Search
 • Follow NativePlanet
Share
ಮುಖಪುಟ » ಸ್ಥಳಗಳು» ಶ್ರೀಪೆರುಂಬುದೂರು

ಶ್ರೀಪೆರುಂಬುದೂರು: ಸ್ಮಾರಕಗಳು, ಜನಾಂಗಗಳು ಹಾಗೂ ಉದ್ಯಮಗಳ ನಗರ

15

ತಮಿಳುನಾಡಿನ ಕಾಂಚಿಪುರಂನಲ್ಲಿರುವ ಶ್ರೀಪೆರುಂಬುದೂರು ಒಂದು ಔದ್ಯಮಿಕ ನಗರವಾಗಿದ್ದು ಈಗ ಪ್ರಮುಖ ಪರ್ವಾಸಿ ತಾಣವಾಗಿ ಬೆಳೆಯುತ್ತಿದೆ. ಶ್ರೀಪೆರುಂಬುದೂರಿನ ಹಳೆಯ ಹೆಸರು ಬೋಧಪುರಿಯಾಗಿದೆ ಹಾಗೂ ಇಲ್ಲಿನ ನಂಬಿಕೆಗಳ ಪ್ರಕಾರ ಇಲ್ಲಿ ಯಾರಾದರೂ ಅಸುನೀಗಿದರೆ ಅವರಿಗಾಗಿ ಸ್ವರ್ಗದ ಬಾಗಿತು ತೆರೆದಿರುತ್ತದೆ ಎಂದು ಹೇಳಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಶ್ರೀಬೆರುಂಬುದೂರು ಹಲವು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಇದು ಆಕರ್ಷಿಸಿದ್ದು ಹಲವು ಸಂಸ್ಥೆಗಳ ಮುಖ್ಯ ಕಛೇರಿಗಳು ಇಲ್ಲಿವೆ.

ಹ್ಯೂಂಡಾಯಿ ಮೋಟಾರ್ಸ್ 1999 ರಲ್ಲಿ ಇಲ್ಲಿ ತನ್ನ ಭಾರತದ ಕಾರು ಉತ್ಪಾದನಾ ಘಟಕವನ್ನು ಆರಂಭಿಸುವ ಮೂಲಕ ಕೈಗಾರಿಕಾ ಬೆಳವಣಿಗೆಗೆ ನಾಂದಿ ಹಾಡಿತು. ಈಗ ಸೈಂಟ್ ಗೊಬೇನ್, ನೋಕಿಯಾ, ಫೋರ್ಡ್, ಬಿ.ಎಂ.ಡಬ್ಲ್ಯೂ, ಮಿತ್ಸುಬಿಷಿ, ಹಿಂದುಸ್ತಾನ್ ಮೋಟಾರ್ಸ್ ಹಾಗೂ ಬಹಳ ಇತ್ತೀಚೆಗೆ ನಿಸ್ಸಾನ್ ಕೂಡ ತನ್ನ ಕಛೇರಿಗಳನ್ನು ಇಲ್ಲಿ ಆರಂಭಿಸಿವೆ. ಇದು ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿದ್ದು ಚೆನ್ನೈನಿಂದ ಕೇವಲ 40 ಕಿ.ಮೀ ಗಳ ದೂರದಲ್ಲಿದೆ. ಇಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಔದ್ಯೋಗಿಕ ಪ್ರಗತಿ ಬಹಳ ವೇಗವಾಗಿ ಸಾಗಿದೆ. ಎರಡು ಮಿಲಿಯನ್ ಅಮೇರಿಕನ್ ಡಾಲರ್ ಗಳಿಗೂ ಹೆಚ್ಚಿನ ಹಣವನ್ನು ಇಲ್ಲಿ ಹೂಡಲಾಗಿದೆ. 2008 ರ ಹೊತ್ತಿಗೆ ಇದು ವಿಶೇಷ ಆರ್ಥಿಕ ವಲಯವಾಗಿ ಮಾರ್ಪಟ್ಟಿತು. ಹೀಗಾಗಿ ಇದು ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರವಾಸಿಗಳನ್ನು ಆಕರ್ಷಿಸಿದೆ.

