Search
  • Follow NativePlanet
Share
ಮುಖಪುಟ » ಸ್ಥಳಗಳು» ತಿರುತ್ತನಿ

ತಿರುತ್ತನಿ - ಪವಿತ್ರ ಗ್ರಾಮ

4

ತಿರುತ್ತನಿಯನ್ನು ಮುರುಗ(ಸುಬ್ರಹ್ಮಣ್ಯ) ದೇವರ ಪುಣ್ಯ ಗ್ರಾಮ ಎನ್ನಲಾಗಿದೆ. ಈ ದೇವರ 6 ಹಿಂದೂ ದೇವಾಲಯಗಳ ಪೈಕಿ ಒಂದನ್ನು ಇಲ್ಲಿ ಕಾಣಬಹುದಾಗಿದೆ. ಈ ಗ್ರಾಮ ತವಿಳುನಾಡಿನ ತಿರುವಲ್ಲೂರ್ ಎಂಬಲ್ಲಿದೆ. ಇಲ್ಲಿರುವ ಸುಬ್ರಮಣ್ಯ ಸ್ವಾಮೀ ದೇವಸ್ಥಾನವು ಹೆಚ್ಚು ಜನಪ್ರಿಯಗೊಂಡಿದೆ ಮತ್ತು ಪ್ರತಿವರ್ಷ ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನಿಸರ್ಗ ಸೌಂದರ್ಯವನ್ನು ಪ್ರೀತಿಸುವವರಿಗೆ ಇಲ್ಲೊಂದು ಸಣ್ಣ ಆದರೂ ಸುಂದರವಾದ ನಂದಿ ನದಿಯು ಹರಿದಿದೆ. ಕುಮಾರ ತೀರ್ಥ ಅಥವಾ ಸರವಣ ಪೋಯ್ಕೈ ಎಂದು ಹೆಸರು ಪಡೆದಿರುವ ತೀರ್ಥ ಕೊಳ ಈ ಗ್ರಾಮದಲ್ಲಿದ್ದು, ಈ ತೀರ್ಥದಲ್ಲಿ ಔಷಧೀಯ/ಚಿಕಿತ್ಸಕ ಶಕ್ತಿಯ ಗುಣಗಳಿವೆ ಎನ್ನಲಾಗಿದೆ.

ತಿರುತ್ತನಿ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು :

ಮುರುಗ ದೇವ ರಾಕ್ಷಸರ ವಿರುದ್ದ ಯುದ್ಧದಲ್ಲಿ ಜಯಿಸಿದ 6 ಜಾಗಗಳಲ್ಲಿ ತಿರುತ್ತನಿಯೂ ಒಂದು ಎನ್ನಲಾಗಿದೆ. ಇನ್ನುಳಿದ 5 ಸ್ಥಳಗಳೆಂದರೆ, ಪಳನಿ ದಂಡಾಯುಧಪಾಣಿ ಸ್ವಾಮೀ ದೇವಸ್ಥಾನ, ತಿರುಚಂಡುರಿನ ಸೆಂಥಿಲ್ ದೇವಸ್ಥಾನ, ತಿರುಪರಮಕುಂದ್ರದ ಸುಬ್ರಮಣ್ಯ ದೇವಸ್ಥಾನ, ಸ್ವಾಮಿಮಲೈನ ಸ್ವಾಮಿ ನಾಥ ದೇವಸ್ಥಾನ, ಪಳಮುಧಿರ್ಚೋಲೈನ ಸುಬ್ರಮಣ್ಯ ಸ್ವಾಮಿ ದೇವಾಲಯ. ಸುಬ್ರಮಣ್ಯ ಸ್ವಾಮಿಯ ಆಶೀರ್ವಾದ ಪಡೆಯಲು ಈ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಎಂದು ನಂಬಲಾಗಿದೆ.  

ಸುಬ್ರಮಣ್ಯ ಸ್ವಾಮಿ ದೇವಾಲಯವಲ್ಲದೆ ಬೇರೆ ಪ್ರವಾಸಿ ಸ್ಥಳಗಳೂ ಕೂಡ ತಿರುತ್ತನಿಯಲ್ಲಿದೆ. ಸಂತಾನ ವೇಣುಗೋಪಾಲಪುರಂ ಇನ್ನೊಂದು ದೇವಾಲಯ/ ಧಾರ್ಮಿಕ ಕ್ಷೇತ್ರ. ಇಲ್ಲಿ ಪ್ರತಿವರ್ಷ ಸಹಸ್ರಾರು ಭಕ್ತಾದಿಗಳು, ಪ್ರವಾಸಿಗರು ಸೇರುತ್ತಾರೆ.

