Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಡಂತಾಂಗಳ್ » ಆಕರ್ಷಣೆಗಳು » ಪಕ್ಷಿ ವೀಕ್ಷಕರ ಸ್ವರ್ಗ

ಪಕ್ಷಿ ವೀಕ್ಷಕರ ಸ್ವರ್ಗ, ವೇಡಂತಾಂಗಳ್

5

ಚೆನ್ನೈಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ವೇಡಂತಾಂಗಳ್ 74 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿಕೊಂಡಿರುವ ಬೃಹತ್ ಪಕ್ಷಿಧಾಮ. ಚೆನ್ನೈನಿಂದ ರಸ್ತೆ ಮಾರ್ಗವಾಗಿ ಒಂದುವರೆ ಘಂಟೆಯಲ್ಲಿ ಈ ಪಕ್ಷಿಧಾಮವನ್ನು ತಲುಪಬಹುದು. ಇಲ್ಲಿನ ಇತಿಹಾಸವನ್ನು ಕೆದಕಿದಾಗ ಈ ಬೃಹತ್ ಪ್ರದೇಶದಲ್ಲಿ ಸ್ಥಳೀಯ ರಾಜರು ಮತ್ತು ಭೂಮಾಲಿಕರು ಬೇಟೆಯಾಡುತ್ತಿದ್ದರಂತೆ. ಅದಕ್ಕಾಗಿಯೇ ಈ ಪ್ರದೇಶಕ್ಕೆ ವೇಡಂತಾಂಗಳ್ ಅಂದರೆ ಬೇಟೆಗಾರನ ಹೆಲ್ಮೆಟ್ ಎನ್ನುವ ಹೆಸರು ಬಂದಿದೆ.

ಈ ಪಕ್ಷಿಧಾಮವು ಬಹಳಷ್ಟು ಪಕ್ಷಿಗಳಿಗೆ ವಾಸಸ್ಥಾನವಾಗಿರುವುದು ಮಾತ್ರವಲ್ಲದೆ ಷವಲರ್, ನೀಲಿರೆಕ್ಕೆಯ ಟೀಲ್, ಬೂದು ಸಿಪಿಲೆ ಮತ್ತು ಗದ್ದೆಗೊರವ ಮೊದಲಾದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ. ವೇಡಂತಾಂಗಳ್ ಪಕ್ಷಿಧಾಮವನ್ನು ವೀಕ್ಷಿಸಿದ ಬಳಿಕ 9 ಕಿ.ಮೀ. ಪ್ರಯಾಣಿಸಿದರೆ ಮತ್ತೊಂದು ಪಕ್ಷಿಧಾಮ ಕಾರ್ಕಿಲಿಯನ್ನು ಕೂಡ ನೋಡಬಹುದು. ಈ ಎರಡೂ ಪಕ್ಷಿಧಾಮಳಿಗೆ ಒಂದೇ ದಿನದಲ್ಲಿ ಭೇಟಿ ನೀಡಬಹುದಾಗಿದೆ.

ಒಂದೊಂದು ಋತುವಿನಲ್ಲಿ ಕಾಣಿಸಿಕೊಳ್ಳುವ ವಿವಿಧ ಜಾತಿಯ ವಲಸೆ ಪಕ್ಷಿಗಳು ಇಲ್ಲಿಗೆ ಬರುವ ಪಕ್ಷಿಪ್ರಿಯರು ಹಾಗೂ ಪಕ್ಷಿ ವೀಕ್ಷಕರನ್ನು ಆಯಸ್ಕಾಂತದಂತೆ ಸೆಳೆಯುತ್ತದೆ. ಟೀಲ್ ಗಳು, ಆಸ್ಟ್ರೇಲಿಯಾದ ಗ್ರೇ ಪೆಲಿಕನ್, ಶ್ರೀಲಂಕಾದ ಸ್ನೇಕ್ ಬರ್ಡ್, ಬೂದು ಬಕ, ತೆರೆದ ಕೊಕ್ಕಿನ ಕೊಕ್ಕರೆ, ಸೈಬೀರಿಯನ್ ಕೊಕ್ಕರೆ ಮತ್ತು ಸ್ಪಾಟ್ ಬಿಲ್ ಡಕ್ ಅನ್ನು ಇಲ್ಲಿನ ಪಕ್ಷಿಧಾಮದಲ್ಲಿ ಕಾಣಬಹುದು. ನವಂಬರ್ ಹಾಗೂ ಡಿಸೆಂಬರ್ ನಲ್ಲಿ ಯುರೋಪ್ ನಿಂದ ವಲಸೆ ಬಂದಂತಹ ಪಕ್ಷಿಗಳು ಇಲ್ಲಿ ವಾಸ ಹೂಡಿರುತ್ತವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed