Search
  • Follow NativePlanet
Share
ಮುಖಪುಟ » ಸ್ಥಳಗಳು» ಸೀರ್ಕಾಳಿ

ಸೀರ್ಕಾಳಿ - ಧರ್ಮ, ನಂಬಿಕೆಗಳು ಮತ್ತು ದೇವಾಲಯಗಳಿಂದ ಕೂಡಿದ ತಾಣ

13

ತಮಿಳುನಾಡಿನ ನಾಗಪಟ್ಟಿನಮ್ ಜಿಲ್ಲೆಯಲ್ಲಿ ಬಂಗಾಳ ಕೊಲ್ಲಿಯ ತೀರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಸೀರ್ಕಾಳಿಯು ಒಂದು ಪ್ರಸಿದ್ಧ ಹಿಂದೂ  ಯಾತ್ರಾ ಸ್ಥಳವಾಗಿದೆ. ಸೀರ್ಕಾಳಿಯು ಒಂದು ಶಾಂತವಾದ ಪರಿಸರವನ್ನು ಹೊಂದಿರುವ ದಕ್ಷಿಣ ಭಾರತದ ಒಂದು ಪಟ್ಟಣವಾಗಿದೆ. ಈ ಊರಿಗೆ ಒಂದು ಐತಿಹಾಸಿಕ ಹಿನ್ನಲೆಯಿದೆ. ಜೊತೆಗೆ ಆಧುನಿಕ ಜಗತ್ತಿನ ಅಭಿವೃದ್ಧಿ ಮಂತ್ರವು ಇಲ್ಲಿ ಅಡಗಿದೆ. ಅಲ್ಲದೆ ಈ ಊರಿನಲ್ಲಿ ಸಂಪ್ರದಾಯಗಳು ಮತ್ತು ಆಚರಣೆಗಳು ಎಲ್ಲವು ಸೇರಿ ಈ ಊರನ್ನು ಪ್ರವಾಸೋದ್ಯಮದ ನಕಾಶೆಯಲ್ಲಿ ಗುರುತಿಸುವಂತೆ ಮಾಡಿವೆ.

ದಂತ ಕಥೆಗಳ ಮತ್ತು ಪುರಾಣಗಳ ಪ್ರಕಾರ, ಒಂದೊಮ್ಮೆ ಸಿರ್ಕಾಳಿ ಹಾಗು ಇಡೀ ಭೂಮಿಯೆ ನೀರಿನಲ್ಲಿ ಮುಳುಗಿ ಹೋದಾಗ ಈ ಸ್ಥಳದಲ್ಲಿ ಬ್ರಹ್ಮನು ಶಿವನನ್ನು ಪ್ರಾರ್ಥಿಸಿದನಂತೆ (ಅದಕ್ಕಾಗಿಯೇ ಬ್ರಹ್ಮೇಶ್ವರರ್ ಎಂಬ ಹೆಸರು ಬಂದಿದೆ). ಆಗ ಪರಶಿವನು ಒಂದು ದೋಣಿಯಲ್ಲಿ ಬಂದು ಎಲ್ಲರನ್ನು ಕಾಪಾಡಿದನಂತೆ. ಹಾಗಾಗಿ ಈ ಊರಿನಲ್ಲಿ ಶಿವನ ಎಲ್ಲ ಅವತಾರಗಳನ್ನು ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಸೀರ್ಕಾಳಿಗೆ ತೋಣಿಪುರಂ ಅಥವಾ ತೋಣಿಯಪ್ಪರ್ ಎಂಬ ಹೆಸರು ಸಹ ಇದೆ. ತಮಿಳಿನಲ್ಲಿ ತೋಣಿ ಎಂದರೆ ದೋಣಿ ಎಂದರ್ಥ.

ಸೀರ್ಕಾಳಿಯು ತಮಿಳುನಾಡಿನ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಈ ಊರಿನಲ್ಲಿ ಅಸಂಖ್ಯಾತ ಶಿವನ ದೇವಾಲಯಗಳು ಇವೆ. ಹಾಗಾಗಿ ಇಲ್ಲಿಗೆ ಕೇವಲ ತಮಿಳು ನಾಡಿನಿಂದಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಗಳಿಂದ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಜನವರಿ ತಿಂಗಳಿನಲ್ಲಿ ಇಲ್ಲಿ ಜರುಗುವ ಮಕರ ಪೊಂಗಲ್ ಹಬ್ಬವನ್ನು ಭಾರೀ ಸಡಗರದಿಂದ ಆಚರಿಸಲಾಗುತ್ತದೆ. ಇದು ಇಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ. ಮಹಾಶಿವರಾತ್ರಿ ಬರುವ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿರುವ ಅಸಂಖ್ಯಾತ ಶಿವನ ದೇವಾಲಯಗಳಿಗೆ ಭೇಟಿಕೊಡುವ ಸಲುವಾಗಿ ಅಸಂಖ್ಯಾತ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ. ಇದರ ಜೊತೆಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯುವ ದೀಪಾವಳಿ ಹಬ್ಬವನ್ನು ಸಹ ಇಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.

ಈ ಸ್ಥಳಕ್ಕೆ ಉತ್ತಮ ಸಾರಿಗೆ ವ್ಯವಸ್ಥೆಯು ಸಹ ಇದೆ ಮತ್ತು ಬೇಸಿಗೆಯಲ್ಲಿ ಆರ್ದ್ರತೆಯಿಂದ ಕೂಡಿದ ಹವಾಮಾನವಿರುತ್ತದೆ.

ಸೀರ್ಕಾಳಿ ಪ್ರಸಿದ್ಧವಾಗಿದೆ

ಸೀರ್ಕಾಳಿ ಹವಾಮಾನ

ಉತ್ತಮ ಸಮಯ ಸೀರ್ಕಾಳಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೀರ್ಕಾಳಿ

  • ರಸ್ತೆಯ ಮೂಲಕ
    ಈ ಸ್ಥಳವು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಸೀರ್ಕಾಳಿಗೆ ಹಲವಾರು ಬಸ್ಸುಗಳು ಹೋಗಿ ಬರುತ್ತಿರುತ್ತವೆ. ತಮಿಳು ನಾಡಿನ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸೀರ್ಕಾಳಿಗೆ ನೀವು ತಲುಪಲು ನೆರವಾಗುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೀರ್ಕಾಳಿಗೆ ರೈಲಿನ ಮೂಲಕ ಸಹ ತಲುಪಬಹುದು. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ಮಾಯವರಂನಲ್ಲಿದೆ. ಇದು ಇಲ್ಲಿಂದ 20 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣವು ಚೆನ್ನೈ, ರಾಮೇಶ್ವರಂ, ವಿಲ್ಲುಪುರಂ ಮತ್ತು ಕೊಯಮತ್ತೂರುಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಸೀರ್ಕಾಳಿಗೆ ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳ ಮೂಲಕ ತಲುಪಬಹುದು. ಇವುಗಳ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಸಹ ನೀವು ಸೀರ್ಕಾಳಿ ತಲುಪಲು ನೆರವಾಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ತಿರುಚ್ಚಿ ಅಥವಾ ತಿರುಚ್ಚಿರಾಪಳ್ಳಿ ವಿಮಾನ ನಿಲ್ದಾಣವು ಸೀರ್ಕಾಳಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 125 ಕಿ.ಮೀ ದೂರದಲ್ಲಿದೆ. ಇದೊಂದು ದೇಶೀಯ ವಿಮಾನ ನಿಲ್ದಾಣವಾಗಿದೆ. ಅಲ್ಲದೆ ಸೀರ್ಕಾಳಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಚೆನ್ನೈನಲ್ಲಿ ನೆಲೆಗೊಂಡಿದೆ. ಇದು ಇಲ್ಲಿಂದ 235 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣದಿಂದ ಸೀರ್ಕಾಳಿಗೆ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed