Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುತ್ತನಿ » ಹವಾಮಾನ

ತಿರುತ್ತನಿ ಹವಾಮಾನ

ತಿರುತ್ತನಿಗೆ ಭೇಟಿ ನೀಡಲು ಚಳಿಗಾಲ ಉತ್ತಮವಾಗಿದ್ದು ಡಿಸೆಂಬರ್ ನಿಂದ ಫೆಬ್ರವರಿ ಇಲ್ಲಿ ಚಳಿಗಾಲವಾಗಿದೆ. ವಾತಾವರಣ ಬೆಚ್ಚಗೆ ಮತ್ತು ಅಹ್ಲಾದಕರವಾಗಿರುವುದರಿಂದ ಪ್ರವಾಸಿಗರು ಆನಂದಿಸಬಹುದು. ಜೂನ್ ನಿಂದ ನವೆಂಬರ್ ಮಳೆಗಾಲವಾಗಿದ್ದು, ಈ ಸಮಯದಲ್ಲೂ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು ಆದರೆ ಛತ್ರಿ ತೆಗೆದುಕೊಂಡು ಹೋಗಲು ಮರೆಯದಿರಿ.

ಬೇಸಿಗೆಗಾಲ

ತಿರುತ್ತನಿಯಲ್ಲಿ ಬೇಸಿಗೆ ಬಿಸಿ ಮತ್ತು ಉಷ್ಣ ದಿಂದ ಕೂಡಿರುತ್ತದೆ. ಮಾರ್ಚ್ ಮತ್ತು ಮೇ ತಿಂಗಳಿನ ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶ 42 ಡಿಗ್ರಿ ಸೆಲ್ಶಿಯಸ್ ವರೆಗೆ ಹೋಗುತ್ತದೆ. ಈ ಸಮಯದಲ್ಲಿ ಸಂಜೆ ಸಮಯ ಮಾತ್ರ ಹೊರ ಸುತ್ತಾಡಲು ಹಿತಕರವಗಿರುತ್ತದೆ.

ಮಳೆಗಾಲ

ಜೂನ್ ನಿಂದ ಆಗಸ್ಟ್ ವರೆಗೆ ತಿರುತ್ತನಿಯಲ್ಲಿ ಮಳೆಗಾಲವಿರುತ್ತದೆ. ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಈ ಕಾಲದಲ್ಲಿ ರಸ್ತೆಗಳು ರಾಡಿ, ಕೆಸರುಗಳಿಂದ ಕೂಡಿದ್ದು, ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಪ್ರವಾಸಿಗರು ಎಚ್ಚರಿಕೆಯಲ್ಲಿರುವುದು ಅಗತ್ಯ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇಲ್ಲಿ ಚಳಿಗಾಲವಾಗಿದ್ದು ವಾತಾವರಣ ಸುಂದರವಾಗಿರುತ್ತದೆ. ಉಷ್ಣಾಂಶ 23 ಡಿಗ್ರಿ ಸೆಲ್ಶಿಯಸ್ ನ ಆಸು ಪಾಸಿರುವುದರಿಂದ ಈ ಸಮಯ ತಿರುತ್ತನಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.