Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ಸೋಮೇಶ್ವರ ದೇವಾಲಯ

ಸೋಮೇಶ್ವರ ದೇವಾಲಯ, ಕುಂಭಕೋಣಂ

2

ಶಿವ, ಚಿಕ್ಕೇಶ್ವರ ಮತ್ತು ದೇವತೆ ಸೋಮಸುಂದರಿಯರನ್ನು ಆರಾಧಿಸಲ್ಪಡುವ ಈ ದೇವಾಲಯಕ್ಕೆ ರೋಚಕ ಇತಿಹಾಸವಿದೆ. ಪುರಾಣದ ಪ್ರಕಾರ ಅಮೃತವನ್ನು ಹೊಂದಿದ್ದ ಕುಡಿಕೆಯಲ್ಲಿ ಬಿರುಕುಂಟಾದಾಗ ಅದರಿಂದ ಒಂದು ನೂಲಿನಷ್ಟು ಅಮೃತ ಹೊರಬಿದ್ದು ಬಳೆಯಾಕಾರ ತಾಳಿತ್ತು.  ಆ ಬಳೆ ಬಿದ್ದಲ್ಲಿ ಶಿವಲಿಂಗವೊಂದು ಉದ್ಭವವಾಗಿತ್ತು. ಈ ಶಿವಲಿಂಗವಿರುವಲ್ಲಿಯೇ ಸೋಮೇಶ್ವರ ದೇವಾಲಯವನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ.

ಈ ದೇವಾಲಯದ ವಾಸ್ತುಶಿಲ್ಪವನ್ನು ಗಮನಿಸಿದರೆ ಹದಿಮೂರನೆಯ ಶತಮಾನದ ದ್ರಾವಿಡ ಶೈಲಿ ಗಮನಕ್ಕೆ ಬರುತ್ತದೆ. ಆ ಸಮಯದಲ್ಲಿ ಚೋಳರ ಆಳ್ವಿಕೆಯಿತ್ತು. ಚೋಳರು ಶಿವನಿಗೆ ಸರಿಸಮಾನವಾಗಿ ಪಾರ್ವತಿಯನ್ನೂ ಆರಾಧಿಸುತ್ತಿದ್ದರು. ಬಳಿಕ ಬಂದ ರಾಜರೂ ತಮ್ಮ ಪಾಲಿನ ಬದಲಾವಣೆಗಳನ್ನು ನೀಡಿದರೂ ಮೂಲ ಶೈಲಿಯನ್ನು ಬದಲಿಸಲು ಹೋಗದಿದ್ದುದರಿಂದ ಇಂದಿಗೂ ದ್ರಾವಿಡ ಶೈಲಿ ಉಳಿದುಕೊಂಡು ಬಂದಿದೆ. ದೇವಾಲಯದ ಆವರಣದಲ್ಲಿ ಆರ್ಮುಗಂ ಮತ್ತು ಥೇನರ್ ಮೋಳಿ ಅಮ್ಮಾಳ್ ವಿಗ್ರಹಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.

ಈ ದೇವಾಲಯಕ್ಕೆ ಐದಂತಸ್ತಿನ ಬೃಹತ್ ಪ್ರವೇಶದ್ವಾರವಿದೆ. ಅನತಿದೂರದಲ್ಲಿರುವ ಕುಂಬೇಶ್ವರ ದೇವಾಲಯ ಹಾಗೂ ಸೋಮೇಶ್ವರ ದೇವಾಲಯಗಳ ನಡುವೆ ಹೇಮಾ ಪುಷ್ಕರಣಿ ಎಂಬ ಹೆಸರಿನ ಕೊಳವಿದೆ. ಈ ಕೊಳದಲ್ಲಿ ಎರಡೂ ದೇವಾಲಯಗಳ ಪ್ರತಿಬಿಂಬ ನೋಡುವುದೇ ಒಂದು ವಿಭಿನ್ನ ಅನುಭವ ನೀಡುತ್ತದೆ. ಸಾರಂಗಪಾಣಿ ದೇವಾಲಯದ ದಕ್ಷಿಣ ಭಾಗದಿಂದಲೂ ಸೋಮೇಶ್ವರ ದೇವಾಲಯಕ್ಕೆ ಪ್ರವೇಶಿಸಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri