Search
  • Follow NativePlanet
Share
ಮುಖಪುಟ » ಸ್ಥಳಗಳು» ಕುಂಭಕೋಣಂ

ಕುಂಭಕೋಣಂ : ಮಂದಿರನಗರಗಳಿಗೆ ಇದು ಹುಟ್ಟೂರು

37

ಕೂಂಬಕೋಣಂ ಎಂದೂ ಕರೆಯಲ್ಪಡುವ ಕುಂಬಕೋಣಂ ಒಂದು ಸುಂದರ ಹಾಗೂ ಪವಿತ್ರ ನಗರ. ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿರುವ ಕುಂಬಕೋಣಂ ಕಾವೇರಿ ಮತ್ತು ಅರ್ಸಲಾರ್ ನದಿಗಳ ನಡುವಣ ಸ್ಥಳದಲ್ಲಿರುವ ಕಾರಣ ಧಾರ್ಮಿಕ ಮಹತ್ವದ ಜೊತೆಗೇ ಅಹ್ಲಾದಕರ ವಾತಾವರಣವನ್ನೂ ಹೊಂದಿದೆ. ನಗರದ ದಕ್ಷಿಣ ಭಾಗದಲ್ಲಿ ಅರ್ಸಲಾರ್ ನದಿಯೂ ಉತ್ತರ ಭಾಗದಲ್ಲಿ ಕಾವೇರಿ ನದಿಯೂ ಸಮಾನಾಂತರವಾಗಿ ಹರಿಯುತ್ತಿವೆ.

ಕುಂಭಕೋಣಂ ಇತಿಹಾಸವನ್ನು ಕೊಂಚ ಕೆದಕಿದರೆ ಹಲವಾರು ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ. ಕ್ರಿ.ಪೂರ್ವ 3-4 ನೇ ಶತಮಾನದ ಸಂಗಂ ಅವಧಿ (ತಮಿಳಾಕಂ ಎಂದೂ ಕರೆಯಲ್ಪಡುತ್ತದೆ) ಯಲ್ಲಿ ಈ ನಗರದ ಉಪಸ್ಥಿತಿಯ ಪುರಾವೆಗಳು ದೊರಕುತ್ತವೆ. ದಕ್ಷಿಣ ಭಾರತವನ್ನು ಆಳಿದ ಹಲವು ರಾಜವಂಶಗಳು ಈ ಪ್ರದೇಶವನ್ನೂ ಆಳಿವೆ. ಅವುಗಳಲ್ಲಿ ಪ್ರಮುಖವಾಗಿ ಚೋಳರು, ಪಲ್ಲವರು, ಪಾಂಡ್ಯರು, ಮದುರಲ್ ನಾಯಕರು, ತಂಜಾವೂರ್ ನಾಯಕರು ಹಾಗೂ ತಂಜುವರ್ ಮರಾಠರು ಪ್ರಮುಖರಾಗಿದ್ದಾರೆ. ಕ್ರಿ.ಶ. ಏಳನೆಯ ಶತಮಾನದಲ್ಲಿ ಮಧ್ಯಕಾಲೀನ ಚೋಳರು ಕುಂಭಕೋಣಂ ನಗರವನ್ನು ತಮ್ಮ ರಾಜಧಾನಿಯಾಗಿ ಆರಿಸಿಕೊಂಡ ಬಳಿಕ ಕುಂಬಕೋಣಂ ಹೆಚ್ಚಿನ ಪ್ರಸಿದ್ಧಿ ಪಡೆಯಿತು. ಆದರೆ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕುಂಬಕೋಣಂ ಅತ್ಯಂತ ಹೆಚ್ಚಿನ ಅಭ್ಯುದಯ ಮತ್ತು ಪ್ರಖ್ಯಾತಿ ಪಡೆಯಿತು. ಇಂದಿಗೂ ನಗರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಬೋಧಿಸುವ ಹಲವು ವಿದ್ಯಾಲಯಗಳು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವ ಕಾರಣ ಕುಂಬಕೋಣಂಗೆ 'ದಕ್ಷಿಣ ಭಾರತದ ಕೇಂಬ್ರಿಜ್' ಎಂಬ ಅನ್ವರ್ಥನಾಮವೂ ದೊರಕಿದೆ.

