ಈ ಜಾಗದ ಅಧಿಕಾರಿಯಾಗಿದ್ದ ಡಚ್ ಗವರ್ನರ್ ಅವರ ಆಧಿಕಾರಿಕ ಬಂಗಲೆಯಾಗಿದ್ದ ಡ್ಯಾನಿಷ್ ಗವರ್ನರ್ ಬಂಗಲೆಯನ್ನು 1784 ರಲ್ಲಿ ಕಟ್ಟಲಾಯಿತು. ಇದನ್ನು ಈಗ ತಮಿಳುನಾಡಿನ ಪ್ರವಾಸೋಧ್ಯಮ ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ. ಇದು ಡಚ್ಚರ ವಾಸ್ತುಕಲೆಗೆ ಒಂದು ಉದಾಹರಣೆಯಾಗಿದೆ. ಇದನ್ನು ಸಾರ್ವಜನಿಕರಿಗಾಗಿ ತೆರೆದಿಡಲಾಗುತ್ತದೆ.
ಇದು ಪೂಂಪುಗಾರಿನ ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿದೆ. ಇದಲ್ಲದೆ, ಪೂಂಪುಗಾರಿನಲ್ಲಿರುವ ಅತೀ ದೊಡ್ಡ ಕಟ್ಟಡ ಕೂಡಾ ಇದಾಗಿದೆ. ಪೂಂಪುಗಾರಿನ ವಸಹಾತುಶಾಹಿ ಅಧಿಕಾರದ ಕುರುಹಾದ ಇದನ್ನು ಒಂದು ಬಾರಿ ಆದರೂ ನೋಡಲೇಬೇಕು. ಈ ಸ್ಥಳವು ತೀರಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕಾರಣ ಇಲ್ಲಿಗೆ ಭೇಟಿ ನೀಡುವುದು ಕಷ್ಟಕರವಲ್ಲ.