ತಿರುಮನಂಚೇರಿಗೆ ರಸ್ತೆ ಮಾರ್ಗವಾಗಿ ತಲುಪುವ ಉತ್ತಮವಾದ ಆಯ್ಕೆ ಎಂದರೆ ಚೆನ್ನೈನಿಂದ ಸಾಗುವುದು. ಇದು 300 ಕಿ.ಮೀ ಗಳಾಗುತ್ತದೆ. ಇಲ್ಲಿನ ರಸ್ತೆಗಳ ಉತ್ತಮ ಗುಣಮಟ್ಟದಿಂದಾಗಿ ತಿರುಮನಂಚೇರಿಗೆ ನೀವು ಐದು ಘಂಟೆ ಮೂವತ್ತು ನಿಮಿಷಗಳಲ್ಲಿ ಸಾಗಬಹುದಾಗಿದೆ. ಬೆಂಗಳೂರಿನಿಂದ ತಿರುಮನಂಚೇರಿಗೆ ದೂರ 430 ಕಿ.ಮೀ ಗಳಾಗುತ್ತದೆ ಹಾಗೂ ಈ ದೂರ ಕ್ರಮಿಸಲು ಎಂಟು ಘಂಟೆಗಳು ಬೇಕಾಗಿವೆ. ರಾಜ್ಯ ಸಾರಿಗೆ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ಸೇವೆಗಳು ಲಭ್ಯವಿವೆ.