ಪ್ರತಿ ರಾಜವಂಶವೂ ತನ್ನ ಆಳ್ವಿಕೆಯ ಕಾಲದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿ ಶಾಶ್ವತ ಕುರುಹನ್ನು ಬಿಟ್ಟು ಹೋಗಿವೆ. ಆದರೆ ಮಧ್ಯಕಾಲೀನ ಚೋಳರು ಎರಡು ಶತಮಾನಗಳಿಗೂ ಹೆಚ್ಚು ಕಾಲ ಕುಂಬಕೋಣಂ ನಗರವನ್ನು ತಮ್ಮ ರಾಜಧಾನಿಯಾಗಿಸಿದ್ದ ಕಾಲದಲ್ಲಿ ಹಲವು ಪ್ರಮುಖ ದೇವಾಲಯಗಳನ್ನು ನಿರ್ಮಿಸಿದರು. ಶಿವನನ್ನು ಆರಾಧಿಸಲ್ಪಡುವ ನಗರದ ಕುಂಬೇಶ್ವರ ದೇವಾಲಯ ಇಂದು ಅಸ್ತಿತ್ವದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯವಾಗಿದೆ. ತರುವಾಯ ಬಂದ ಇತರ ರಾಜವಂಶಗಳೂ ಹಿಂದಿನವರಿಗಿಂತ ಉನ್ನತ ಮಟ್ಟದ ದೇವಾಲಯಗಳನ್ನು ನಿರ್ಮಿಸಿದವು. ಉದಾಹರಣೆಗೆ ಹದಿನಾರನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ನಾಯಕ ರಾಜವಂಶ ನಿರ್ಮಿಸಿದ ಸಾರಂಗಪಾಣಿ ದೇವಾಲಯ ಹನ್ನೆರಡು ಅಂತಸ್ತುಗಳನ್ನು ಹೊಂದಿದೆ. ಅಲ್ಲದೇ ರಘುನಾಥನಾಯಕ ನಿರ್ಮಿಸಿದ ರಾಮಸ್ವಾಮಿ ದೇವಾಲಯದ ಪ್ರತಿ ಗೋಡೆಗಳ ರಾಮಾಯಣದ ಚಿತ್ರಣಗಳನ್ನು ಬಿಡಿಸಲಾಗಿದೆ. ಸೃಷ್ಟಿಕರ್ತ ಬ್ರಹ್ಮನನ್ನು ಆರಾಧಿಸಲು ನಿರ್ಮಿಸಿರುವ ದೇವಾಲಯಗಳ ಸಂಖ್ಯೆ ವಿರಳ. ವಿಶ್ವದಲ್ಲಿರುವ ಕೆಲವೇ ಬ್ರಹ್ಮದೇವಾಲಯಗಳಲ್ಲಿ ಒಂದು ಕುಂಬಕೋಣಂನಲ್ಲಿದೆ. (ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿದೆ).

