Search
 • Follow NativePlanet
Share
ಮುಖಪುಟ » ಸ್ಥಳಗಳು» ವೇಡಂತಾಂಗಳ್

ವೇಡಂತಾಂಗಳ್: ಪಕ್ಷಿ ವೀಕ್ಷಕರ ಸ್ವರ್ಗ

22

ಶತಮಾನಗಳ ಹಿಂದೆ ರಾಜಮಹಾರಾಜರು ಬೇಟೆಗೆ ಹೋಗುತ್ತಿದ್ದ ಪ್ರದೇಶವಾಗಿದ್ದ ಕಾರಣದಿಂದಲೇ ಇರಬೇಕು ಈ ಪ್ರದೇಶಕ್ಕೆ ವೇಡಂತಾಂಗಳ್ ಎನ್ನುವ ಹೆಸರಿಟ್ಟಿದ್ದಾರೆ. ವೇಡಂತಾಂಗಳ್ ಎಂದರೆ ಬೇಟೆಗಾರನ ಹೆಲ್ಮೆಟ್(ಶಿರ ಕವಚ) ಎಂದರ್ಥ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿರುವ ವೇಡಂತಾಂಗಳ್ ರಾಷ್ಟ್ರದ ಅತೀ ಪುರಾತನ ಹಾಗೂ ಜನಪ್ರಿಯ ಪಕ್ಷಿಧಾಮ. ಇಷ್ಟು ಮಾತ್ರವಲ್ಲದೆ ಸುಮಾರು 250 ವರ್ಷಗಳಿಂದ ಈ ಪಕ್ಷಿಧಾಮವನ್ನು ಸ್ಥಳೀಯ ನಿವಾಸಿಗಳೇ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ.

ಚೆನ್ನೈಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ವೇಡಂತಾಂಗಳ್ 74 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ್ ಪಕ್ಷಿಧಾಮ. ಚೆನ್ನೈನಿಂದ ರಸ್ತೆ ಮಾರ್ಗವಾಗಿ ಒಂದುವರೆ ಘಂಟೆಯಲ್ಲಿ ಈ ಪಕ್ಷಿಧಾಮವನ್ನು ತಲುಪಬಹುದು. ಇಲ್ಲಿನ ಇತಿಹಾಸವನ್ನು ಕೆದಕಿದಾಗ ಈ ಬೃಹತ್ ಪ್ರದೇಶದಲ್ಲಿ ಸ್ಥಳೀಯ ರಾಜರು ಮತ್ತು ಭೂಮಾಲಿಕರು ಬೇಟೆಯಾಡುತ್ತಿದ್ದರಂತೆ. ಅದಕ್ಕಾಗಿಯೇ ಈ ಪ್ರದೇಶಕ್ಕೆ ವೇಡಂತಾಂಗಳ್ ಅಂದರೆ ಬೇಟೆಗಾರನ ಹೆಲ್ಮೆಟ್ ಎನ್ನುವ ಹೆಸರು ಬಂದಿದೆ.

ವೇಡಂತಾಂಗಳ್ ಪಕ್ಷಿಧಾಮವಾದರೂ ಕೂಡ ಈ ಪ್ರದೇಶಕ್ಕೆ ಮೆರಗು ಬಂದಿರುವುದು ಇಲ್ಲಿರುವ ಸಣ್ಣಪುಟ್ಟ ಕೆರೆಗಳು. ಈ ಕೆರೆಗಳಿಂದಾಗಿಯೇ ದೇಶವಿದೇಶಗಳಿಂದ ಪಕ್ಷಿಗಳು ವಲಸೆ ಬಂದು ಇಲ್ಲಿ ತಮ್ಮ ಸಂತತಿ ರೂಪಿಸುತ್ತದೆ. ವೇಡಂತಾಂಗಳ್ ಅನ್ನು ಬ್ರಿಟಿಷರೇ ಪಕ್ಷಿಧಾಮವೆಂದು ಘೋಷಿಸಿದ್ದರು. 90ರ ದಶಕದ ಮಧ್ಯಭಾಗದಲ್ಲಿ ಸರ್ಕಾರ ಕೂಡ ಅಧಿಕೃತವಾಗಿ ಪಕ್ಷಿಧಾಮವೆಂದು ಘೋಷಿಸಿದ ಬಳಿಕ ಇದು ಪ್ರವಾಸಿ ತಾಣವಾಗಿ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿತು.

