Search
 • Follow NativePlanet
Share
ಮುಖಪುಟ » ಸ್ಥಳಗಳು» ಸ್ವಾಮಿಮಲೈ

ಸ್ವಾಮಿಮಲೈ: ಧರ್ಮನಿಷ್ಠೆ, ತೀರ್ಥಯಾತ್ರೆ ಮತ್ತು ವಿಮರ್ಶಾತ್ಮಕ ಧಾರ್ಮಿಕತೆ

12

ಸ್ವಾಮಿಮಲೈ ದಕ್ಷಿಣ ಭಾರತದ ಒಂದು ರಾಜ್ಯವಾದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ನ ಬಳಿಯಲ್ಲಿರುವ ನಗರವಾಗಿದೆ. ಇದರ ಆಕ್ಷರಶಃ ಅನುವಾದ ದೇವರ ಬೆಟ್ಟ ಎಂದುದಾಗಿದೆ ಹಾಗೂ ದೇವರ ಪ್ರಭಾವವನ್ನು ಇಲ್ಲಿನ ಸುತ್ತಮುತ್ತಲಿನ ಪರಿಸರದ ಮೇಲೆ ಸ್ಪಷ್ಟವಾಗಿ ಕಾಣಬಹುದಾಗಿದೆ. ಮುರುಗನ(ಸುಬ್ರಹ್ಮಣ್ಯ ದೇವರು) ಪ್ರಸಿದ್ಧ ಆರು ಯುದ್ಧಭೂಮಿಗಳ ಪೈಕಿ ಒಂದು ’ಪಡಾಯಿ ವೀಡುಗಲ್’ ಇಲ್ಲಿದೆ. ಇಡಿ ರಾಜ್ಯದಲಿಯೇ ಏಕಮಾತ್ರ ಕಂಚಿನಿಂದ ನಾಣ್ಯಗಳನ್ನು ತಯಾರಿಸುವ ಕಲೆ ಕಲಿಸುವ ಕಲಾಶಾಲೆ ಇಲ್ಲಿದೆ. ಆರ್ಥಿಕತೆಯ ಬೆಳವಣಿಗೆಗೆ ಈ ಪ್ರದೇಶವು ಕೃಷಿಯನ್ನು ಅವಲಂಬಿಸಿದ್ದು, ಇಲ್ಲಿ ಕಬ್ಬು ಮತ್ತು ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹಿಂದೆ ಸ್ವಾಮಿಮಲೈ ಅನ್ನು ’ತಿರುವೆರಕಮ್’ ಎಂದು ಕರೆಯಲಾಗುತ್ತಿತ್ತು.

ಐತಿಹಾಸಿಕ ಹಿನ್ನೆಲೆ

ಕಾವೇರಿ ನದಿಯ ಉಪನದಿಯ ದಡದಲ್ಲಿ ಇರುವ ಸ್ವಾಮಿಮಲೈ ಕಾರ್ತಿಕೇಯ ದೇವರ (ಮುರುಗನ್ ದೇವರು ಎಂದೂ ಕರೆಯಲಾಗುತ್ತದೆ) ಆರು ದೇವಸ್ಥಾನಗಳಲ್ಲಿ ನಾಲ್ಕನೆಯದನ್ನು (ಪಾಡಲ್ ಪೆಟ್ರಾ ಸ್ಥಾಲಂಗಲ್) ಹೊಂದಿದೆ. ಇಲ್ಲಿನ ಸ್ಥಳದ ಪ್ರತೀತಿಯ ಪ್ರಕಾರ, ಈ ಸ್ಥಳದಲ್ಲಿ ಪವಿತ್ರವಾದ ಪ್ರಣವ ಮಂತ್ರದ 'ಓಂ' ನ ಅರ್ಥವನ್ನು ಕಾರ್ತಿಕೇಯನು ತನ್ನ ತಂದೆ ಶಿವನಿಗೆ ವಿವರಿಸಿದನು.

ದೇವಸ್ಥಾನ ಸಂಕೀರ್ಣದ ರಾಜ ಗೋಪುರಂ ದಲ್ಲಿ ಮುರುಗನ್ ದೇವರನ್ನು ಗುರು ಅಥವಾ ಶಿಕ್ಷಕ ಎಂಬುದಾಗಿ ಸೂಚಿಸಲಾಗಿದೆ ಮತ್ತು ಆತನಿಂದ ವಿದ್ಯೆಯನ್ನು ಜ್ಞಾನವನ್ನು ಸ್ವೀಕರಿಸುವ ಶಿವನನ್ನು ಶಿಷ್ಯ ಅಥವಾ ವಿದ್ಯಾರ್ಥಿ ಎಂಬುದಾಗಿ ತೋರಿಸಲಾಗಿದೆ. ಈ ಸನ್ನಿವೇಶದ ಕಾರಣದಿಂದ ಈ ಸ್ಥಳಕ್ಕೆ ಸ್ವಾಮಿಮಲೈ ಎಂಬ ಹೆಸರು ಬಂತು. ಇಲ್ಲಿನ ದೇವರನ್ನು ಸ್ವಾಮಿನಾಥಂ ಎಂದು ಕರೆಯುತ್ತಾರೆ.