ದೇವಾಲಯಗಳ ನಗರ

ಬಾಂಗ್ಲಾದೇಶದ ಢಾಕಾ ನಗರ ತನ್ನಲ್ಲಿರುವ ಮಸೀದಿಗಳ ಸಂಖ್ಯೆಗಳಿಗನುಗುಣವಾಗಿ ಮಸೀದಿಗಳ ನಗರ ಎಂಬ ಪ್ರಸಿದ್ಧಿ ಪಡೆದಿದ್ದರೆ ತನ್ನಲ್ಲಿರುವ ದೇವಾಲಯಗಳ ಸಂಖ್ಯೆಗಾಗಿ ಕುಂಬಕೋಣಂ 'ದೇವಾಲಯಗಳ ನಗರ' ಎಂಬ ಹೆಸರನ್ನೂ ಪಡೆದಿದೆ. ಕುಂಬಕೋಣಂ ನಗರ ಪೌರಸಭೆಯ ವ್ಯಾಪ್ತಿಯಲ್ಲಿಯೇ 188 ದೇವಾಲಯಗಳಿದ್ದರೆ ಹೊರವಲಯದಲ್ಲಿ ಇನ್ನೂ ನೂರಕ್ಕೂ ಹೆಚ್ಚು ದೇವಾಲಯಗಳಿವೆ! ಪ್ರತಿ ದೇವಾಲಯದಲ್ಲಿಯೂ ಏನಾದರೊಂದು ವೈಶಿಷ್ಟ್ಯತೆ ಇದ್ದರೂ ಹೆಚ್ಚು ಉಲ್ಲೇಖಾರ್ಹವಾದವು ಈ ಮೂರು ದೇವಾಲಯಗಳು - ಕುಂಬೇಶ್ವರ ದೇವಾಲಯ, ಸಾರಂಗಪಾಣಿ ದೇವಾಲಯ ಮತ್ತು ರಾಮಸ್ವಾಮಿ ದೇವಾಲಯ. ಹನ್ನೆರಡು ವರ್ಷಗಳಿಗೆ ಒಂದು ಬಾರಿ ಆಚರಿಸಲಾಗುವ 'ಮಹಾಮಹಂ' ಉತ್ಸವ ನಡೆಯುವುದೂ ಇಲ್ಲಿಯೇ. ಉತ್ತರ ಭಾರತದ ಕುಂಭಮೇಳದಂತೆಯೇ ದಕ್ಷಿಣದ ಈ ಮಹಾಮೇಳದಲ್ಲಿ ವಿಶ್ವದೆಲ್ಲೆಡೆಯಿಂದ ಲಕ್ಷಾಂತರ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.  ಇನ್ನುಳಿದಂತೆ ಪತ್ತೇಶ್ವರಂ ದುರ್ಗಾ ದೇವಾಲಯ, ಉಪ್ಪಿಲಿಅಪ್ಪನ್ ದೇವಾಲಯ, ಸೋಮೇಶ್ವರ ದೇವಾಲಯ ಮತ್ತು ಕಂಬಹರೇಶ್ವರರ್ ದೇವಾಲಯಗಳೂ ನಗರದ ಖ್ಯಾತಿಯನ್ನು ಹೆಚ್ಚಿಸಿವೆ.

ಕುಂಬಕೋಣಂ ನಗರದಲ್ಲಿ ದೇವಾಲಯಗಳ ಹೊರತಾಗಿ ಹಲವಾರು ಮಠಗಳೂ ಇವೆ. ಇವುಗಳಲ್ಲಿ ಪ್ರಮುಖವಾದುದು ಶ್ರೀ ಶಂಕರಮಠ. ತಾಂಜಾವೂರಿನ ಪ್ರತಾಪಸಿಂಹನ ಆಳ್ವಿಕೆಯ ಕಾಲದಲ್ಲಿ (1739-1763) ಈ ಮಠವನ್ನು ಕಾಂಚಿಪುರದಿಂದ ಸ್ಥಳಾಂತರಿಸಲಾಗಿತ್ತು. ಆದರೆ 1960ರ ದಶಕದಲ್ಲಿ ಈ ಮಠವನ್ನು ಮತ್ತೆ ಕಾಂಚಿಪುರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲದೇ ಕುಂಭಕೋಣದಲ್ಲಿ ಧರ್ಮಪುರಂ ಮತ್ತು ತಿರುಪ್ಪನಂಡಲ್ ಎಂಬ ಎರಡು ವೇಲಾರರ ಮಠಗಳೂ ಇವೆ. ಇನ್ನುಳಿದಂತೆ ರಾಘವೇಂದ್ರ ಮಠ, ವೈಷ್ಣವಿತೇಮಠದ ಒಂದು ಶಾಖೆಯಾಗಿರುವ ಅಹೋಬಿಲಮಠಗಳೂ ಇಲ್ಲಿವೆ.

ಇಷ್ಟೊಂದು ಹೆಚ್ಚಿನ ಸಂಖ್ಯೆಯ ದೇವಾಲಯಗಳ ಮತ್ತು ಮಠಗಳ ಆಯ್ಕೆಯ ಕಾರಣ ಕುಂಭಕೋಣಂ ಭಾರತೀಯ ಹಿಂದೂ ಯಾತ್ರಾರ್ಥಿಗಳಿಗೆ ಅಚ್ಚುಮೆಚ್ಚಿನ ಆಯ್ಕೆಯಾಗಿದೆ.