ಶ್ರೀಪೆರುಂಬುದೂರಿನ ಸಮೀಪದ ಪ್ರವ್ಶಿ ಸ್ಥಳಗಳು ಮತ್ತು ಆಕರ್ಷಣೆಗಳು.

ಶ್ರೀಪೆರುಂಬುದೂರು 21 ಮೇ 1991 ರಂದು ಮಾನವ ಬಾಂಬ್ ಮೂಲಕ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಬಲಿ ಪಡೆದ ಕಾರಣಕ್ಕೆ ಒಂದು ರೀತಿಯಲ್ಲಿ ಕುಖ್ಯಾತವಾಗಿದೆ. ಈ ಸ್ಥಳವನ್ನು ತಮಿಳುನಾಡು ಸರ್ಕಾರ ಒಂದು ಸ್ಮಾರಕವನ್ನಾಗಿ ಪರಿವರ್ತಿಸಿದೆ. ರಾಜೀವ್ ಗಾಂಧಿ ಸ್ಮಾರಕಕ್ಕಎ ಪ್ರತಿ ವರ್ಷ ಹಲವಾರು ಪ್ರವಾಸಿಗಳು ಭೇಟಿ ನೀಡಿ ತಮ್ಮ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಾರೆ.

ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ತಾಣ. ’ಮದ್ರಾಸ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್’’’ ಇದು ಪ್ರತಿ ವರ್ಷ ಇಲ್ಲಿನ ರೇಸಿಂಗ್ ಟ್ರಾಕ್ ಆದ ಇರುಂಗಟ್ಟಕೊಟಯಿ ಯಲ್ಲಿ ರೇಸ್ ಅನ್ನು ಆಯೋಜಿಸುತ್ತದೆ. ದಿ ಸೌತ್ ಇಂಡಿಯಾ ರಾಲಿ ಮತ್ತು ದಿ ಆಲ್ ಇಂಡಿಯಾ ಮೋಟಾರ್ ರೇಸ್ ಮೀಟ್ ಅನ್ನು ಮದ್ರಾಸ್ ಮೊಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸುತ್ತದೆ. ಇವರು ಫಾರ್ಮುಲಾ III ರೇಸ್ ಅನ್ನು ಆಯೋಜಿಸಲು ಅನುಮತಿ ಪಡೆದಿದ್ದಾರೆ ಅಲ್ಲದೆ ಇದನ್ನು ವಿಶ್ವದರ್ಜೆಯ ಗುಣಮಟ್ಟದ ರೇಸಿಂಗ್ ಅನ್ನು ಆಯೋಜಿಸುತ್ತಾರೆ. ಹಾಗಾಗಿ ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗಳನ್ನು ನಾವಿಲ್ಲಿ ಕಾಣಬಹುದಾಗಿದೆ.

ಇಲ್ಲಿನ ಇತರೆ ಆಕರ್ಷಣೆಗಳೆಂದರೆ ವಲ್ಲಕೊಟ್ಟಾಯಿ ಮುರುಗನ್ ದೇವಾಲಯ. ಇದು ಶ್ರೀಪೆರುಂಬುದೂರಿನಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ತಂಬರಂ ಥೀಮ್ ಪಾರ್ಕ್ ಇಲ್ಲಿ 1995ರಲ್ಲಿ ನಿರ್ಮಾಣ ಗೊಂಡಿದ್ದು 25 ಕಿ.ಮೀ ಗಳ ದೂರದಲ್ಲಿದೆ. ಮದ್ರಾಸ್ ಅಣುಶಕ್ತಿ ಸ್ಥಾವರ ಹಾಗೂ ಬ್ರಹ್ಮಕುಮಾರೀಸ್ ವಸ್ತುಸಂಗ್ರಹಾಲಯ ಇಲ್ಲಿನ ಇತರೆ ಆಕರ್ಷಣೆಗಳಾಗಿವೆ. ಚೆಂಗಲ್ ಪಟ್ಟು ಗೆ ಇಲ್ಲಿ ಬಂದಾಗ ಖಂಡಿತ ಭೇಟಿ ಕೊಡಬಹುದು. ಇಲ್ಲಿನ ಜನಸಂಖ್ಯೆ ಹೆಚ್ಚಿನ ಲಿಂಗ ಅನುಪಾತ ಮತ್ತು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಈ ನಗರದ ಅಧಿಕೃತ ಭಾಷೆ ತಮಿಳು.

ಶ್ರೀಪೆರುಂಬುದೂರನ್ನು ತಲುಪುವುದು ಹೇಗೆ

ಬೆಂಗಳೂರು ಮತ್ತು ಚೆನ್ನೈ ಎರಡೂ ನಗರಗಳಿಗೆ ಸಮೀಪವಿರುವ ಕಾರಣ ಇಲ್ಲಿಗೆ ತಲುಪುವುದು ಸುಲಭವಾಗಿದೆ. ಎರಡೂ ಮಹಾನಗರಗಳಿಂದ ಇಲ್ಲಿಗೆ ಬಸ್ ಮತ್ತು ರೈಲ್ವೆ ಸಂಪರ್ಕ ಇದೆ. ನಗರದೊಳಗೆ ಸುತ್ತಾಡಲೂ ಕಡಿಮೆ ದರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದೆ.

ಶ್ರೀಪೆರುಂಬುದೂರು ವಾಯುಗುಣ

ಇಲ್ಲಿ ಹೆಚ್ಚಾಗಿ ಉಷ್ಣ ವಾಯುಗುಣ ಇರುತ್ತದೆ. ಬೇಸಗೆಯಲ್ಲಿ ಇಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತನಕ ತಲುಪಿ ಬಹಳ ಬಿಸಿ ಮತ್ತು ಶುಷ್ಕವಾದ ವಾತಾವರಣ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಪ್ರವಾಸ ಕೈಗೊಳ್ಳುವುದು ಅಷ್ಟೊಂದು ಸೂಕ್ತವಲ್ಲ. ಜೂನ್ ನಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್ ತನಕ ಮುಂದುವರಿಯುತ್ತದೆ. ಆ ಅವಧಿಯಲ್ಲಿ ತಾಪಮಾನ ಬಹಳ ಕಡಿಮೆ ಆದರೂ ಶುಷ್ಕತೆ ಹಾಗೆಯೇ ಇರುತ್ತದೆ, ಡಿಸೆಂಬರ್ ನಿಂದ ಫೆಬ್ರವರಿಯ ತನಕ ಇರುವ ಚಳಿಗಾಲ ಶ್ರೀಬೆರುಂಬುದೂರಿಗೆ ಭೇಟಿ ಕೊಡಲು ಅತ್ಯಂತ ಸೂಕ್ತವಾದ ಅವಧಿಯಾಗಿದೆ. ತಾಪಮಾನ ಬಹಳ ಕಡಿಮೆಯೂ ಇರುವುದಿಲ್ಲ ಹಾಗಾಗಿ ಸುತ್ತಾಡಲು ಸೂಕ್ತವಾದ ಸಮಯವಾಗಿದೆ.

ಶ್ರೀಪೆರುಂಬುದೂರು ಪ್ರಸಿದ್ಧವಾಗಿದೆ

ಶ್ರೀಪೆರುಂಬುದೂರು ಹವಾಮಾನ

ಶ್ರೀಪೆರುಂಬುದೂರು
36oC / 97oF
 • Haze
 • Wind: WSW 19 km/h

ಉತ್ತಮ ಸಮಯ ಶ್ರೀಪೆರುಂಬುದೂರು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಶ್ರೀಪೆರುಂಬುದೂರು