ಈ ಪಕ್ಷಿಧಾಮವು ಬಹಳಷ್ಟು ಪಕ್ಷಿಗಳಿಗೆ ವಾಸಸ್ಥಾನವಾಗಿರುವುದು ಮಾತ್ರವಲ್ಲದೆ ಷವಲರ್, ನೀಲಿರೆಕ್ಕೆಯ ಟೀಲ್, ಬೂದು ಸಿಪಿಲೆ ಮತ್ತು ಗದ್ದೆಗೊರವ ಮೊದಲಾದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ. ವೇಡಂತಾಂಗಳ್ ಪಕ್ಷಿಧಾಮವನ್ನು ವೀಕ್ಷಿಸಿದ ಬಳಿಕ 9 ಕಿ.ಮೀ. ಪ್ರಯಾಣಿಸಿದರೆ ಮತ್ತೊಂದು ಪಕ್ಷಿಧಾಮ ಕಾರ್ಕಿಲಿಯನ್ನು ಕೂಡ ನೋಡಬಹುದು. ಈ ಎರಡೂ ಪಕ್ಷಿಧಾಮಳಿಗೆ ಒಂದೇ ದಿನದಲ್ಲಿ ಭೇಟಿ ನೀಡಬಹುದಾಗಿದೆ.

ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿರುವ ಅತ್ಯಂತ ಹಳೆಯ ಪಕ್ಷಿಧಾಮ ಮತ್ತು ಸ್ಥಳೀಯರ ಉಸ್ತುವಾರಿಯಲ್ಲಿಯೇ ಇದು ಇನ್ನೂ ಇರುವುದರಿಂದ ವೇಡಂತಾಂಗಳ್ ಪಕ್ಷಿಧಾಮವು ರಾಷ್ಟ್ರದೆಲ್ಲೆಡೆಯಿಂದ ಪಕ್ಷಿವೀಕ್ಷಕರು ಹಾಗೂ ಪಕ್ಷಿಶಾಸ್ತ್ರಜ್ಞರನ್ನು ಸೆಳೆಯಲು ಎರಡು ಪ್ರಮುಖ ಕಾರಣಗಳಾಗಿವೆ.

ಒಂದೊಂದು ಋತುವಿನಲ್ಲಿ ಕಾಣಿಸಿಕೊಳ್ಳುವ ವಿವಿಧ ಜಾತಿಯ ವಲಸೆ ಪಕ್ಷಿಗಳು ಇಲ್ಲಿಗೆ ಬರುವ ಪಕ್ಷಿಪ್ರಿಯರು ಹಾಗೂ ಪಕ್ಷಿ ವೀಕ್ಷಕರನ್ನು ಆಯಸ್ಕಾಂತದಂತೆ ಸೆಳೆಯುತ್ತದೆ. ಟೀಲ್ ಗಳು, ಆಸ್ಟ್ರೇಲಿಯಾದ ಗ್ರೇ ಪೆಲಿಕನ್, ಶ್ರೀಲಂಕಾದ ಸ್ನೇಕ್ ಬರ್ಡ್, ಬೂದು ಬಕ, ತೆರೆದ ಕೊಕ್ಕಿನ ಕೊಕ್ಕರೆ, ಸೈಬೀರಿಯನ್ ಕೊಕ್ಕರೆ ಮತ್ತು ಸ್ಪಾಟ್ ಬಿಲ್ ಡಕ್ ಅನ್ನು ಇಲ್ಲಿನ ಪಕ್ಷಿಧಾಮದಲ್ಲಿ ಕಾಣಬಹುದು. ನವಂಬರ್ ಹಾಗೂ ಡಿಸೆಂಬರ್ ನಲ್ಲಿ ಯುರೋಪ್ ನಿಂದ ವಲಸೆ ಬಂದಂತಹ ಪಕ್ಷಿಗಳು ಇಲ್ಲಿ ವಾಸ ಹೂಡಿರುತ್ತವೆ.

