Search
 • Follow NativePlanet
Share
ಮುಖಪುಟ » ಸ್ಥಳಗಳು» ಕಡಲೂರು

ಸಾಗರ ಮತ್ತು ದೇವಾಲಯಗಳ ನಗರ ಕಡಲೂರ್

23

ಬಂಗಾಳ ಕೊಲ್ಲಿಗೆ ತಾಗಿಕೊಂಡು ಇರುವ ನಗರ ಕಡಲೂರ್ ತಮಿಳು ನಾಡಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಕಡಲೂರು ಎಂದರೆ ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ’ಸಮುದ್ರದ ನಗರ’ ಎಂದು ಅರ್ಥ. ಹಾಗೂ ಈ ನಗರವು ತನ್ನ ಹೆಸರಿಗೆ ತಕ್ಕಂತೆ ಕೆಲವು ಸುಂದರವಾದ ಸಮುದ್ರ ಕಿನಾರೆಗಳನ್ನು ಹೊಂದಿದೆ. ಈ ನಗರವು ಇಲ್ಲಿನ ದೇವಾಲಯಗಳಿಂದಾಗಿಯೂ ಪ್ರಸಿದ್ಧವಾಗಿದೆ. ಕಡಲೂರು ಎರಡು ಜಿಲ್ಲೆಗಳನ್ನು ಹೊಂದಿದ್ದು ಅವುಗಳನ್ನು ಹೊಸ ನಗರ ಹಾಗೂ ಹಳೆಯ ನಗರಗಳೆಂದು ಕರೆಯಲಾಗುತ್ತದೆ.

ಈ ನಗರದ ಮೂಲಕ ಹರಿಯುವ ಗೆಡಿಲಾಮ್ ನದಿಯು ಹಳೆಯ ನಗರವನ್ನು ಹೊಸ ನಗರದ ತಿರುಪಡಿರಿಪುಲಿಯೂರಿನಿಂದ ಬೇರ್ಪಡಿಸುತ್ತದೆ. ಹಳೆಯ ನಗರವನ್ನು ’ಇಸ್ಲಾಮಾಬಾದ್’ ಎಂದು ಮೊಘಲ್ ಆಳ್ವಿಕೆಯ ಅವಧಿಯಲ್ಲಿ ಕರೆಯಲಾಗುತ್ತಿತ್ತು. ಇದು ಇಂದಿಗೂ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ನಗರವಾಗಿದೆ. ಇದು ಆಂಗ್ಲರ ಆಳ್ವಿಕೆಯ ಅವಧಿ 1748 ರಿಂದ 1752 ತನಕ ರಾಜಧಾನಿ ನಗರವೂ ಆಗಿತ್ತು.

ಕಡಲೂರಿನ ಅಕ್ಕ ಪಕ್ಕದಲ್ಲಿರುವ ಪ್ರವಾಸಿ ತಾಣಗಳು

ಕಡಲೂರು ನಗರ ಇಲ್ಲಿನ ಶಿವ ಮತ್ತು ವೈಷ್ಣವ ದೇವಾಲಯಗಳಿಗೆ ಪ್ರಸ್ದಿದ್ಧವಾಗಿದೆ. ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಕೆಲವು ಹೆಸರುಗಳೆಂದರೆ ಪಟಲೇಶ್ವರ ದೇವಾಲಯ, ತಿರುವಹೀಂದಿಪುರಂ ದೇವಾಲಯ, ಮಂಗಲಪುರೇಶ್ವರ ದೇವಾಲಯ, ಸುದಾರ್ ಕೊಝುಂತುತೇಶ್ವರ ದೇವಾಲಯ.

