Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಮನಂಚೇರಿ » ಹವಾಮಾನ

ತಿರುಮನಂಚೇರಿ ಹವಾಮಾನ

ಎರಡು ಅವಧಿಗಳು ತಿರುಮನಂಚೇರಿಗೆ ಭೇಟಿ ನೀಡಲು ಸೂಕ್ತವಾಗಿದೆ. ಅವುಗಳಲ್ಲಿ ಒಂದು ಜೂನ್ ನಿಂದ ಸೆಪ್ಟೆಂಬರ್ ತನಕದ ಮಳೆಗಾಲ; ಈ ಅವಧಿಯಲ್ಲಿ ಇಲ್ಲಿನ ಭೂಮಿ ಹಸಿರಿನಿಂದ ಆವರಿಸಿರುತ್ತದೆ ಹಾಗೂ ತಾಜಾ ಆಗಿರುತ್ತದೆ. ಎರಡನೆ ಅವಧಿಯೆಂದರೆ ಅಕ್ಟೋಬರ್ ನಿಂದ ಮಾರ್ಚ್ ತನಕದ ಅವಧಿ. ಈ ಅವಧಿಯಲ್ಲಿ ತಾಪಮಾನ ಸಾಕಷ್ಟು ಕಡಿಮೆಯಾಗಿರುತ್ತದೆ ಹಾಗು ಸುತ್ತಾಡಲು ಹಿತಕರವಾಗಿರುತ್ತದೆ.

ಬೇಸಿಗೆಗಾಲ

ತಿರುಮನಂಚೇರಿಯಲ್ಲಿ ಬೇಸಿಗೆ ಬಹಳ ಬಿಸಿಯಿಂದ ಕೂಡಿರುತ್ತದೆ. ತಮಿಳುನಾಡಿನ ಇತರೆ ಭಾಗಗಳಲ್ಲಿ ಆಗುವಂತೆ ತಾಪಮಾನ ಸುಮಾರು 42 ಡಿಗ್ರಿಗಳ ತನಕ ತಲುಪುತ್ತದೆ. ಯಾವುದೇ ಅವಧಿಯಲ್ಲಿ ತಿರುಮನಂಚೇರಿಗೆ ತಲುಪಬಹುದಾದರೂ ಈ ಅವಧಿಯಲ್ಲಿ ಅಷ್ಟೊಂದು ಸಮಂಜಸವಲ್ಲ. ಈ ಅವಧಿಯಲ್ಲಿ ಭೇಟಿ ನೀಡುವಾಗ ಸಾಕಷ್ಟು ನೀರನ್ನು ಜೊತೆಗೆ ಇಟ್ಟುಕೊಳ್ಳುವುದು ಒಳಿತು. ಮಾರ್ಚ್ ನಿಂದ ಮೇ ತನಕ ಇಲ್ಲಿ ಬೇಸಿಗೆ ಕಾಲ ಇರುತ್ತದೆ.

ಮಳೆಗಾಲ

ತಿರುಮನಂಚೇರಿಯಲ್ಲಿ ಮಳೆಗಾಲ ಅಷ್ಟೊಂದು ಜೋರಾಗಿರುವುದಿಲ್ಲ. ಆದರೆ, ಮೊದಲ ಮಳೆಯ ನಂತರ ಮಣ್ಣಿನ ಸುಗಂಧ ಯಾರನ್ನಾದರೂ ತಿರುಮನಂಚೇರಿಗೆ ಆಹ್ವಾನಿಸುತ್ತದೆ. ಜೂನ್ ನಿಂದ ಸೆಪ್ಟೆಂಬರ್ ತನಕ ಇಲ್ಲಿ ಮಳೆಗಾಲ ಇರುತ್ತದೆ. ನವೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲೂ ಇಲ್ಲಿ ಮಳೆ ಸಾಧ್ಯತೆ ಇರುತ್ತದೆ.

ಚಳಿಗಾಲ

ಚಳಿಗಾಲದ ಅವಧಿಯಲ್ಲಿ ಇಲ್ಲಿನ ತಾಪಮಾನ ಸುಮಾರು 20 ರಿಂದ 30 ಡಿಗ್ರಿಯ ತನಕ ಬರುತ್ತದೆ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನಿಡುವುದು ಅತ್ಯಂತ ಸೂಕ್ತವಾಗಿದೆ. ಈ ಅವಧಿ ಡಿಸೆಂಬರ್ ನಿಂದ ಫೆಬ್ರವರಿ ತನಕ ಇರುತ್ತದೆ.