ವೇಡಂತಾಂಗಳ್ ಪ್ರಸಿದ್ಧವಾಗಿದೆ

ವೇಡಂತಾಂಗಳ್ ಹವಾಮಾನ

ವೇಡಂತಾಂಗಳ್
30oC / 87oF
 • Patchy rain possible
 • Wind: SW 9 km/h

ಉತ್ತಮ ಸಮಯ ವೇಡಂತಾಂಗಳ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವೇಡಂತಾಂಗಳ್

 • ರಸ್ತೆಯ ಮೂಲಕ
  ರಸ್ತೆ ಮೂಲಕವಾದರೆ ಚೆನ್ನೈಯಿಂದ ವೇಡಂತಾಂಗಳ್ ಗೆ ಬಹಳಷ್ಟು ಬಸ್ ಗಳಿವೆ. ಸರ್ಕಾರಿ ಬಸ್ ಹಾಗೂ ಖಾಸಗಿ ಬಸ್ ಗಳು ಮಹಾಬಲಿಪುರಂ, ಕಾಂಚೀಪುರಂ ಮತ್ತು ಚೆಂಗಲ್ ಪೇಟ್ ಮೂಲಕ ಹಾದುಹೋಗುತ್ತದೆ. ವೇಡಂತಾಂಗಳ್ ಗೆ ಬಸ್ ಗಳ ಮೂಲಕ ಪ್ರಯಾಣಿಸುವುದು ಸುಲಭ ಹಾಗೂ ಹಣವನ್ನು ಉಳಿಸಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೈಲಿನಲ್ಲಿ ಪ್ರಯಾಣಿಸುವುದಾದರೆ ಚೆಂಗಲ್ ಪೇಟೆ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಕೇವಲ 6 ಕಿ.ಮೀ. ಕ್ರಮಿಸಿದರೆ ವೇಡಂತಾಂಗಳ್ ಸಿಗುತ್ತದೆ. ತಮಿಳುನಾಡಿನ ವಿವಿಧ ಭಾಗಗಳಿಂದ ಸ್ಥಳೀಯ ರೈಲುಗಳು ಈ ರೈಲ್ವೆ ನಿಲ್ದಾಣದ ಮೂಲಕವೇ ಹಾದು ಹೋಗುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದು ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ವಿಮಾನ ಮೂಲಕವಾದರೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 60 ಕಿ.ಮೀ. ದೂರದಲ್ಲಿ ವೇಡಂತಾಂಗಳ್ ಇದೆ. ಬೆಂಗಳೂರು, ದೆಹಲಿ, ಮುಂಬಯಿ ಮತ್ತು ಹೈದರಾಬಾದ್ ನಿಂದ ಬರುವವರು ಚೆನ್ನೈ ವಿಮಾನ ನಿಲ್ದಾಣ ಮೂಲಕ ಹೋಗಬಹುದು. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ವೇಡಂತಾಂಗಳ್ ಅನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Nov,Thu
Return On
27 Nov,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Nov,Thu
Check Out
27 Nov,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Nov,Thu
Return On
27 Nov,Fri
 • Today
  Vedanthangal
  30 OC
  87 OF
  UV Index: 7
  Patchy rain possible
 • Tomorrow
  Vedanthangal
  27 OC
  80 OF
  UV Index: 7
  Moderate or heavy rain shower
 • Day After
  Vedanthangal
  24 OC
  76 OF
  UV Index: 7
  Moderate or heavy rain shower