ಈ ನಗರವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿಸಲು ಇಲ್ಲಿನ ಕಡಲ ಕಿನಾರೆಗಳೂ ಪ್ರಮುಖ ಪಾತ್ರ ವಹಿಸಿವೆ. ತಮಿಳು ನಾಡು ರಾಜ್ಯದಲ್ಲೇ ಎರಡನೇ ಅತೀ ಉದ್ದದ ಕಡಲ ಕಿನಾರೆಯಾಗಿರುವ ಸಿಲ್ವರ್ ಬೀಚ್ ಕಡಲೂರಿಗೆ ಸಮೀಪದಲ್ಲಿಯೇ ಇದೆ. ಸೈಂಟ್ ಡೇವಿಡ್ ಕೋಟೆ ಮತ್ತು ಉದ್ಯಾನ ಮನೆ (ಗಾರ್ಡನ್ ಹೌಸ್) ಇವುಗಳ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಪ್ರಾಮುಖ್ಯತೆಯಿಂದ ಇಲ್ಲಿನ ಭೇಟಿಯ ವೇಳೆ ನೋಡಲೇ ಬೇಕಾದ ಎರಡು ಸ್ಥಳಗಳಾಗಿವೆ.  

ಪಿಚಾವರಮ್ ಇಲ್ಲಿನ ಹಿನ್ನೀರು ಮತ್ತು ನೀರಿನ ಕ್ರೀಡೆಗಳ ಕಾರಣದಿಂದ ನೋಡಲೇ ಬೇಕಾದ ಸ್ಥಳವಾಗಿದೆ. ಇಲ್ಲಿ ಉಷ್ಣವಲಯದ ಪೊದೆ ಕಾಡುಗಳೂ ಆಕರ್ಷಕವಾಗಿವೆ. ಇಲ್ಲಿ ಸಮೀಪದಲ್ಲಿಯೇ ಹಲವು ದ್ವೀಪಗಳೂ ಇದ್ದು ಪಕ್ಷಿ ವೀಕ್ಷಣೆ ಮಾಡುವವರಿಗೆ ಆಕರ್ಷಕ ತಾಣವಾಗಿದೆ. ಇಲ್ಲಿರುವ ಬೋಟಿಂಗ್ ವ್ಯವಸ್ಥೆ ಜನರನ್ನು ಮತ್ತಷ್ಟು ಆಕರ್ಷಿಸುತ್ತದೆ.

ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಕಂದು ಕಲ್ಲಿದ್ದಲಿನ ಗಣಿಗಳು, ಗಾಡಿಲಾಂ ಕೋಟೆ, ಕಾಪ್ಪರ್ ಬೆಟ್ಟಗಳು, ಚಿದಂಬರಂ ಮತ್ತು ಶ್ರೀಮುಶ್ನಂ. ಡಿಸೆಂಬರ್ 26, 2004 ರಲ್ಲಿ ಭಾರತದ ಕಡಲ ಕಿನಾರೆಗೆ ಅಪ್ಪಳಿಸಿದ ಸುನಾಮಿ ಕಡಲೂರಿಗೂ ಸಾಕಷ್ಟು ಹಾನಿ ಮಾಡಿದೆ. ಹಾಗಿದ್ದರೂ ಈ ನಗರವು ತನ್ನ ಎಂದೂ ಸೋಲೊಪ್ಪದಿರು ಎಂಬ ಮನೋಭಾವದಿಂದ ಇಂದಿಗೂ ಬೆಳೆಯುತ್ತಲೇ ಇದೆ.

