ಕೊವ್ಲಾಂಗ್(ಕೊವಲಂ) ಬೀಚ್ - ಏಕೈಕ ವಿಂಡ್ ಸರ್ಫಿಂಗ್ ತಾಣ

ಕೊವಲಂ, ತಮಿಳುನಾಡಿನ ಕರಾವಳಿಯಲ್ಲಿರುವ ಒಂದು ಮೀನುಗಾರಿಕೆ ಗ್ರಾಮವಾಗಿ, ಕಡಲತೀರದ ಪ್ರಿಯರಿಗೆ ನಿಜವಾದ ಮಹದಾನಂದ ಸಿಗುವ ತಾಣ.  ಇದು ಚೆನ್ನೈ ಊರಿಗೆ ಹೆಚ್ಚು ಕಡಿಮೆ ಸಮೀಪದಲ್ಲಿದ್ದು ಅನೇಕ ವಿಧದಲ್ಲಿ ಒಂದು ವಾರಾಂತ್ಯದ ವಿಹಾರ ಧಾಮವಾಗಿದೆ. ಹಿಂದೆ ಡಚ್ಚರು ಕಟ್ಟಿದ್ದ ಅರಮನೆ ಕೋಟೆಯನ್ನು ಒಂದು ವಿಹಾರ ಧಾಮವಾಗಿ ಪರಿವರ್ತನೆಗೊಂಡಿದೆ ಮತ್ತು ಅನೇಕ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ತಾಜ್ ಮೀನುಗಾರರ ಕೊಲ್ಲಿ (Taj Fisherman’s Cove) ಎಂಬ ಹೆಸರಿನಿಂದ ಕರೆಯಲ್ಪಟ್ಟ ಈ ತಾಣವು ಇದಾಗಿದ್ದು, ನಿಮ್ಮ ಕಾಲುಗಳನ್ನು ಚಾಚಿಕೊಂಡು ಪರಿಪೂರ್ಣ ವಿಶ್ರಾಂತಿ ಪಡೆಯಬಹುದಾಗಿದೆ ಅರ್ಥಾತ್ ವಿರಾಮ ಸಮಯವನ್ನು ಸುಖಕರವಾಗಿ ಕಳೆಯಬಹುದಾಗಿದೆ.  

ಕೋವಲಂನ ಸುತ್ತ ಮುತ್ತಲಿರುವ ಪ್ರವಾಸಿ ಸ್ಥಳಗಳು:

ಇಲ್ಲಿನ ಒಂದು ಪ್ರಮುಖ ಆಕರ್ಷಣೆಯೆಂದರೆ ರಿಸಾರ್ಟ್ನಿಂದ ವಿಸ್ತಾರವಾದ ಪ್ರಶಂಸನೀಯ ಕೋವಲಂ ಸಮುದ್ರ ತೀರವನ್ನು ಕಾಣಬಹುದಾಗಿದೆ.

5 ಮತ್ತು 8ನೇ ಶತಮಾನಕ್ಕೆ ಸೇರಿದ ದೇವಸ್ಥಾನಗಳು ಕೋವಲಂನಲ್ಲಿ ಇರುವ ಇತರ ಆಕರ್ಷಣೆಗಳು. ಪಲ್ಲವ ರಾಜವಂಶದವರು ಕಟ್ಟಿಸಿರುವ ಈ ದೇವಸ್ಥಾನಗಳು ದಕ್ಷಿಣ ಭಾರಾತೀಯ ಸಾಮ್ರಾಜ್ಯಗಳ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು  ಪ್ರದರ್ಶಿಸುತ್ತವೆ.

ಸಮುದ್ರ ತೀರದಲ್ಲಿರುವ ದೇವಸ್ಥಾನಗಳು ಕೋವಲಂನ ಪ್ರಮುಖ ಆಕರ್ಷಣೆಗಳಲ್ಲದೆ ಈ ವಲಯದ ಪ್ರವಾಸೋದ್ಯಮ ಮೌಲ್ಯವನ್ನು ಹೆಚ್ಚಿಸಿದೆ. ಕೋವಲಂನಲ್ಲಿ ಅನೇಕ ಜಲಕ್ರೀಡೆಗಳ ಅವಕಾಶಗಳೂ ಸಹ ಇರುತ್ತದೆ ಮತ್ತು ಭಾರತದಲ್ಲಿ ವಿಂಡ್ಸರ್ಫಿಂಗ್ಗೆ ವಿಫುಲವಾದ ಅವಕಾಶವಿರುವ ಏಕೈಕ ತಾಣವಾಗಿದೆ.

ಮಹಾನ್ ಬಂಗಾಳಕೊಲ್ಲಿಯಲ್ಲಿ ಸಮಾನಾಂತರವಾಗಿ ಚಾಲನೆಯಾಗುತ್ತಿರುವ ಕಾಲುವೆಯು, ಮುಖ್ಯಭೂಮಿಯಿಂದ ಕೋವಲಂ ಅನ್ನು ಬೇರ್ಪಡಿಸುತ್ತದೆ.  ಕೋವಲಂ ಬೀಚ್, ಕ್ಯಾಥೊಲಿಕ್ ಚರ್ಚ್, ಡಚ್ ಕೋಟೆ ಮತ್ತು ಮುತ್ತುಕಾಡು ಹಿನ್ನೀರು (Backwaters) ಇತರ ಪ್ರಧಾನ ಆಕರ್ಷಣೆಗಳಾಗಿವೆ.

ಕೋವಲಂ ಹವಾಮಾನ:

ತಮಿಳುನಾಡಿನ ಕಡಲತೀರದ ವಿಶಿಷ್ಟವಾದ ಅದೇ ಬಿಸಿ ಮತ್ತು ತೇವಪೂರಿತ ವಾತಾವರಣವು ಕೋವಲಂನಲ್ಲಿ ಕೂಡ ಅನುಭವಿಸಬಹುದು. ಬೇಸಗೆಯ ಕಾಲದಲ್ಲಿ ತಾಪಮಾನವು ಅತೀ ಹೆಚ್ಚಾದ 38 ಡಿಗ್ರಿ ಸೆಲ್ಸಿಯುಸ್ನಷ್ಟು ಇರುವುದರಿಂದ ಕೋವಲಂಗೆ  ಪ್ರಯಾಣಮಾಡುವುದು ಸೂಕ್ತವಲ್ಲ. ಚಳಿಗಾಲದ ಕಾಲದಲ್ಲಿ ಕೋವಲಂಗೆ  ಅಕ್ಟೋಬರ‍್ನಿಂದ ಮಾರ್ಚ್ ತನಕ ಪ್ರಯಾಣಮಾಡುವುದು ಅತ್ಯುತ್ತಮವಾಗಿರುತ್ತದೆ.

ಕೋವಲಂ ತಲಪುವುದು ಹೇಗೆ?

ಟ್ರಾಂಕಬಾರ್, ಪಾಂಡಿಚೇರಿ ಮತ್ತು ಚೆನ್ನೈ ಹತ್ತಿರ ಇರುವ ಈ ಪ್ರದೇಶವು ರಸ್ತೆಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

Please Wait while comments are loading...