ಹಬ್ಬಗಳು ಮತ್ತು ಉತ್ಸವಗಳು

ಕುಂಭಕೋಣಂ ಗೆ ಸ್ವಾಮಿಮಲೈ ಸಮೀಪವಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಸ್ವಾಮಿಮಲೈ ನಲ್ಲಿ ಹಲವು ಪ್ರಮುಖ ಉತ್ಸವಗಳನ್ನು ಆಚರಿಸಲಾಗುತ್ತದೆ, ಇವುಗಳಲ್ಲಿ ಪ್ರಮುಖವಾದುವು ಎಪ್ರಿಲ್ ನಲ್ಲಿ ನಡೆಯುವ ರಥೋತ್ಸವ, ಮಾರ್ಚ್ ನಲ್ಲಿ ನಡೆಯುವ ಪಂಕುನಿ ಉತ್ತಿರಾಮ್ ಉತ್ಸವ. ಇಲ್ಲಿ ನಡೆಯುವ ಇತರೆ ಪ್ರಮುಖ ಉತ್ಸವಗಳೆಂದರೆ ವಿಸಾಕಂ ಉತ್ಸವ (ಮೇ ತಿಂಗಳಿನಲ್ಲಿ) ಹಾಗೂ ಅಕ್ಟೋಬರ್ ನಲ್ಲಿ ನಡೆಯುವ ಸ್ಕಂದ ಶಾಸ್ತಿ ಉತ್ಸವ.

ಸ್ವಾಮಿಮಲೈ ಪ್ರಸಿದ್ಧವಾಗಿದೆ

ಸ್ವಾಮಿಮಲೈ ಹವಾಮಾನ

ಸ್ವಾಮಿಮಲೈ
34oC / 93oF
 • Sunny
 • Wind: W 15 km/h

ಉತ್ತಮ ಸಮಯ ಸ್ವಾಮಿಮಲೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸ್ವಾಮಿಮಲೈ

 • ರಸ್ತೆಯ ಮೂಲಕ
  ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ಎಲ್ಲಾ ಪ್ರಮುಖ ನಗರಗಳಿಂದ ಸ್ವಾಮಿಮಲೈಗೆ ಬಸ್ ಸಂಪರ್ಕ ಏರ್ಪಡಿಸಿದೆ. ಸ್ವಾಮಿಮಲೈ ನಿಂದ ಕುಂಭಕೋಣಂ, ತಿರುಚ್ಚಿ, ಚಿದಂಬರಂ ಮತ್ತು ಚೆನ್ನೈಗೆ ಬಸ ಸಂಪರ್ಕ ಇದೆ. ಇದು ಪ್ರಸಿದ್ದ ಪ್ರವಾಸಿ ಸ್ಥಳವಾದ ಕಾರಣ ಬೇರೆ ಬೇರೆ ಋತುಮಾನಗಳಲ್ಲಿ, ಉತ್ಸವ, ಪೂಜೆಗಳನ್ನು ಅವಲಂಬಿಸಿ ಬಸ್ ಗಳ ಸಂಖ್ಯೆ ಹೆಚ್ಚು ಕಡಿಮೆ ಆಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕುಂಭಕೋಣಂ ರೈಲ್ವೆ ನಿಲ್ದಾಣ ಕೇವಲ ಆರು ಕಿಲೋಮೀಟರ್ ದೂರದಲ್ಲಿದ್ದು, ಸ್ವಾಮಿಮಲೈಗೆ ತಲುಪಲು ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಕ್ವಿಯಿಲೋನ್, ತಿರುಪತಿ, ಚೆನ್ನೈ ಮತ್ತು ರಾಮೇಶ್ವರಂ ನಿಂದ ಕುಂಭಕೋಣಂ ಗೆ ನಿರಂತರ ರೈಲ್ವೆ ಸಂಪರ್ಕ ಇದೆ. ಬಸ್ ಮತ್ತು ಟಾಕ್ಸಿಗಳೆರಡು ಕುಂಭಕೋಣಂ ನಿಂದ ಸ್ವಾಮಿಲಮೈಗೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತಿರುಚ್ಚಿ ಸ್ವಾಮಿಮಲೈಗೆ ಸಮೀಪದಲ್ಲಿರುವ ವಾಯುನೆಲೆಯನ್ನು ಹೊಂದಿದೆ. ಇದು ತೊಂಭತ್ತು ಕಿ.ಮೀ ದೂರದಲ್ಲಿದೆ. ಸಮೀಪದಲ್ಲಿರುವ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 275 ಕಿ.ಮೀ ದೂರದಲ್ಲಿದೆ. ತಿರುಚ್ಚಿಯಿಂದ ಟಾಕ್ಸಿಗಳು ಸುಮಾರು 1,000 ರೂ ಆದರೆ ಚೆನ್ನೈಯಿಂದ ಇವುಗಳ ದರ ಸುಮಾರು 3000 ಆಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Sep,Sat
Return On
20 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Sat
Check Out
20 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Sat
Return On
20 Sep,Sun
 • Today
  Swamimalai
  34 OC
  93 OF
  UV Index: 7
  Sunny
 • Tomorrow
  Swamimalai
  30 OC
  87 OF
  UV Index: 8
  Moderate or heavy rain shower
 • Day After
  Swamimalai
  29 OC
  84 OF
  UV Index: 8
  Patchy rain possible