 • ರಸ್ತೆಯ ಮೂಲಕ
  ಶ್ರೀಪೆರುಂಬುದೂರು ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿದೆ ಹಾಗಾಗಿ ಸುಲಭವಾಗಿ ತಲುಪಬಹುದಾಗಿದೆ. ಚೆನ್ನೈ ಯಿಂದ ಪೆರುಂಬುದೂರಿಗೆ ನಿರಂತರ ಬಸ್ ಸಂಚಾರವಿದೆ. ಸರ್ಕಾರಿ ಬಸ್ ಗಳಂತೂ ಕೇವಲ 20 ರೂ ಗಳಲ್ಲಿ ನಿಮ್ಮನ್ನು ಶ್ರೀಪೆರುಂಬುದೂರಿಗೆ ತಲುಪಿಸುತ್ತವೆ. ಚೆನ್ನೈ ಬೆಂಗಳೂರು ಬಸ್ ಗಳೂ ಕೂಡ ಇದೇ ದಾರಿಯಲ್ಲಿ ಹೋಗುತ್ತಿದ್ದು ಉತ್ತಮ ಆಯ್ಕೆಯಾಗಿದೆ. ಈ ಪ್ರಯಾಣಕ್ಕಾಗಿ ಬೈಕ್ ಒಂದನ್ನು ಬಾಡಿಗೆಗೆ ತೆಗೆದುಕೊಳ್ಳುವುದೂ ಉತ್ತಮ ಆಯ್ಕೆಯೇ ಆಗಿದೆ. ಈ ಪ್ರಯಾಣ ಸುಮಾರು ಒಂದು ಗಂಟೆಯದ್ದಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಶ್ರೀಪೆರುಂಬುದೂರು ನೇರವಾಗಿ ರೈಲಿನ ಮಾರ್ಗವನ್ನು ಹೊಂದಿಲ್ಲ. ಸಮೀಪದ ರೈಲ್ವೆ ನಿಲ್ದಾಣ ಎಂದರೆ ಚೆನ್ನೈ. ಚೆನ್ನೈಯಿಂದ ಟಾಕ್ಸಿಗಳು ಮತ್ತು ಬಸ್ ಸಂಪರ್ಕ ಇದೆ. ಚೆನ್ನೈ ಯಿಂದ ಶ್ರೀಪೆರುಂಬುದೂರಿಗೆ ಪ್ರಯಾಣ ಕಡಿಮೆ ಅವಧಿಯದಾಗಿದ್ದು ಕಡಿಮೆ ಖರ್ಚಿನದೂ ಆಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪೆರುಂಬುದೂರಿಗೆ ತಲುಪುವ ಅತ್ಯುತ್ತಮವಾದ ಮಾರ್ಗ ಚೆನ್ನೈಯಿಂದ ಪ್ರಯಾಣ ಬೆಳೆಸುವುದು. ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಂದ ಕೇವಲ 50 ಕಿ.ಮೀ ದೂರದಲ್ಲಿದೆ. ಟಾಕ್ಸಿಗಳು ಸುಲಭವಾಗಿ ದೊರೆಯುತ್ತವೆ. ಎಲ್ಲಾ ಟಾಕ್ಸಿಗಳು ಸುಮಾರು 500 ರೂ ಗಳಿಗೆ ನಿಮ್ಮನ್ನು ಶ್ರೀಪೆರುಂಬುದೂರು ತಲುಪಿಸುತ್ತವೆ. ಈ ಪ್ರಯಾಣ ಸುಮಾರು ಒಂದು ಗಂಟೆಯದಾಗಿದೆ, ನಾಲ್ಕು ಮಾರ್ಗದ ಹೆದ್ದಾರಿಯ ಯೋಜನೆಯೂ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
04 Apr,Sat
Return On
05 Apr,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
04 Apr,Sat
Check Out
05 Apr,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
04 Apr,Sat
Return On
05 Apr,Sun
 • Today
  Sriperumbudur
  36 OC
  97 OF
  UV Index: 9
  Haze
 • Tomorrow
  Sriperumbudur
  32 OC
  89 OF
  UV Index: 8
  Patchy rain possible
 • Day After
  Sriperumbudur
  32 OC
  89 OF
  UV Index: 8
  Heavy rain at times