Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಹವಾಮಾನ

ಕಡಲೂರು ಹವಾಮಾನ

ಕಡಲೂರಿಗೆ ಭೇಟಿ ನೀಡಲು ಅತ್ಯಂತ ಉತ್ತಮ ಸಮಯ, ಮಳೆಗಾಲದ ಕೊನೆ ಹಾಗೂ ಚಳಿಗಾಲದ ಆರಂಭದಲ್ಲಿ. ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ವಾತಾವರಣ ಬಹಳ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಕಡಲೂರಿಗೆ ಪ್ರಯಾಣ ಮಾಡಿದರೆ ನಿಮ್ಮ ಕಡಲೂರಿನ ಪ್ರಯಾಣ ಅತ್ಯಂತ ಸ್ಮರಣೀಯ ಮತ್ತು ಸಂತೋಷಕರ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಬೇಸಿಗೆಗಾಲ

ಕಡಲೂರಿನಲ್ಲಿ ಬೇಸಿಗೆಯು ಎಪ್ರೀಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ಕಂಡುಬರುತ್ತದೆ. ಉಷ್ಣಾಂಶವು 31 ಡಿ. ಸೆ ನಿಂದ 37 ಡಿ. ಸೆ ವರೆಗೆ ದಾಖಲಾಗುತ್ತದೆ. ಈ ಸಮಯದಲ್ಲಿ ಹವಾಮಾನವು ಅತ್ಯಂತ ಉಷ್ಣದಿಂದ ಕೂಡಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಕಡಲೂರಿಗೆ ಪ್ರಯಾಣ ಬೆಳೆಸುವುದು ಅತ್ಯಂತ ಕಷ್ಟದಾಯಕ.

ಮಳೆಗಾಲ

ಕಡಲೂರಿನಲ್ಲಿ ಮಳೆಗಾಲದಲ್ಲಿ ಅತ್ಯಂತ ಹೆಚ್ಚಿನ ಮಳೆಯಾಗುತ್ತದೆ. ಜುಲೈನಿಂದ ಅಕ್ಟೋಬರ್ ತಿಂಗಳಿನಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತದೆ. ಈ ಸಮಯದಲ್ಲಿ ಕಡಲೂರಿನಲ್ಲಿ ಪ್ರವಾಸಿಗರಿಗೆ ಮೀಸಲಾಗಿರುವ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಹಾಕಲಾಗುತ್ತದೆ!

ಚಳಿಗಾಲ

ಕಡಲೂರಿನಲ್ಲಿ ಚಳಿಗಾಲ ಆಹ್ಲಾದಕರವಾಗಿರುತ್ತದೆ. ಮತ್ತು ಉಷ್ಣಾಂಶದ ಮಟ್ಟವೂ ಅತ್ಯಂತ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶವು 13 ಡಿ.ಸೆ ನಿಂದ 30 ಡಿ.ಸೆ ನಷ್ಟು ದಾಖಲಾಗುತ್ತದೆ. ನವೆಂಬರ್ ಮತ್ತು ಜನವರಿ ತಿಂಗಳು ಅತ್ಯಂತ ಆಹ್ಲಾದಕರವಾಗಿರುತ್ತದೆ. ಈ ಸಮಯ ಕಡಲೂರಿಗೆ ಪ್ರಯಾಣ ಮಾಡಲು ಅತ್ಯಂತ ಉತ್ತಮ ಸಮಯ.