುವುದು ಒಂದು ಒಳ್ಳೆಯ ಆಯ್ಕೆ. ಇಲ್ಲಿಂದ ಪಕ್ಕದ ನಗರಗಳಾದ ನಾಗಪಟ್ಟಿನಮ್ ಹಾಗೂ ತಿರುಚ್ಚಿಗೆ ಆಗಾಗ್ಗೆ ಬಸ್ ವ್ಯವಸ್ಥೆಯಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಪೂಂಪುಗಾರ್ ಗೆ ಹತ್ತಿರದ ರೈಲು ನಿಲ್ದಾಣ ನಾಗಪಟ್ಟಿನಮ್ ನಲ್ಲಿದೆ. ನಾಗಪಟ್ಟಿನಮ್ ಗೆ ಭಾರತದ ಎಲ್ಲಾ ಪ್ರಮುಖ ನಗರಗಳಿಂದ ರೈಲು ವ್ಯವಸ್ಥೆಯಿದೆ. ನಾಗಪಟ್ಟಿಣಮ್ ನಿಂದ ಪೂಂಪುಗಾರ್ ಗೆ ಬಸ್ ವ್ಯವಸ್ಥೆಯಿದೆ. ಬಸ್ ದರ ಒಬ್ಬರಿಗೆ 50 ರೂಪಾಯಿಗಳು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  140 ಕಿ.ಮೀ ದೂರದ ತಿರುಚ್ಚಿಯಲ್ಲಿರುವ ವಿಮಾನ ನಿಲ್ದಾಣ ಪೂಂಪುಗಾರ್ ಗೆ ಹತ್ತಿರದಲ್ಲಿದೆ. ಹತ್ತಿರದ ಇನ್ನೊಂದು ವಿಮಾನ ನಿಲ್ದಾಣ 256 ಕಿ.ಮೀ ದೂರದಲ್ಲಿನ ಚೆನ್ನೈನಲ್ಲಿದೆ. ಈ ಎರಡೂ ನಗರಗಳಿಗೆ ಬೇರೆ ನಗರಗಳಿಂದ ವಿಮಾನ ಸೌಕರ್ಯವಿದೆ. ಈ ಎರಡೂ ನಗರಗಳಿಂದ ಪೂಂಪುಗಾರ್ ಗೆ ರಸ್ತೆ ಸೌಕರ್ಯವಿದೆ. ಯಾತ್ರಾರ್ಥಿಗಳು ವಿಮಾನದಲ್ಲಿ ತೆರಳಿ, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಪೂಂಪುಗಾರ್ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Jun,Mon
Return On
18 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jun,Mon
Check Out
18 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jun,Mon
Return On
18 Jun,Tue
 • Today
  Poompuhar
  36 OC
  97 OF
  UV Index: 8
  Haze
 • Tomorrow
  Poompuhar
  26 OC
  80 OF
  UV Index: 7
  Patchy rain possible
 • Day After
  Poompuhar
  32 OC
  89 OF
  UV Index: 9
  Partly cloudy