ತಿರುತ್ತನಿ ವಾತಾವರಣ :

ಇಲ್ಲಿನ ವಾತಾವರಣ ಬಿಸಿ ಮತ್ತು ಉಷ್ಣ. ಚಳಿಗಾಲದಲ್ಲಿ ಈ ಸ್ಥಳ ಪ್ರವಾಸಿ ಯೋಗ್ಯ, ಸೆಪ್ಟೆಂಬರ್ ನಿಂದ ಮಾರ್ಚ್ ಇಲ್ಲಿ ಚಳಿಗಾಲ.

ತಿರುತ್ತನಿಗೆ ತಲುಪುವುದು ಹೇಗೆ ?

ತಿರುತ್ತನಿಗೆ ರೈಲು ಮತ್ತು ರಸ್ತೆ ಮಾರ್ಗಗಳು ಸುಗಮವಾಗಿದೆ. ಚನ್ನೈ, ತಿರುತ್ತನಿಗೆ ಹತ್ತಿರದ ರೈಲು ನಿಲ್ದಾಣ. ತಮಿಳುನಾಡಿನ ಇತರೆ ಮುಖ್ಯ ನಗರಗಳಿಂದ ಟ್ಯಾಕ್ಸಿ ಮತ್ತು ಬಸ್ಸಿನ ಇಲ್ಲಿಗೆ ಸುಲಭವಾಗಿ ತೆರಳಬಹುದು.

ತಿರುತ್ತನಿ ಪ್ರಸಿದ್ಧವಾಗಿದೆ

ತಿರುತ್ತನಿ ಹವಾಮಾನ

ಉತ್ತಮ ಸಮಯ ತಿರುತ್ತನಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ತಿರುತ್ತನಿ

  • ರಸ್ತೆಯ ಮೂಲಕ
    ತಮಿಳುನಾಡಿನ ಇತರ ಭಾಗಗಳಿಂದ ತಿರುತ್ತನಿಗೆ ತೆರಳಲು ರಸ್ತೆ ಮಾರ್ಗ ಸರಾಗವಾಗಿದೆ. ರಾಜ್ಯದ ಮುಖ್ಯ ನಗರಗಳಿಂದ ತಿರುತ್ತನಿಗೆ ಬಸ್ ನ ವ್ಯವಸ್ಥೆ ಕೂಡ ಸರಿಯಾಗಿ ಇದೆ. ಇನ್ನೊಂದು ಮುಖ್ಯ ಯಾತ್ರಾ ಸ್ಥಳವಾದ ತಿರುಪತಿಯು, ತಿರುತ್ತನಿಯಿಂದ 56 ಕಿ.ಮೀ ಮತ್ತು ಚನ್ನೈ ನಿಂದ 70 ಕಿ.ಮೀ ದೂರದಲ್ಲಿದ್ದು ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ನೀವು ರೈಲಿನಲ್ಲಿ ಹೋಗಬಯಸುವುದಾದರೆ ಚನ್ನೈನಲ್ಲಿ ಅಥವಾ ಅರಕ್ಕೊಣಂ ಜಂಕ್ಷನ್ ನಲ್ಲಿ ಇಳಿದುಕೊಳ್ಳಬೇಕು. ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಿರುತ್ತನಿ ತಲುಪಬಹುದು. ಟ್ಯಾಕ್ಸಿಯಲ್ಲಿ ಹೋದರೆ ಚನ್ನೈ ನಿಂದ 70 ಕಿ.ಮೀ ದೂರದಲ್ಲಿರುವ ತಿರುತ್ತನಿಗೆ ಅಂದಾಜು 750 ರೂ ದರವಿರುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತಿರುತ್ತನಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಉತ್ತಮ ಮಾರ್ಗವೆಂದರೆ ಚನ್ನೈವರೆಗೆ ವಿಮಾನದಲ್ಲಿ ಬಂದು ಅಲ್ಲಿಂದ ಸಾರ್ವಜನಿಕ ಸಾರಿಗೆ / ಟ್ಯಾಕ್ಸಿಯ ಮೂಲಕ ಇಲ್ಲಿಗೆ ತಲುಪಬಹುದು. ಚನ್ನೈ ವಿಮಾನ ನಿಲ್ದಾಣ ಹತ್ತಿರದ್ದಾಗಿದ್ದು ತಿರುತ್ತನಿಯಿಂದ 98 ಕಿ.ಮೀ ದೂರದಲ್ಲಿದೆ. ಇದನ್ನು ಬಿಟ್ಟರೆ ಬೆಂಗಳೂರು ಮತ್ತು ಹೈದರಾಬಾದ್ ಹತ್ತಿರದ ವಿಮಾನ ನಿಲ್ದಾಣವಾಗಿದ್ದು ಕ್ರಮವಾಗಿ 285 ಮತ್ತು 595 ಕಿ.ಮೀ ದೂರದಲ್ಲಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu