Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀಪೆರುಂಬುದೂರು » ಹವಾಮಾನ

ಶ್ರೀಪೆರುಂಬುದೂರು ಹವಾಮಾನ

ಅಕ್ಟೋಬರ್ ನಿಂದ ಫೆಬ್ರವರಿ ವರೆಗಿನ ಅವಧಿ ಶ್ರೀಪೆರುಂಬುದೂರಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಅವಧಿಯಾಗಿದೆ. ಈ ಅವಧಿಯ ತಾಮಪಾನ ಇದಕ್ಕೆ ಮುಖ್ಯ ಕಾರಣವಾಗಿದ್ದು ಆಹ್ಲಾದಕರವಾಗಿರುತ್ತದೆ. ಈ ಅವಧಿಯಲ್ಲಾಗುವ ಮಳೆ ತಾಪಮಾನವನ್ನು ಕಡಿಮೆ ಮಾಡಿ ನಿಮ್ಮ ಭೇಟಿಯನ್ನು ಆರಾಮದಾಯಕವನ್ನಾಗಿಸುತ್ತದೆ. ಈ ಅವಧಿಯಲ್ಲಿ ಪ್ರವಾಸಿ ಚಟುವಟಿಕೆಗಳೂ ಹೆಚ್ಚಾಗಿರುತ್ತವೆ.

ಬೇಸಿಗೆಗಾಲ

ಶ್ರೀಪೆರುಂಬುದೂರಿನ ವಾಯುಗುಣ ಚನ್ನೈನಂತೆಯೇ ಆಗಿದೆ. ಬೇಸಗೆಕಾಲ ಬಿಸಿಯಾಗಿದ್ದು ಶುಷ್ಕವಾಗಿದ್ದು ಮಾರ್ಚ್ ನಿಂದ ಜೂನ್ ತನಕ ಇರುತ್ತವೆ. ಇದರಲ್ಲಿ ಮೇ ತಿಂಗಳು ಅತ್ಯಂತ ಬಿಸಿಯಾದ ತಿಂಗಳಾಗಿದೆ. ಬೇಸಗೆಯ ಅವಧಿಯಲ್ಲಿ ತಾಪಮಾನ 32 ರಿಂದ 40 ಡಿಗ್ರಿ ಸೆಲ್ಸಿಯಸ್ ತನಕ ತಲುಪುತ್ತದೆ. ಈ ಅವಧಿಯಲ್ಲಿ ಪ್ರಯಾಣ ಮಾಡುವುದು ಅತ್ಯಂತ ಅನಾನುಕೂಲಕರವಾಗಬಹುದು.

ಮಳೆಗಾಲ

ಕಡಿಮೆ ಅವಧಿಗೆ ಇರುವ ಮಳೆಗಾಲ ಅಕ್ಟೊಬರ್ ನಿಂದ ನವೆಂಬರ್ ತಿಂಗಳಲ್ಲಿ ಚೆನ್ನಾಗಿ ಆನಂದಿಸಬಹುದಾಗಿದೆ. ಈ ಅವಧಿಯಲ್ಲಿ ತಾಪಮಾನ ಬಹಳ ಕಡಿಮೆಯಾಗಿರುತ್ತದೆ. ಆದರೂ ಆದ್ರತೆ ಹೆಚ್ಚಾಗಿರುತ್ತದೆ. ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗುತ್ತದೆ.

ಚಳಿಗಾಲ

ಇಲ್ಲಿ ಡಿಸೆಂಬರ್ ನಿಂದ ಫೆಬ್ರವರಿಯ ಅವಧಿಯಲ್ಲಿ ಚಳಿಗಾಲ ಇರುತ್ತದೆ. ಈ ಅವಧಿಯಲ್ಲಿ ಶ್ರೀಪೆರುಂಬುದೂರಿಗೆ ಭೇಟಿ ನೀಡಲು ಅತ್ಯಂತ ಉತ್ತಮವಾದ ಅವಧಿಯಾಗಿದೆ. ಈ ಅವಧಿಯಲ್ಲಿ ಸಣ್ಣ ಪ್ರಮಾಣದ ಮಳೆ ಆದರೂ ಆಶ್ಚರ್ಯವಿಲ್ಲ. ಈ ಅವಧಿಯ ತಾಪಮಾನ 25 ರಿಂದ 35 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಹಾಗೂ ಆಹ್ಲಾದಕರವಾಗಿರುತ್ತದೆ.