ಇತಿಹಾಸದಲ್ಲಿ ಕಡಲೂರು

ಐತಿಹಾಸಿಕವಾಗಿ, ಕಡಲೂರು ಜಿಲ್ಲೆ "ಚೋಳ ನಾಡು" ಮತ್ತು "ನಡು ನಾಡು" ಒಳಗೊಂಡಿತ್ತು. ಪಟ್ಟಣ ಪ್ರಾಚೀನ ಕಾಲದಿಂದಲೂ ಒಂದು ಬಂದರಾಗಿ ಅಸ್ತಿತ್ವದಲ್ಲಿತ್ತು. ಇತಿಹಾಸದುದ್ದಕ್ಕೂ ಈ ಪಟ್ಟಣವನ್ನು ಡಚ್, ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ಮೊದಲಾದಹಲವಾರು ವಸಾಹತು ಶಕ್ತಿಗಳುಆಳಿದ್ದವು. ಕಡಲೂರಿನ ನೌಕಾ ಯುದ್ಧ 1758 ರಲ್ಲಿ ಫ್ರೆಂಚ್ ಮತ್ತು ಬ್ರಿಟಿಷರ ನಡುವೆ ನಡೆಯಿತು. ಅಮೇರಿಕಾದ ಸ್ವಾತಂತ್ರ್ಯ ಯುದ್ಧ  ಮತ್ತು ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಕಡಲೂರಿನಲ್ಲಿ ಅಶಾಂತಿಯ ಪರಿಸ್ಥಿತಿ ಮನೆಮಾಡಿತ್ತು.ಈ ಪಟ್ಟಣ ಅಂತಿಮವಾಗಿ ಶಾಂತಿ ಒಪ್ಪಂದದ ಮೂಲಕ ಬ್ರಿಟಿಷರಿಗೆ ಹಸ್ತಾಂತರಿಸಲಾಯಿತು. ಕಡಲೂರು, ಕೆಲವು ಪ್ರದೇಶಗಳಲ್ಲಿ ಈಗಲೂ ಅದರ ಶ್ರೀಮಂತ ವಸಾಹತುಶಾಹಿ ಇತಿಹಾಸದ ಕುರುಹುಗಳನ್ನುಉಳಿಸಿಕೊಂಡಿದೆ. ಬ್ರಿಟಿಷರಿಂದ ಪ್ರಾರಂಭಿಸಲ್ಪಟ್ಟ ಕೆಲವು ಶೈಕ್ಷಣಿಕ ಸಂಸ್ಥೆಗಳು  ಇನ್ನೂ ಕಡಲೂರಿನಲ್ಲಿ ಅಸ್ತಿತ್ವದಲ್ಲಿವೆ.

ಕಡಲೂರು ತಲುಪುವುದು ಹೇಗೆ?

ಈ ನಗರವು ರೈಲ್ವೆ ಮತ್ತು ರಸ್ತೆ ಮಾರ್ಗದಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಪಾಂಡಿಚೇರಿ ವಿಮಾನ ನಿಲ್ದಾಣ ಹತ್ತಿರದವಿಮಾನ ನಿಲ್ದಾಣವಾಗಿದ್ದು, ಚೆನೈ ಹತ್ತಿರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಹತ್ತಿರದ ನಗರಗಳನ್ನು ಸಂಪರ್ಕಿಸುವ ಎರಡು ರೈಲ್ವೆ ನಿಲ್ದಾಣಗಳನ್ನು ಹೊಂದಿದೆ. ಆರಾಮವಾಗಿ ಕಡಲೂರಿಗೆ ತಲುಪಲು ಎನ್ ಎಚ್ 45ಎ ಹೆದ್ದಾರಿ ಮಾರ್ಗವು ಲಭ್ಯವಿದೆ.

ಕಡಲೂರಿನ ಹವಾಮಾನ

ಕಡಲೂರು ಉಪೋಷ್ಣವಲಯದ ಹವಾಮಾನವನ್ನು ಹೊಂದಿದ್ದು ಮಧ್ಯಮ ಹವಾಮಾನ ಸ್ಥಿತಿಯನ್ನು ಇಲ್ಲಿ ಕಾಣಬಹುದು.ನಗರ ಭೇಟಿ ಅತ್ಯುತ್ತಮ ಸಮಯ, ಚಳಿಗಾಲದ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಈ ಸಮಯದಲ್ಲಿ ತಾಪಮಾನವು ಆಹ್ಲಾದಕರವಾಗಿರುತ್ತದೆ ಮತ್ತು ಪ್ರಯಾಣವು ಪರಿಣಾಮಕಾರಿಯಾಗಿರುತ್ತದೆ.

ಕಡಲೂರು ಪ್ರಸಿದ್ಧವಾಗಿದೆ

ಕಡಲೂರು ಹವಾಮಾನ

ಕಡಲೂರು
32oC / 89oF
 • Partly cloudy
 • Wind: SSW 24 km/h

ಉತ್ತಮ ಸಮಯ ಕಡಲೂರು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಡಲೂರು

 • ರಸ್ತೆಯ ಮೂಲಕ
  ಕಡಲೂರು ನಗರಕ್ಕೆ ಎನ್ ಎಚ್ 45ಎ ಹೆದ್ದಾರಿ ರಸ್ತೆ ಮಾರ್ಗದ ಮೂಲಕ ಕಡಲೂರಿಗೆ ತಲುಪುವುದು ಅತ್ಯಂತ ಸುಲಭ. ಹತ್ತಿರದ ನಗರಗಳಾದ ಚೆನೈ, ತ್ರಿಚಿ, ಸೇಲಂ, ಕೊಯಮತ್ತೂರು, ತಿರುವಣ್ಣಾಮಲೈ ಗಳಿಂದ ಬಸ್ ಸೌಲಭ್ಯಗಳಿವೆ. ಅಲ್ಲದೇ ಬೆಂಗಳೂರಿನಿಂದಲೂ ಸಹ ಕೆಲವು ಬಸ್ ಗಳು ಕಡಲೂರು ನಗರಕ್ಕೆ ತಲುಪಲು ಲಭ್ಯವಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಡಲೂರು ನಗರವು ಎರಡು ರೈಲ್ವೆ ನಿಲ್ದಾಣವನ್ನು ಹೊಂದಿದ್ದು ಅವುಗಳೆಂದರೆ ತಿರುಪಡಿರಿಪ್ಪುಲಿಯೂರ್ ಮತ್ತು ಕಡಲೂರ್ ಬಂದರು ನಿಲ್ದಾಣ. ತಮಿಳುನಾಡಿನ ಪ್ರಮುಖ ನಗರಗಳಿಗೆ ಮತ್ತು ದಕ್ಷಿಣ ಭಾರತದ ನಗರಗಳಿಗೆ ಇಲ್ಲಿಂದ ರೈಲ್ವೆ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕಡಲೂರಿಗೆ ಅತ್ಯಂತ ಹತ್ತಿರದ ವಿಮಾನ ನಿಲ್ದಾಣವೆಂದರೆ ಕಡಲೂರಿನಿಂದ 25 ಕಿ.ಮೇ ದೂರವಿರುವ ಪಾಂಡಿಚೇರಿ ವಿಮಾನ ನಿಲ್ದಾಣ. ಆದಾಗ್ಯೂ ಕಡಲೂರಿನ ಹತ್ತಿರದ ಚೆನೈ ವಿಮಾನ ನಿಲ್ದಾಣ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಕಡಲೂರಿನಿಂದ 180 ಕಿ.ಮೀ ದೂರದಲ್ಲಿದೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಇಲ್ಲಿಂದ ಲಭ್ಯ. ಚೆನೈ ವಿಮಾನ ನಿಲ್ದಾಣದಿಂದ ಭಾರತರ ಪ್ರಮುಖ ನಗರಗಳಿಂದ ವಿಮಾನಗಳು ಲಭ್ಯವಿವೆ.
  ಮಾರ್ಗಗಳ ಹುಡುಕಾಟ

ಕಡಲೂರು ಲೇಖನಗಳು

One Way
Return
From (Departure City)
To (Destination City)
Depart On
30 May,Sat
Return On
31 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
30 May,Sat
Check Out
31 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
30 May,Sat
Return On
31 May,Sun
 • Today
  Cuddalore
  32 OC
  89 OF
  UV Index: 8
  Partly cloudy
 • Tomorrow
  Cuddalore
  30 OC
  87 OF
  UV Index: 7
  Patchy rain possible
 • Day After
  Cuddalore
  30 OC
  85 OF
  UV Index: 7
  Moderate rain at times