ಹವಾಮಾನ ಮತ್ತು ಸೂಕ್ತ ಕಾಲಮಾನ

ಕುಂಬಕೋಣಂ ನಗರಕ್ಕೆ ಭೇಟಿ ನೀಡಲು ಚಳಿಗಾಲ ಅತ್ಯಂತ ಸೂಕ್ತ. ಈ ಸಮಯದಲ್ಲಿ ಯಾತ್ರಾರ್ಥಿಗಳ ಜೊತೆಗೇ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಿಮಾನ, ರೈಲು, ಬಸ್ ಮತ್ತು ಖಾಸಗಿ ವಾಹಗಳಲ್ಲಿ ಆಗಮಿಸಲು ಉತ್ತಮ ಸೌಲಭ್ಯಗಳಿವೆ. ಶತಮಾನಗಳಿಂದ ಈ ಪುರಾತನ ಕಟ್ಟಡಗಳು ತನ್ನ ಕಾಲಗರ್ಭದಲ್ಲಿ ತಮ್ಮೊಡಲಲ್ಲಿ ಹುದುಗಿಸಿಕೊಂಡಿರುವ ವಿಸ್ಮಯಗಳನ್ನು ಅನ್ವೇಶಿಸಲು ಪ್ರವಾಸಿಗರಿಗೆ ಆಹ್ವಾನ ನೀಡುತ್ತಿವೆ.

ಕುಂಭಕೋಣಂ ಪ್ರಸಿದ್ಧವಾಗಿದೆ

ಕುಂಭಕೋಣಂ ಹವಾಮಾನ

ಉತ್ತಮ ಸಮಯ ಕುಂಭಕೋಣಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುಂಭಕೋಣಂ

  • ರಸ್ತೆಯ ಮೂಲಕ
    ಬಸ್ ಮೂಲಕ ಆಗಮಿಸುವವರಾದರೆ: ಕುಂಬಕೋಣಂ ಹಾಗೂ ಇತರ ನಗರಗಳ ನಡುವೆ ತಮಿಳುನಾಡು ಸರ್ಕಾರಿ ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ. ಚೆನ್ನೈ, ಚಿದಂಬರಂ ಹಾಗೂ ತ್ರಿಚಿಗಳಿಂದ ನೇರ ಬಸ್ ಸೌಕರ್ಯವಿದೆ. ಅಲ್ಲದೇ ಸ್ವಂತ ಕಾರು ಹಾಗೂ ಖಾಸಗಿ ಟ್ಯಾಕ್ಸಿ ಮೂಲಕವೂ ಆಗಮಿಸಬಹುದು. ಖಾಸಗಿ ಟ್ಯಾಕ್ಸಿಗಳು ಸುಮಾರು 1,000 - 2,500 ರೂಗಳವರೆಗೆ ಬಾಡಿಗೆ ವಿಧಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೈಲುಮಾರ್ಗವಾಗಿ ಆಗಮಿಸುವವರಾದರೆ: ಕುಂಬಕೋಣಂ ರೈಲ್ವೇ ನಿಲ್ದಾಣ ನಗರದ ಕೇಂದ್ರಭಾಗದಲ್ಲಿದ್ದು ಸುತ್ತ ಮುತ್ತಲ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಚೆನ್ನೈ, ತಿರುಪತಿ, ರಾಮೇಶ್ವರಂ, ಕೊಲ್ಲಂ ನಗರಗಳಿಗೆ ನೇರ ರೈಲು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕುಂಬಕೋಣಂ ನಗರಕ್ಕೆ ತ್ರಿಚಿ ವಿಮಾನ ನಿಲ್ದಾಣ ನಿಕಟವಾದ ನಿಲ್ದಾಣವಾಗಿದ್ದು 96 ಕಿ.ಮೀ ದೂರದಲ್ಲಿದೆ. ತ್ರಿಚಿ ನಿಲ್ದಾಣಕ್ಕೆ ಕೇವಲ ಅಂತರ್ದೇಶೀಯ ವಿಮಾನಗಳು ಮಾತ್ರ ಆಗಮಿಸುವುದರಿಂದ ಅಂತಾರಾಷ್ಟ್ರೀಯ ಪ್ರವಾಸಿಗರು ಚೆನ್ನೈ ನಿಲ್ದಾಣಕ್ಕೆ ಮೊದಲು ಬರಬೇಕಾಗುತ್ತದೆ. ತ್ರಿಚಿ ವಿಮಾನ ನಿಲ್ದಾಣದಿಂದಲೇ ಕುಂಬಕೋಣಂಕ್ಕೆ ನೇರವಾಗಿ ಬರುವುದಾದರೆ ಸುಮಾರು ಒಂದು ಸಾವಿರ ರೂ ಗಳಿಗೆ ಖಾಸಗಿ ಟ್ಯಾಕ್ಸಿ ದೊರಕುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed