Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಡಂತಾಂಗಳ್ » ಹವಾಮಾನ

ವೇಡಂತಾಂಗಳ್ ಹವಾಮಾನ

ಮಾನ್ಸೂನ್ ಬಳಿಕ ವೇಡಂತಾಂಗಳ್ ಗೆ ಭೇಟಿ ನೀಡಲು ಸೂಕ್ತ ಸಮಯ. ಬೇಸಿಗೆ ಆರಂಭವಾಗುವ ಮಾರ್ಚ್ ಗೆ ಮೊದಲು ಇಲ್ಲಿಗೆ ಭೇಟಿ ನೀಡಬೇಕು. ಈ ಸಮಯದಲ್ಲಿ ವಲಸೆ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೇಡಂತಾಂಗಳ್ ಗೆ ಬರುತ್ತದೆ. ಪಕ್ಷಿ ವೀಕ್ಷಣೆಯ ಆಸಕ್ತಿಯಿದ್ದರೆ ಧೋ ಎಂದು ಸುರಿಯುವ ಮಳೆ, ನೆತ್ತಿಯನ್ನು ಸುಡುವ ಬಿಸಿಲು ಯಾವುದು ಲೆಕ್ಕಕ್ಕಿಲ್ಲ...

ಬೇಸಿಗೆಗಾಲ

ತಮಿಳುನಾಡಿನ ಉಳಿದ ಭಾಗಗಳಂತೆ ವೇಡಂತಾಂಗಳ್ ನಲ್ಲಿ ಬೇಸಿಗೆಯಲ್ಲಿ ಹವಾಮಾನ ಹೆಚ್ಚಿನ ಉಷ್ಣಾಂಶದಿಂದ ಕೂಡಿರುತ್ತದೆ ಮತ್ತು ಮೇ ತಿಂಗಳು ಅತ್ಯಧಿಕ ಉಷ್ಣಾಂಶವಿರುವ ತಿಂಗಳಾಗಿದೆ. ಜೂನ್ ಹಾಗೂ ಜುಲೈ ತನಕ ಬೇಸಿಗೆ ಕಾಲವಾಗಿರುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಷ್ಟಿರುತ್ತದೆ. ಈ ವೇಳೆ ಪಕ್ಷಿವೀಕ್ಷಣೆ ತುಂಬಾ ಕಷ್ಟ.

ಮಳೆಗಾಲ

ಆಗಸ್ಟ್, ಸಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ವೇಡಂತಾಂಗಳ್ ನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಈ ಅವಧಿಯಲ್ಲೂ ಪಕ್ಷಿ ವೀಕ್ಷಣೆ ಸ್ವಲ್ಪ ಮಟ್ಟಿಗೆ ಕಷ್ಟವೆನ್ನಬಹುದು. ಮಳೆಗಾಲದಲ್ಲಿ ವೇಡಂತಾಂಗಳ್ ಗೆ ಪ್ರಯಾಣಿಸುವವರಿಗೆ ಕೊಡೆ ಹಾಗೂ ರೈನ್ ಕೋಟ್ ಕಡ್ಡಾಯ.

ಚಳಿಗಾಲ

ವೇಡಂತಾಂಗಳ್ ನಲ್ಲಿ ನವಂಬರ್ ನಿಂದ ಚಳಿಗಾಲ ಆರಂಭವಾಗಿ ನಾಲ್ಕು ತಿಂಗಳು ಅಂದರೆ ಫೆಬ್ರವರಿ ತನಕ ಇದು ಮುಂದುವರಿಯುತ್ತದೆ. ಈ ಸಮಯದಲ್ಲಿ ಹವಾಮಾನ ತಂಪಾಗಿರುತ್ತದೆ ಮತ್ತು ತಾಪಮಾನ 16 ಡಿಗ್ರಿ ಸೆಲ್ಶಿಯಸ್ ತನಕ ಇಳಿಯುತ್ತದೆ.